ETV Bharat / bharat

ಅಗಲಿದ ಸಹೋದರಿಯ ನೆನಪು.. ರಕ್ಷಾ ಬಂಧನದಂದು ಮಹಿಳೆಯರಿಗೆ ಉಚಿತ ಆಟೋ ಸೇವೆ ಸಲ್ಲಿಸುವ ಚಾಲಕ - ಮಹಿಳಾ ಪ್ರಯಾಣಿಕರಿಗೆ ಉಚಿತ ಸವಾರಿ

ಜೋಧಪುರದಲ್ಲಿನ ವ್ಯಕ್ತಿಯೊಬ್ಬರು ತನ್ನ ದಿವಂಗತ ಸಹೋದರಿಯ ನೆನಪಿಗಾಗಿ ಮಹಿಳೆಯರಿಗೆ ಉಚಿತ ಆಟೋ ಸೇವೆಯನ್ನು ನೀಡುತ್ತಾ ಬಂದಿದ್ದಾರೆ.

ರಕ್ಷಾಬಂಧನದಂದು ಮಹಿಳೆಯರಿಗೆ ಉಚಿತ ಆಟೋ ಸೇವೆ
ರಕ್ಷಾಬಂಧನದಂದು ಮಹಿಳೆಯರಿಗೆ ಉಚಿತ ಆಟೋ ಸೇವೆ
author img

By ETV Bharat Karnataka Team

Published : Aug 30, 2023, 7:37 PM IST

ರಕ್ಷಾಬಂಧನದಂದು ಮಹಿಳೆಯರಿಗೆ ಉಚಿತ ಆಟೋ ಸೇವೆ

ಜೋಧಪುರ (ರಾಜಸ್ಥಾನ) : ಅಣ್ಣ-ತಂಗಿಯರ ನಡುವಿನ ಬಾಂಧವ್ಯವನ್ನು ಬಿಂಬಿಸುವ ರಕ್ಷಾ ಬಂಧನ ಹಬ್ಬವನ್ನು ಆಟೋ ಚಾಲಕರೊಬ್ಬರು ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದಾರೆ. ದಿವಂಗತ ಸಹೋದರಿಯ ನೆನಪಿಗಾಗಿ, ಅವರು ಪ್ರತಿ ವರ್ಷ ರಕ್ಷಾ ಬಂಧನದಂದು ಮಹಿಳಾ ಪ್ರಯಾಣಿಕರಿಗೆ ಉಚಿತ ಸೇವೆಯನ್ನು ಒದಗಿಸುತ್ತ ಬಂದಿದ್ದಾರೆ.

ಈ ಸೇವೆಯನ್ನು ನೀಡುತ್ತಿರುವವರ ಹೆಸರು ಧನರಾಜ್​ ದಧಿಚ್​. ಇವರು ಕಳೆದ ಏಳು ವರ್ಷದಿಂದಲೂ ರಕ್ಷಾಬಂಧನ ದಿನದಂದು ಈ ರೀತಿಯ ಸೇವೆಯನ್ನು ನೀಡುತ್ತಾರೆ. ತಮ್ಮ ಆಟೋದ ಹಿಂದೆ ಉಚಿತ ಸೇವೆಯ ಬ್ಯಾನರ್​​ಗಳನ್ನು ಸಹ ಅಂಟಿಸಿಕೊಂಡಿದ್ದಾರೆ.

ಅಲ್ಲದೇ ತಮ್ಮ ಕಾರ್ಯದ ಬಗ್ಗೆ ಫೇಸ್‌ಬುಕ್ ಪುಟದಲ್ಲಿ ತಿಳಿಸುವುದರ ಜೊತೆಗೆ ತಮ್ಮ ಮೊಬೈಲ್ ಸಂಖ್ಯೆಗಳನ್ನು ಅದರಲ್ಲಿ ಬರೆದುಕೊಂಡಿದ್ದಾರೆ. ಇದರಿಂದ ಯಾವುದೇ ಮಹಿಳೆ ಅವರನ್ನು ಸಂಪರ್ಕಿಸಬಹುದು ಮತ್ತು ಅವರ ಸೇವೆಯನ್ನು ಪಡೆಯಲು ಸುಲಭವಾಗಲಿದೆ.

ಈ ಬಗ್ಗೆ ಧನರಾಜ್ ದಾಧಿಚ್ ಅವರು ಪ್ರತಿಕ್ರಿಯಿಸಿದ್ದು, ''ತನ್ನ ಏಕೈಕ ಸಹೋದರಿ ಬೇಬಿ ಕೆಲವು ವರ್ಷಗಳ ಹಿಂದೆ ನಿಧನರಾದರು. ಅವಳು ನಮ್ಮ ಕುಟುಂಬದ ಒಬ್ಬಳೇ ಮಗಳಾಗಿದ್ದಳು. ಪ್ರತಿ ವರ್ಷ ಈ ದಿನದಂದು ನಾನು ಅವಳನ್ನು ಹೆಚ್ಚು ಕಳೆದುಕೊಳ್ಳುತ್ತೇನೆಂದು ಅನ್ನಿಸುತ್ತದೆ. ಹಾಗಾಗಿ ಆಕೆಗೆ ಶ್ರದ್ಧಾಂಜಲಿ ಅರ್ಪಿಸಲು ರಕ್ಷಾಬಂಧನದ ಸಂದರ್ಭದಲ್ಲಿ ಎಲ್ಲಾ ಸಹೋದರಿಯರಿಗೆ ಬೆಳಗ್ಗೆ 10:00 ರಿಂದ ಸಂಜೆ 5:00 ರ ವರೆಗೆ ಉಚಿತ ಆಟೋ ಸೇವೆಯನ್ನು ನೀಡುತ್ತಿದ್ದೇನೆ.

ಆದರೆ, ಇಂದು ಬೆಳಗ್ಗೆ 7 ಗಂಟೆಯಿಂದಲೇ ಕರೆಗಳು ಬರಲಾರಂಭಿಸಿವೆ. ನಾನು ಸಹೋದರಿಯರನ್ನು ಅವರವರ ಸಹೋದರರ ಮನೆಗೆ ಡ್ರಾಪ್ ಮಾಡಿದಾಗ ಅವರು ನನಗೆ ಧನ್ಯವಾದ ಹೇಳುತ್ತಾರೆ. ಈ ಸಂದರ್ಭದಲ್ಲಿ ನನ್ನ ತಂಗಿ ನೆನಪಾಗುತ್ತಾಳೆ'' ಎಂದರು.

ಧನರಾಜ್ ಈ ದಿನದಂದು ಪ್ರತಿಯೊಬ್ಬ ಮಹಿಳೆಯರಲ್ಲಿ ತನ್ನ ಸಹೋದರಿಯನ್ನು ಕಂಡು, ಅವರಿಗೆ ಉಚಿತ ಸೇವೆ ಒದಗಿಸುತ್ತಾರೆ. ಈ ಮೂಲಕ ಧನರಾಜ್​ ತಮ್ಮ ಸಹೋದರಿಯನ್ನು ಎಂದೆಂದಿಗೂ ಸ್ಮರಿಸುವುದು ಅವರ ಬಾಂಧವ್ಯ ಹೇಗಿತ್ತು ಎಂಬುದಕ್ಕೆ ನಿದರ್ಶನವಾಗಿದೆ.

ಯೋಧರಿಗೆ ರಾಖಿ ಕಟ್ಟಿ ಸಂಭ್ರಮಿಸಿದ ಮಕ್ಕಳು: ಮತ್ತೊಂದೆಡೆ ಜಮ್ಮು ಕಾಶ್ಮೀರದಲ್ಲಿ ರಕ್ಷಾ ಬಂಧನದ ಸಂಭ್ರಮ ಮನೆ ಮಾಡಿದೆ. ತಮ್ಮ ಒಡಹುಟ್ಟಿದವರಿಂದ ದೂರವಿದ್ದು, ಗಡಿಯಲ್ಲಿ ನಿಯೋಜಿಸಲಾದ ಭದ್ರತಾ ಪಡೆ ಸಿಬ್ಬಂದಿಗೆ ಸ್ಥಳೀಯ ಶಾಲಾ ವಿದ್ಯಾರ್ಥಿನಿಯರು ರಾಖಿ ಕಟ್ಟುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಇಲ್ಲಿನ ಅಖ್ನೂರ್ ಸೆಕ್ಟರ್‌ನಲ್ಲಿ ಶಾಲಾ ಬಾಲಕಿಯರು ಭಾರತೀಯ ಸೇನೆಯ ಯೋಧರ ಕೈಗೆ ರಾಖಿಗಳನ್ನು ಕಟ್ಟಿ, ಹಣೆಗೆ ತಿಲಕವನ್ನು ಹಚ್ಚುವ ಮೂಲಕ ಸಹೋದರರ ಮೇಲಿನ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ.

ಈ ವೇಳೆ ಮಾತನಾಡಿದ ವಿದ್ಯಾರ್ಥಿನಿಯೊಬ್ಬರು "ಯೋಧರು ನಮ್ಮನ್ನು ರಕ್ಷಿಸಲು ಇಲ್ಲಿದ್ದಾರೆ. ಹಾಗಾಗಿ, ಅವರು ಸಹ ನಮ್ಮ ಒಡಹುಟ್ಟಿದವರೇ ಆಗಿದ್ದಾರೆ. ಸೈನಿಕರ ಸೇವೆಯನ್ನು ಗುರುತಿಸುವುದು ಮತ್ತು ನಮ್ಮ ಕರ್ತವ್ಯ ನಿಭಾಯಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಭಾವಿಸುತ್ತೇನೆ. ನಾವು ಅವರ ಕೈಗಳಿಗೆ ಕಟ್ಟುವ ರಾಖಿಗಳು ಅವರನ್ನು ರಕ್ಷಿಸುತ್ತವೆ ಎಂಬ ನಂಬಿಕೆ ಇದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗಡಿಯಲ್ಲಿ ಯೋಧರ ಕೈಗೆ ರಾಖಿ ಕಟ್ಟಿ ಸಂಭ್ರಮಿಸಿದ ಶಾಲಾ ವಿದ್ಯಾರ್ಥಿನಿಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.