ಫತೇಪುರ: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಬೈಕ್ನಲ್ಲಿ ಮದುವೆಗೆಂದು ತೆರಳಿದ್ದ ನಾಲ್ವರು ಸಹೋದರರು ಮೃತಪಟ್ಟಿರುವ ಘಟನೆ ದಿಲ್ವಾಲ್ಪುರ ಗ್ರಾಮದಲ್ಲಿ ನಡೆದಿದೆ.
ಕೋರ್ವಾ ಗ್ರಾಮದ ವಿಮಲ್ ಪ್ರಜಾಪತಿ ಮದುವೆ ಮಖದೂಮ್ಪುರನಲ್ಲಿ ನಿಶ್ಚಿಯವಾಗಿತ್ತು. ಗ್ರಾಮದ ಅಜಯ್ ಕುಮಾರ್, ಅಖೀಲೆಶ್ ಕುಮಾರ್, ಸಂದೀಪ್ ಮತ್ತು ಶ್ಯಾಮು ಅಣ್ತಂದಿರು. ನಾಲ್ವರು ಸೇರಿ ಒಂದೇ ಬೈಕ್ನಲ್ಲಿ ಶುಕ್ರವಾರ ರಾತ್ರಿ ಮದುವೆಗೆಂದು ತೆರಳಿದ್ದಾರೆ. 8 ಗಂಟೆ ಸುಮಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಟ್ರಕ್ ಚಾಲಕ ಇವರ ಬೈಕ್ಗೆ ಡಿಕ್ಕಿ ಹೊಡೆದು ವಾಹನ ಸಮೇತ ಪರಾರಿಯಾಗಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ನ್ವಾಲರೂ ಸಹೋದರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಭೀಕರ ರಸ್ತೆ ಅಪಘಾತದ ಮಾಹಿತಿಯನ್ನು ದಾರಿಹೋಕರು ಪೊಲೀಸರಿಗೆ ರವಾನಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇನ್ನು ಮೃತರ ಕುಟುಂಬಸ್ಥರಿಗೆ ತಮ್ಮ ಮಕ್ಕಳು ಮೃತಪಟ್ಟಿರುವ ಮಾಹಿತಿ ಸಿಕ್ಕಿದ್ದು, ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ. ಆಸ್ಪತ್ರೆ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.