ETV Bharat / bharat

ಹೈದರಾಬಾದ್​ನಲ್ಲಿ ಫ್ರೆಂಚ್ ಏರೋಸ್ಪೇಸ್ ಮೇಜರ್ ಸಫ್ರಾನ್ ಕಂಪನಿ ಉದ್ಘಾಟಿಸಿದ ಕೆಟಿಆರ್​ - ಹೈದರಾಬಾದ್​ನಲ್ಲಿ ಸಫ್ರಾನ್​ ಕಂಪನಿ ಪ್ರಾರಂಭ

ಎಂಜಿನ್ ಎಂಆರ್‌ಒ ಸ್ಥಾಪಿಸುವ-ಹೈದರಾಬಾದ್‌ನಲ್ಲಿ ಫ್ರೆಂಚ್ ಏರೋಸ್ಪೇಸ್ ಮೇಜರ್ ಸಫ್ರಾನ್ ಕಂಪನಿ ಉದ್ಘಾಟಿಸಿದ ಕೆಟಿಆರ್​- ಸಾವಿರಾರು ಉದ್ಯೋಗಗಳ ಸೃಷ್ಟಿಗೆ ಸಹಕಾರಿ

French Aerospace major Safran to set up engine MRO in Hyderabad  saffron launch in Hyderabad  saffron launch by KTR in Hyderabad  ಹೈದರಾಬಾದ್​ನಲ್ಲಿ ಫ್ರೆಂಚ್ ಏರೋಸ್ಪೇಸ್ ಮೇಜರ್ ಸಫ್ರಾನ್ ಕಂಪನಿ ಉದ್ಘಾಟಿಸಿದ ಕೆಟಿಆರ್​ ಹೈದರಾಬಾದ್​ನಲ್ಲಿ ಸಫ್ರಾನ್​ ಕಂಪನಿ ಪ್ರಾರಂಭ  ಸಫ್ರಾನ್​ ಕಂಪನಿ ಉದ್ಘಾಟಿಸಿದ ಕೆಟಿಆರ್​
ಹೈದರಾಬಾದ್
author img

By

Published : Jul 7, 2022, 2:21 PM IST

ಹೈದರಾಬಾದ್(ತೆಲಂಗಾಣ)​: ಫ್ರೆಂಚ್ ಏರೋಸ್ಪೇಸ್ ಮೇಜರ್ ಸಫ್ರಾನ್ ಬುಧವಾರ ತನ್ನ ಅತಿದೊಡ್ಡ ಮತ್ತು ಮೊದಲ ವಿಮಾನ ಎಂಜಿನ್ MRO (ನಿರ್ವಹಣೆ, ದುರಸ್ತಿ, ಕೂಲಂಕುಷ ಪರೀಕ್ಷೆ) ಸೌಲಭ್ಯವನ್ನು ಹೈದರಾಬಾದ್​ನಲ್ಲಿ ಸ್ಥಾಪಿಸುವುದಾಗಿ ಘೋಷಿಸಿತು. 1,200 ಕೋಟಿ (USD 150 ಮಿಲಿಯನ್) ರೂ.ಗಳ ಹೂಡಿಕೆಯಲ್ಲಿ ಈ ಸೌಲಭ್ಯವನ್ನು ಸ್ಥಾಪಿಸಲಾಗುವುದು ಮತ್ತು ರಾಜ್ಯದಲ್ಲಿ ಸುಮಾರು 1,000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ತೆಲಂಗಾಣ ವಾಯುಯಾನ ಪರಿಸರ ವ್ಯವಸ್ಥೆಗೆ ಎಂಆರ್​ಒ ಉತ್ತೇಜನ ನೀಡಲಿದೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಕಂಪನಿ ತಿಳಿಸಿದೆ.

ಸಫ್ರಾನ್ ಗ್ರೂಪ್ ತನ್ನ ಎಂಆರ್‌ಒ ಸ್ಥಾಪನೆಗಾಗಿ ಹೈದರಾಬಾದ್​ ನಗರವನ್ನು ಆಯ್ಕೆ ಮಾಡುವ ನಿರ್ಧಾರವನ್ನು ತೆಲಂಗಾಣ ಐಟಿ ಮತ್ತು ಕೈಗಾರಿಕೆಗಳ ಸಚಿವ ಕೆಟಿ ರಾಮರಾವ್ ಸ್ವಾಗತಿಸಿದ್ದಾರೆ. ಇದು ಭಾರತೀಯ ಮತ್ತು ವಿದೇಶಿ ವಾಣಿಜ್ಯ ವಿಮಾನಯಾನ ಸಂಸ್ಥೆಗಳು ಬಳಸುವ ತನ್ನ ಮಾರುಕಟ್ಟೆ-ಪ್ರಮುಖ ಲೀಪ್ 1A ಮತ್ತು ಲೀಪ್ 1B ಏರೋ-ಎಂಜಿನ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ ಎಂದರು.

ಓದಿ: ಸಫ್ರಾನ್​ ಗ್ರೂಪ್​​ ಕಂಪನಿಗೆ ರಾಜನಾಥ್ ಸಿಂಗ್​​ ಭೇಟಿ: ರಫೇಲ್​​ ಬಗ್ಗೆ ಮಾಹಿತಿ ಪಡೆದ ರಕ್ಷಣಾ ಸಚಿವ

ಇತ್ತೀಚೆಗೆ, ಸಫ್ರಾನ್​ ಇಲ್ಲಿ ಎರಡು ಮೆಗಾ ಏರೋಸ್ಪೇಸ್ ಪ್ರಾಜೆಕ್ಟ್‌ಗಳನ್ನು ಅನುಕ್ರಮವಾಗಿ ಸ್ಥಾಪಿಸಿದೆ. ಸಫ್ರಾನ್ ಎಲೆಕ್ಟ್ರಿಕಲ್ ಮತ್ತು ಪವರ್ ಫ್ಯಾಕ್ಟರಿ ಉತ್ಪಾದಿಸುವ ಎಂಜಿನ್ ವೈರ್​ ಹಾರ್ನೆಸ್​ ಮತ್ತು ಸಫ್ರಾನ್ ಏರ್‌ಕ್ರಾಫ್ಟ್ ಎಂಜಿನ್ ಫ್ಯಾಕ್ಟರಿ ಲೀಪ್ ಎಂಜಿನ್‌ಗಳಿಗೆ ನಿರ್ಣಾಯಕ ಏರೋ-ಎಂಜಿನ್ ಭಾಗಗಳನ್ನು ತಯಾರಿಸುತ್ತಿದೆ.

ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಈ ಎರಡೂ ಕಾರ್ಖಾನೆಗಳನ್ನು ಸಚಿವ ಕೆ ಟಿ ರಾಮರಾವ್ ಇಂದು ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಸಫ್ರಾನ್ ಗ್ರೂಪ್ ಸಿಇಒ ಒಲಿವಿಯರ್ ಆಂಡ್ರೀಸ್ ಮತ್ತು ಸಫ್ರಾನ್ ಏರ್‌ಕ್ರಾಫ್ಟ್ ಇಂಜಿನ್ ಸಿಇಒ ಜೀನ್ ಪಾಲ್ ಅಲರಿ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.