ETV Bharat / bharat

ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ G20 2023 ಶೃಂಗಸಭೆ - G20 2023 Summit

ಆಂಧ್ರಪ್ರದೇಶದ ವಿಶಾಖಪಟ್ಟಣ ನಗರದಲ್ಲಿ ಇಂದು ಮತ್ತು ನಾಳೆ G20 2023 ಶೃಂಗಸಭೆ ಸಭೆ ನಡೆಯುತ್ತಿದೆ.

G20 2023
G20 2023 ಶೃಂಗಸಭೆ
author img

By

Published : Mar 28, 2023, 6:17 PM IST

ವಿಶಾಖಪಟ್ಟಣ (ಆಂಧ್ರಪ್ರದೇಶ): ಆಂಧ್ರ ಪ್ರದೇಶದ ಪ್ರಮುಖ ಜಿಲ್ಲೆಯಾದ ವಿಶಾಖಪಟ್ಟಣ ನಗರದಲ್ಲಿ ಇಂದಿನಿಂದ ಜಿ20 2023 ಶೃಂಗಸಭೆಯ ಸಭೆಗಳು ಆರಂಭಗೊಂಡಿವೆ. ಈ ಜಾಗತಿಕ ಸಮ್ಮೇಳನಕ್ಕೆ ಜಗತ್ತಿನಾದ್ಯಂತ ಜಿ20 ರಾಷ್ಟ್ರಗಳ ಪ್ರತಿನಿಧಿಗಳು ನಗರಕ್ಕೆ ಆಗಮಿಸಿದ್ದಾರೆ. ಇಂದು ಬೆಳಗ್ಗೆ 9.30ರಿಂದ ಸಭೆಗಳು ಪ್ರಾರಂಭವಾಗಿದ್ದು, ಜಿ20 ಪ್ರತಿನಿಧಿಗಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನೂ ಸಹ ಆಯೋಜಿಸಲಾಗಿದ್ದು, ನಾಳೆ ಕೂಡ ಸಭೆಗಳು ಮತ್ತು ಕಾರ್ಯಕ್ರಮಗಳು ನಡೆಯಲಿವೆ.

ಈ ಬಾರಿ 3 ಶೃಂಗಸಭೆಯ ಅಧ್ಯಕ್ಷೆಯನ್ನು ಭಾರತ ವಹಿಸಿಕೊಂಡಿದೆ. ಹಾಗಾಗಿ ರಾಷ್ಟ್ರವು ದೇಶದ 50 ಪ್ರಮುಖ ನಗರಗಳಲ್ಲಿ ಶೃಂಗಸಭೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಗಳು ಮತ್ತು ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವಿಶಾಖಪಟ್ಟಣವೂ ಸಹ ಸೇರಿದೆ. ಇಲ್ಲಿನ ಮುಡಸರಲೋವ, ಕಾಪುಲುಪ್ಪದ ಮತ್ತು ಬೀಚ್ ರಸ್ತೆಗಳಂತಹ ನಗರದ ಸಾಂಪ್ರದಾಯಿಕ, ವಿಶಿಷ್ಟ ಸ್ಥಳಗಳಿಗೆ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಭೇಟಿ ನೀಡಿ ವೀಕ್ಷಿಸಲಿದ್ದಾರೆ.

G20 2023
G20 2023 ಶೃಂಗಸಭೆ

300 ಅತಿಥಿಗಳು, 3000 ಸ್ವಯಂಸೇವಕರು: ಪ್ರಪಂಚದಾದ್ಯಂತ ಮತ್ತು ಸುಮಾರು 300 ಪ್ರತಿನಿಧಿಗಳು ಈ ಜಿ20 ಸಮ್ಮೇಳನ ಸಭೆಗಾಗಿ ಭೇಟಿ ನೀಡಿದ್ದಾರೆ. ಇದರಿಂದ ನಗರದಾದ್ಯಂತ ವಿವಿಧ ವ್ಯವಸ್ಥೆಗಳನ್ನು ರಾಜ್ಯ ಸರ್ಕಾರ ಮಾಡಿದೆ. ಜೊತೆಗೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಆರು ಪ್ರದೇಶಗಳನ್ನು ತಾತ್ಕಾಲಿಕ ಕೆಂಪು ವಲಯಗಳಾಗಿ (ರೆಡ್​ ಜೋನ್​) ಘೋಷಿಸಿದ್ದಾರೆ. 2,500 ಸಿಬ್ಬಂದಿಯನ್ನು ಭದ್ರತಾ ವ್ಯವಸ್ಥೆಗಳಿಗೆ ನಿಯೋಜಿಸಲಾಗಿದೆ.

ಜೊತೆಗೆ ಪ್ರತಿನಿಧಿಗಳಿಗೆ ಮಾರ್ಗದರ್ಶನ ನೀಡಲು ಮತ್ತು ಸೇವೆ ನೀಡಲು ಸರ್ಕಾರ 3,000 ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಸಮ್ಮೇಳನಕ್ಕಾಗಿ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಅತಿಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಹಾಯಕರು ಮತ್ತು ಇತರರು ಬೇರೆಡೆ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

G20 2023
G20 2023 ಶೃಂಗಸಭೆ

ಇದನ್ನೂ ಓದಿ: ಚೀನಾ ಪೌರೋಹಿತ್ಯದಲ್ಲಿ ಹಗೆತನ ಮರೆತು ಇರಾನ್​-ಸೌದಿ ದೋಸ್ತಿ: ಭಾರತದ ಮೇಲೆ ಪ್ರಭಾವವೇನು?

ಮತ್ತೊಂದೆಡೆ, ಶೃಂಗಸಭೆಗಳಿಗಾಗಿ ಕೇಂದ್ರ ವಿದೇಶಾಂಗ ಸಚಿವಾಲಯವು ನಿರಂತರವಾಗಿ ಶ್ರಮಿಸುತ್ತಿದೆ. ಕಾರ್ಯಕ್ರಮದ ವ್ಯವಸ್ಥೆ ಮೇಲೆ ವಿದೇಶಾಂಗ ಇಲಾಖೆಯು ಮೇಲುಸ್ತುವಾರಿ ವಹಿಸಿಕೊಂಡಿದೆ. ಕೇಂದ್ರ ಸರ್ಕಾರದ ಕೆಲವು ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳಿಗೂ ಜವಾಬ್ದಾರಿ ವಹಿಸಲಾಗಿದೆ. ರಾಜ್ಯ ಸರ್ಕಾರ ಕೂಡ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡಿದೆ. ಸಚಿವರಾದ ಸುರೇಶ್, ವಿಡದಾಳ ರಜಿನಿ, ಆರ್.ಕೆ. ರೋಜಾ, ಬೋತ್ಸಾ ಸತ್ಯನಾರಾಯಣ, ದಾಡಿಶೆಟ್ಟಿರಾಜ, ಧರ್ಮಣ್ಣ ಪ್ರಸಾದ ರಾವ್ ಶೃಂಗಸಭೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ರಾಜ್ಯಪಾಲರು, ಸಿಎಂ ಭಾಗಿ: ಮತ್ತೊಂದೆಡೆ, ರಾಜ್ಯಪಾಲ ಅಬ್ದುಲ್ ನಜೀರ್ ಹಾಗೂ ಸಿಎಂ ಜಗನ್ ಮೋಹನ್​ ರೆಡ್ಡಿ ಕೂಡ ಈ ಶೃಂಗಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದ ಪ್ರತಿನಿಧಿಗಳು ಮತ್ತು ಅತಿಥಿಗಳಿಗೆ ರಾಜ್ಯ ಸರ್ಕಾರವು ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಔತಣಕೂಟ ಆಯೋಜಿಸಿದ್ದು, ಇದರಲ್ಲಿ ರಾಜ್ಯಪಾಲರು ಮತ್ತು ಸಿಎಂ ಭಾಗವಹಿಸಲಿದ್ದಾರೆ. 29ರಂದು ಬೆಳಗ್ಗೆ ರಾಜ್ಯಪಾಲರು ವಿಜಯವಾಡಕ್ಕೆ ವಾಪಸಾಗಲಿದ್ದಾರೆ.

ಇದನ್ನೂ ಓದಿ: ಪ್ರಬಲ ಹೋರಾಟಕ್ಕೆ ಸಿದ್ಧರಾಗಿರಿ: ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.