ETV Bharat / bharat

60 ಸೆಕೆಂಡ್​ಗಳಲ್ಲಿ ಬಸ್​ನಲ್ಲಿನ ಬೆಂಕಿ ನಿಗ್ರಹ ತಂತ್ರಜ್ಞಾನ: ಡಿಆರ್​ಡಿಒ ತಂಡ ಶ್ಲಾಘಿಸಿದ ಗಡ್ಕರಿ! - ಬಸ್​ನಲ್ಲಿನ ಬೆಂಕಿ ನಿಗ್ರಹ ಮಾಡುವ ತಂತ್ರಜ್ಞಾನ ಸುದ್ದಿ

ಬಸ್​ಗಳಲ್ಲಿ ಸಂಭವಿಸುವ ಬೆಂಕಿ ಅನಾಹುತ ತಪ್ಪಿಸಲು ಡಿಆರ್​ಡಿಒ ಹೊಸ ತಂತ್ರಜ್ಞಾನ ಕಂಡು ಹಿಡಿದಿದ್ದು, ಅದಕ್ಕಾಗಿ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

Gadkari congratulates DRDO
Gadkari congratulates DRDO
author img

By

Published : Nov 9, 2020, 7:37 PM IST

Updated : Nov 9, 2020, 8:07 PM IST

ನವದೆಹಲಿ: ಬಸ್​ಗಳಲ್ಲಿ ಪ್ರಯಾಣ ಮಾಡುತ್ತಿರುವಾಗ ದಿಢೀರ್​ ಬೆಂಕಿ ಕಾಣಿಸಿಕೊಂಡ ಸಂದರ್ಭಗಳಲ್ಲಿ ಅದನ್ನ ನಿಗ್ರಹಿಸಲು ಡಿಆರ್​ಡಿಒ ಹೊಸ ತಂತ್ರಜ್ಞಾನ ಕಂಡು ಹಿಡಿದ್ದಿದ್ದು, ಅದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತೀಶ್​ ಗಡ್ಕರಿ ಅಭಿನಂದನೆ ಸಲ್ಲಿಸಿದ್ದಾರೆ.

  • I congratulate team @DRDO_India for developing this important product. For us, life of every Indian is important. If it is adopted in passenger buses, especially school buses and long haul sleeper buses, it will make bus rides safer.

    — Nitin Gadkari (@nitin_gadkari) November 9, 2020 " class="align-text-top noRightClick twitterSection" data=" ">

ಡಿಫೆನ್ಸ್ ರಿಸರ್ಚ್ ಹಾಗೂ ಡೆವೆಲೆಪ್​​ಮೆಂಟ್​ ಆರ್ಗನೈಸೇಷನ್(ಡಿಆರ್​ಡಿಒ) ಹೊಸ ತಂತ್ರಜ್ಞಾನ ಕಂಡು ಹಿಡಿದಿದ್ದು, ಇದರ ಪ್ರಕಾರ ಬಸ್​​ಗಳಲ್ಲಿ ಕಾಣಿಸಿಕೊಳ್ಳುವ ಬೆಂಕಿಯನ್ನ ಕೇವಲ 30 ಸೆಕೆಂಡುಗಳಲ್ಲಿ ಪತ್ತೆ ಹಚ್ಚಿ 60 ಸೆಕೆಂಡುಗಳಲ್ಲಿ ನಿಗ್ರಹಿಸುತ್ತದೆ. ಈ ವಿಶಿಷ್ಟ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್​ಡಿಒ) ತಂಡವನ್ನ ಅಭಿನಂದಿಸಿದ್ದಾರೆ.

ಡಿಆರ್​ಡಿಒ ತಂತ್ರಜ್ಞಾನ ವೀಕ್ಷಣೆ ಮಾಡಿದ ಗಡ್ಕರಿ-ರಾಜನಾಥ್​ ಸಿಂಗ್​

ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರೊಂದಿಗೆ ಇದರ ವೀಕ್ಷಣೆ ಮಾಡಿರುವ ನಿತಿನ್​ ಗಡ್ಕರಿ ತದನಂತರ ಟ್ವೀಟ್ ಮಾಡಿದ್ದಾರೆ. ಮಾನವರ ಜೀವನ ರಕ್ಷಣೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿರುವ ಗಡ್ಕರಿ, ನಮಗೆ ಪ್ರತಿಯೊಬ್ಬ ಭಾರತೀಯನ ಜೀವನವೂ ಮುಖ್ಯವಾಗಿದ. ಪ್ರಮುಖವಾಗಿ ಬಸ್​ಗಳಲ್ಲಿ, ಅದರಲ್ಲೂ ವಿಶೇಷವಾಗಿ ಶಾಲಾ ಬಸ್​ಗಳಲ್ಲಿ ಪ್ರಯಾಣಿಸುತ್ತಿದ್ದಾಗ ಸಂಭವಿಸುವ ಅವಘಡ ತಪ್ಪಿಸಲು ಈ ತಂತ್ರಜ್ಞಾನ ತುಂಬಾ ಸಹಕಾರಿಯಾಗಿದೆ ಎಂದಿದ್ದಾರೆ.

Last Updated : Nov 9, 2020, 8:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.