ETV Bharat / bharat

ನಮಗೆ ಭಾರತ ಬೇಕು, ಚೀನಾ ಯಾವುದೇ ಆಟಗಳನ್ನು ಆಡಲು ಫ್ರಾನ್ಸ್ ಅವಕಾಶ ನೀಡಿಲ್ಲ: ಎಮ್ಯಾನುಯೆಲ್ ಬೋನ್

author img

By

Published : Jan 8, 2021, 1:17 PM IST

ನಮಗೆ ಭಾರತ ಬೇಕು. ನಾವು ದೀರ್ಘಾವಧಿಯ ವಿಧಾನದಲ್ಲಿ ಭಾರತದೊಂದಿಗೆ ಸಂಬಂಧವನ್ನು ಬೆಳೆಸಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ.

French President's top advisor
ಎಮ್ಯಾನುಯೆಲ್ ಬೋನ್

ನವದೆಹಲಿ: ಕಾಶ್ಮೀರದ ಭದ್ರತೆಗೆ ಸಂಬಂಧಿಸಿದಂತೆ ಚೀನಾ ಯಾವುದೇ ಆಟಗಳನ್ನು ಆಡಲು ಫ್ರಾನ್ಸ್ ಅವಕಾಶ ನೀಡಿಲ್ಲ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ರಾಜತಾಂತ್ರಿಕ ಸಲಹೆಗಾರ ಎಮ್ಯಾನುಯೆಲ್ ಬೋನ್​ ಹೇಳಿದ್ದಾರೆ.

ನಾವು ಭದ್ರತಾ ವಿಷಯದಲ್ಲಿ ಭಾರತವನ್ನು ಬೆಂಬಲಿಸುತ್ತಿದ್ದೇವೆ. ನಾವು ಯಾವುದೇ ರೀತಿಯ ಆಟಗಳನ್ನು ಆಡಲು ಚೀನಿಯರಿಗೆ ಅವಕಾಶ ನೀಡಿಲ್ಲ. ಹಿಮಾಲಯದ ವಿಷಯಕ್ಕೆ ಬಂದಾಗ, ನಮ್ಮ ಹೇಳಿಕೆಗಳನ್ನು ಪರಿಶೀಲಿಸಿ. ಅವು ಸಂಪೂರ್ಣವಾಗಿ ಸ್ಪಷ್ಟವಾಗಿವೆ. ಇದರಲ್ಲಿ ಯಾವುದೇ ಅಸ್ಪಷ್ಟತೆಯಿಲ್ಲ ಎಂದು ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ನಿಯಮಗಳನ್ನು ಗೌರವಿಸಬೇಕು. ಇತರ ರಾಷ್ಟ್ರಗಳಿಗೆ ಕಡಿಮೆ ಆಕ್ರಮಣಕಾರಿಯಾಗಿರಬೇಕು. ಚೀನಾ ಕೆಲವು ನಿಯಮಗಳನ್ನು ಗೌರವಿಸಬೇಕೆಂದು ನಾವು ಬಯಸುತ್ತೇವೆ. ಚೀನಾ ಕಡಿಮೆ ಆಕ್ರಮಣಕಾರಿಯಾಗಬೇಕು. ನಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಸಿದ್ಧರಿದ್ದೇವೆ ಮತ್ತು ಸಮರ್ಥರಾಗಿದ್ದೇವೆ ಎಂದು ಚೀನಾ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

ನಮಗೆ ಭಾರತ ಬೇಕು. ನಾವು ದೀರ್ಘಾವಧಿಯ ವಿಧಾನದಲ್ಲಿ ಭಾರತದೊಂದಿಗೆ ಸಂಬಂಧವನ್ನು ಬೆಳೆಸಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಯುಎಸ್​ ಕ್ಯಾಪಿಟಲ್​ಗೆ ಮುತ್ತಿಗೆ : ಅಶ್ಲಿ ಬಬ್ಬಿತ್ ಸೇರಿದಂತೆ ಮೃತ ಮೂವರ ಮಾಹಿತಿ ಕಲೆ ಹಾಕಿದ ಪೊಲೀಸರು

ಭದ್ರತಾ ಮಂಡಳಿಯಲ್ಲಿ ಭಾರತದ ಅಧಿಕಾರಾವಧಿ ಔಪಚಾರಿಕವಾಗಿ ಸೋಮವಾರ ಧ್ವಜ ಅಳವಡಿಸುವ ಸಮಾರಂಭದೊಂದಿಗೆ ಪ್ರಾರಂಭವಾಯಿತು. ಉಭಯ ದೇಶಗಳ ನಡುವಿನ ವಾರ್ಷಿಕ ಕಾರ್ಯತಂತ್ರದ ಮಾತುಕತೆಗಾಗಿ ಬೋನ್​ ಸದ್ಯ ಭಾರತದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.