ETV Bharat / bharat

ಗಡ್ಚಿರೋಲಿ: ಮೋಸ್ಟ್ ವಾಂಟೆಡ್ ಮಿಲಿಂದ್ ತೇಲ್ತುಂಬ್ಡೆ ಸೇರಿ 26 ನಕ್ಸಲರ ಹತ್ಯೆ - ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ

ಗಡ್ಚಿರೋಲಿ ಜಿಲ್ಲೆಯಲ್ಲಿ ಶನಿವಾರ ಪೊಲೀಸರು ನಡೆಸಿದ ಎನ್​ ಕೌಂಟರ್​ನಲ್ಲಿ ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆಯನ್ನು (Top Maoist commander Milind Teltumbde) ಹತ್ಯೆ ಮಾಡಲಾಗಿದೆ ಎಂದು ಗಡ್ಚಿರೋಲಿ ಪೊಲೀಸರು ತಿಳಿಸಿದ್ದಾರೆ.

ಮಿಲಿಂದ್ ತೇಲ್ತುಂಬ್ಡೆ
ಮಿಲಿಂದ್ ತೇಲ್ತುಂಬ್ಡೆ
author img

By

Published : Nov 14, 2021, 11:15 AM IST

Updated : Nov 14, 2021, 1:23 PM IST

ಮಹಾರಾಷ್ಟ್ರ: ಗಡ್ಚಿರೋಲಿ (Gadchiroli encounter) ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ಪೊಲೀಸ್ ದಳವು ಶನಿವಾರ ನಡೆಸಿದ ಎನ್​ಕೌಂಟರ್​ನಲ್ಲಿ ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆಯನ್ನು ಕೊಲ್ಲಲಾಗಿದೆ. ಇದೇ ವೇಳೆ ಒಟ್ಟು 26 ನಕ್ಸಲರನ್ನು ಪೊಲೀಸರು ಹತ್ಯೆಗೈದಿದ್ದಾರೆ.

ಮಿಲಿಂದ್ ತೇಲ್ತುಂಬ್ಡೆ (Milind Teltumbde) ಮಾವೋವಾದಿ ಸಂಘಟನೆಯ (Maoist Organization) ಕೇಂದ್ರ ವಲಯ ಸಮಿತಿಯ ಸದಸ್ಯನಾಗಿದ್ದ. ಇದರ ಜೊತೆಗೆ, ನಿಷೇಧಿತ ಮಾವೋವಾದಿ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿಯೂ ಆಗಿದ್ದ. ಮಹಾರಾಷ್ಟ್ರ, ಛತ್ತೀಸ್‌ಗಢ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಸೇರಿದಂತೆ 6 ರಾಜ್ಯಗಳಲ್ಲಿ ಸಕ್ರಿಯವಾಗಿ ನಕ್ಸಲ್​ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಈತ ದೇಶಾದ್ಯಂತ ನಕ್ಸಲ್ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎಂಜಿನಿಯರಿಂಗ್‌ ಓದಿದ್ದ ನಕ್ಸಲ್‌ ನಾಯಕ:

ಮೂಲತಃ ಯವತ್ಮಾಲ್ ಜಿಲ್ಲೆಯ (Yavatmal District) ವಾನಿ ತಾಲೂಕಿನ ರಾಜೂರ್ ನಿವಾಸಿಯಾಗಿರುವ ತೇಲ್ತುಂಬ್ಡೆ, ನಕ್ಸಲ್ ಚಳವಳಿಯಲ್ಲಿ ಸಹ್ಯಾದ್ರಿ, ದೀಪಕ್ ಮೊದಲಾದ ಅಡ್ಡಹೆಸರುಗಳಿಂದ ಪರಿಚಿತನಾಗಿದ್ದ. ಎಂಜಿನಿಯರಿಂಗ್ ಓದಿರುವ ಈತ, ಕಳೆದ 30 ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ.

ಶನಿವಾರ ನಡೆದ ಎನ್​ಕೌಂಟರ್​ನಲ್ಲಿ ಪೊಲೀಸರು ತೇಲ್ತುಂಬ್ಡೆ ಸೇರಿದಂತೆ 26 ನಕ್ಸಲರನ್ನು ಹೊಡೆದುರುಳಿಸಿದ್ದಾರೆ. ಕಳೆದ 2018ರ ಏಪ್ರಿಲ್ 22 ರಂದು ಭಮ್ರಗಡ ತಾಲೂಕಿನ ಕಸನಸೂರು ಮತ್ತು ದಾಮರ್ ನಡುವೆ ನಡೆದ ಪೊಲೀಸ್​ ಕಾರ್ಯಾಚರಣೆಯಲ್ಲಿ ಒಟ್ಟು 40 ನಕ್ಸಲರನ್ನು ಕೊಲ್ಲಲಾಗಿತ್ತು.

ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಲ್ಸೆ ಪಾಟೀಲ್ ಪ್ರತಿಕ್ರಿಯೆ:

ನಿನ್ನೆ ಗಡ್ಚಿರೋಲಿಯಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ 26 ಮಂದಿ ನಕ್ಸಲರು ಹತ್ಯೆಯಾಗಿದ್ದರು. ಈ ಪೈಕಿ 20 ಪುರುಷರು ಹಾಗು 6 ಮಂದಿ ಮಹಿಳೆಯರು ಸೇರಿದ್ದಾರೆ. ಇದರಲ್ಲಿ ಮೋಸ್ಟ್‌ ವಾಂಟೆಡ್‌ ನಕ್ಸಲ್‌ ತೇಲ್ತುಂಬ್ಡೆ ಹತನಾಗಿದ್ದಾನೆ. ಈತ ನಮಗೆ ಬೇಕಿದ್ದ ಪ್ರಮುಖ ನಕ್ಸಲ್ ಕಮಾಂಡರ್‌ ಮತ್ತು ಭೀಮಾ ಕೊರೆಗಾಂವ್‌ ಪ್ರಕರಣದ ಆರೋಪಿಯೂ ಹೌದು ಎಂದು ಗೃಹ ಸಚಿವ ದಿಲೀಪ್ ವಲ್ಸೆ ತಿಳಿಸಿದ್ದಾರೆ.

Last Updated : Nov 14, 2021, 1:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.