ETV Bharat / bharat

Operation Ajay: ಇಸ್ರೇಲ್​ನಿಂದ 274 ಭಾರತೀಯರನ್ನು ಹೊತ್ತು ಸ್ವದೇಶದತ್ತ ಬರುತ್ತಿರುವ ನಾಲ್ಕನೇ ವಿಮಾನ​ - ಆಪರೇಷನ್​ ಅಜಯ್

ಸಂಘರ್ಷ ಪೀಡಿತ ಇಸ್ರೇಲ್​ನಿಂದ 274 ಭಾರತೀಯರನ್ನು ಹೊತ್ತ ನಾಲ್ಕನೇ ವಿಮಾನ ಭಾರತಕ್ಕೆ ಆಗಮಿಸುತ್ತಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್​ ಹೇಳಿದ್ದಾರೆ.

fourth-flight-carrying-home-274-indians-takes-off-from-israel-operation-ajay
ಆಪರೇಷನ್ ಅಜಯ್ : ಇಸ್ರೇಲ್​ನಿಂದ ಹೊರಟ 274 ಭಾರತೀಯರನ್ನು ಹೊತ್ತ ನಾಲ್ಕನೇ ವಿಮಾನ​
author img

By ETV Bharat Karnataka Team

Published : Oct 15, 2023, 9:53 AM IST

ಟೆಲ್​ ಅವೀವ್​ (ಇಸ್ರೇಲ್​) : ಇಸ್ರೇಲ್​ ಮತ್ತು ಹಮಾಸ್​ ಉಗ್ರರ ನಡುವೆ ಸಂಘರ್ಷ ಮುಂದುವರೆದಿದ್ದು, ಈ ಸಂಬಂಧ ಯುದ್ಧ ಪೀಡಿತ ಇಸ್ರೇಲ್​ನಲ್ಲಿ ನೆಲೆಸಿರುವ ಭಾರತೀಯರನ್ನು ಕರೆತರುವ ಕಾರ್ಯ ಭರದಿಂದ ಸಾಗುತ್ತಿದೆ. ಆಪರೇಷನ್​ ಅಜಯ್​ ಕಾರ್ಯಾಚರಣೆಯ ಭಾಗವಾಗಿ 274 ಭಾರತೀಯರನ್ನು ಹೊತ್ತ ನಾಲ್ಕನೇ ವಿಮಾನವು ಭಾನುವಾರ ಮುಂಜಾನೆ ಇಸ್ರೇಲ್​ನಿಂದ ಭಾರತಕ್ಕೆ ಹೊರಟಿದೆ ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ವಿದೇಶಾಂಗ ಸಚಿವ ಎಸ್​ ಜೈಶಂಕರ್​, ಆಪರೇಷನ್ ಅಜಯ್​ ಭಾಗವಾಗಿ ಭಾನುವಾರ ಬೆಳಗ್ಗೆ 274 ಭಾರತೀಯರನ್ನು ಒಳಗೊಂಡ ನಾಲ್ಕನೇ ವಿಮಾನವು ಇಸ್ರೇಲ್​ನಿಂದ ಹೊರಟಿದೆ. ಇದು ಇಸ್ರೇಲ್​ನಿಂದ ಭಾನುವಾರ ಹೊರಟಿರುವ ಎರಡನೇ ವಿಮಾನ ಎಂದು ಹೇಳಿದ್ದಾರೆ.

ಆಪರೇಷನ್​ ಅಜಯ್​ ಕಾರ್ಯಾಚರಣೆ : ಸಂಘರ್ಷ ಪೀಡಿತ ಇಸ್ರೇಲ್​ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಅಂಗವಾಗಿ ಭಾರತ ಸರ್ಕಾರವು ಆಪರೇಷನ್​ ಅಜಯ್​ ರಕ್ಷಣಾ ಕಾರ್ಯಾಚರಣೆ ಹಮ್ಮಿಕೊಂಡಿದೆ. ಈ ಮೂಲಕ ಇಸ್ರೇಲ್​ನಲ್ಲಿ ಸಿಲುಕಿರುವ ಸುಮಾರು 18000 ಭಾರತೀಯ ನಾಗರೀಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ಗುರುವಾರದಿಂದ ಇಸ್ರೇಲ್​ನಿಂದ ಭಾರತೀಯರನ್ನು ಕರೆತರುವ ಕಾರ್ಯ ನಡೆಯುತ್ತಿದೆ. ಈ ಸಂಬಂಧ ನೋಂದಣಿಯೂ ಆರಂಭವಾಗಿದೆ. ಇಸ್ರೇಲ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಸಂಕಷ್ಟದಲ್ಲಿರುವ ಭಾರತೀಯ ನಾಗರೀಕರಿಗೆ ಸಹಾಯವಾಣಿಯನ್ನು ಸ್ಥಾಪಿಸಿದೆ. ಜೊತೆಗೆ ಯಾವುದೇ ತುರ್ತು ಸಂದರ್ಭದಲ್ಲಿ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಸೂಚಿಸಿದೆ.

ಇದಕ್ಕೂ ಮೊದಲು, ಇಸ್ರೇಲ್​ನಿಂದ 197 ಜನರನ್ನು ಹೊತ್ತ ವಿಮಾನವು ದೆಹಲಿಗೆ ಆಗಮಿಸಿತ್ತು. ಶನಿವಾರದಂದು ಮೂರನೇ ವಿಮಾನವು ಇಸ್ರೇಲ್​ನ ಟೆಲ್​ ಅವೀವ್​ನಿಂದ ದೆಹಲಿಗೆ ಆಗಮಿಸಿತ್ತು. ಶನಿವಾರ ಬೆಳಗ್ಗೆ 235 ಭಾರತೀಯ ನಾಗರೀಕರನ್ನು ಹೊತ್ತ ಎರಡನೇ ವಿಮಾನವು ಟೆಲ್​ ಅವೀವ್​​ ನಿಂದ ನವದೆಹಲಿಯ ಇಂದಿರಾಗಾಂಧಿ ಇಂಟರ್​ನ್ಯಾಷನಲ್​ ಏರ್​ಪೋರ್ಟ್​ಗೆ ಆಗಮಿಸಿತ್ತು. ಶುಕ್ರವಾರ 212 ಜನರನ್ನು ಒಳಗೊಂಡಿದ್ದ ಮೊದಲ ವಿಮಾನವು ಶುಕ್ರವಾರ ದೆಹಲಿಗೆ ಆಗಮಿಸಿತ್ತು.

ಮುಂದುವರೆದ ಸಂಘರ್ಷ : ಇಸ್ರೇಲ್​ ಮತ್ತು ಹಮಾಸ್​ ಉಗ್ರರ ನಡುವೆ ಕಳೆದ ಒಂದು ವಾರದಿಂದ ಸಂಘರ್ಷ ನಡೆಯುತ್ತಿದೆ. ಸಂಘರ್ಷದಲ್ಲಿ ಸಾವಿರಾರು ಸಾವನ್ನಪ್ಪಿದ್ದಾರೆ. ಇಸ್ರೇಲ್​ ಕೂಡ ಹಮಾಸ್​ ಉಗ್ರ ಮೇಲೆ ದಾಳಿ ನಡೆಸುತ್ತಿದೆ. ಈ ಸಂಬಂಧ ಗಾಜಾಪಟ್ಟಿಯಲ್ಲಿರುವ ನಾಗರೀಕರಿಗೆ ಬೇರೆಡೆ ಸ್ಥಳಾಂತರಗೊಳ್ಳುವಂತೆ ಇಸ್ರೇಲ್​ ಸೇನಾಪಡೆ ಸೂಚನೆ ನೀಡಿತ್ತು.

ಇದನ್ನೂ ಓದಿ : ಇಸ್ರೇಲ್​ನಿಂದ ಇಂದು 2 ವಿಮಾನ ವ್ಯವಸ್ಥೆ: 230 ಭಾರತೀಯರನ್ನು ಹೊತ್ತು ಬರುತ್ತಿದೆ ಮೊದಲ ಫ್ಲೈಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.