ETV Bharat / bharat

ಬರ್ತ್​​ಡೇ ಪಾರ್ಟಿಯಲ್ಲಿ ಗೆಳೆಯರಿಂದಲೇ ಯುವಕನ ಕೊಲೆ: ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಮಹೀಂದ್ರಾ ಪಾರ್ಕ್ ಪೊಲೀಸ್ ಠಾಣೆ ಸುದ್ದಿ

ಹುಟ್ಟುಹಬ್ಬದ ಆಚರಣೆ ವೇಳೆ ಯುವಕನೊಬ್ಬನನ್ನು ಗೆಳೆಯರೇ ಥಳಿಸಿ, ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

delhi crime
ಗೆಳೆಯರಿಂದಲೇ ಯುವಕನ ಕೊಲೆ
author img

By

Published : Jan 25, 2021, 6:53 AM IST

Updated : Jan 25, 2021, 11:13 AM IST

ನವದೆಹಲಿ: ಹುಟ್ಟುಹಬ್ಬ ಆಚರಣೆ ವೇಳೆ ಯುವಕನೊಬ್ಬನನ್ನು ಗೆಳೆಯರೇ ಥಳಿಸಿ, ಕೊಲೆ ಮಾಡಿರುವ ಘಟನೆ ಇಲ್ಲಿನ ಮಹೇಂದ್ರ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಹೀಂದ್ರಾ ಪಾರ್ಕ್ ಪೊಲೀಸ್ ಠಾಣೆ ಪ್ರದೇಶದ ಜಹಾಂಗೀರ್‌ಪುರಿ ಐ ಬ್ಲಾಕ್‌ನಲ್ಲಿ ರಾಹುಲ್​ ಎಂಬಾತನ ಶವ ಪತ್ತೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಮನೋಜ್, ಆತನ ಸಹೋದರ ಮನೀಶ್, ಅಕ್ಷಯ್ ಮತ್ತು ಅಂಕಿತ್ ಎಂಬವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಆರೋಪಿಗಳು ಘಟನೆ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.

ರಾಹುಲ್​ ತನ್ನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಗೆಳೆಯರನ್ನು ಪಾರ್ಟಿಗೆ ಕರೆದಿದ್ದ. ಈ ವೇಳೆ ಮದ್ಯದ ವಿಚಾರದಲ್ಲಿ ಗೆಳೆಯರ ನಡುವೆ ಗಲಾಟೆ ನಡೆದು ರಾಹುಲ್​ಗೆ ಕಪಾಳಮೋಕ್ಷ ಮಾಡಿದ್ದಾರೆ. ಇದಾದ ಬಳಿಕ ಥಳಿಸಿ ಆತನನ್ನು ಕೊಲೆ ಮಾಡಿದ್ದಾರೆ. ಇನ್ನು ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗೆಳೆಯರಿಂದಲೇ ಯುವಕನ ಕೊಲೆ

ಘಟನೆ ನಡೆದ 12 ಗಂಟೆಯೊಳಗೆ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಇನ್ನು ಗಾಯಗೊಂಡಿದ್ದ ರಾಹುಲ್​ನನ್ನು ಸ್ಥಳೀಯರು ಬಾಬು ಜಗಜೀವನ್​​ ರಾಮ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆತ ಅದಾಗಲೇ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

Last Updated : Jan 25, 2021, 11:13 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.