ETV Bharat / bharat

ರಾಮ​ನಾಥ್ ಕೋವಿಂದ್​ ಆಗಮನ ವೇಳೆ ಆ್ಯಂಬುಲೆನ್ಸ್​ನಲ್ಲಿ ಪ್ರಾಣ ಬಿಟ್ಟ ಮಹಿಳೆ : ನಾಲ್ವರು ಪೊಲೀಸರು ಅಮಾನತು - ರಾಮ​ನಾಥ್ ಕೋವಿಂದ್​ ಆಗಮನ ವೇಳೆ ಟ್ರಾಫಿಕ್ ಜಾಮ್​

ಕಾನ್ಪುರನಗರ ಪೊಲೀಸ್ ಆಯುಕ್ತ ಅಸಿಮ್ ಅರುಣ್ ಹಾಗೂ ಜಿಲ್ಲಾ ನ್ಯಾಯಾಧೀಶ ಅಲೋಕ್ ತಿವಾರಿ ಅವರು ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದು, ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಸಂಚಾರ ತಡೆಹಿದಿದಿದ್ದ ಕಾರಣ ಟ್ರಾಫಿಕ್​​​ ಜಾಮ್​ನಲ್ಲಿ ಸಿಲುಕಬೇಕಾಯಿತು. ಆದರೆ, ಆಕೆಯ ಪತಿ ವಾಹನ ಬಿಟ್ಟು ಕಳುಹಿಸುವಂತೆ ಬೇಡಿಕೊಂಡರು ಪೊಲೀಸರು ಕಳುಹಿಸಿರಲಿಲ್ಲ..

Four suspended for woman's death in traffic jam in Kanpur
ವಂದನಾ ಮಿಶ್ರಾ
author img

By

Published : Jun 27, 2021, 4:29 PM IST

ಕಾನ್ಪುರ (ಉತ್ತರ ಪ್ರದೇಶ): ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ತಮ್ಮ ಹುಟ್ಟೂರಿನ ಪ್ರವಾಸದ ವೇಳೆ ಸಂಚಾರಕ್ಕೆ ತಡೆ ನೀಡಿದ್ದ ಹಿನ್ನೆಲೆ ಮಹಿಳೆಯೊಬ್ಬರು ಆಸ್ಪತ್ರೆಗೆ ತೆರಳಲಾಗದೇ ಮೃತಪಟ್ಟಿರುವ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ಮತ್ತು ಮೂವರು ಹೆಡ್ ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಆಯುಕ್ತರಿಗೆ ವರದಿ ಸಲ್ಲಿಸುವಂತೆ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮ್​ನಾಥ್ ಕೋವಿಂದ್​​ ರಸ್ತೆ ಮಾರ್ಗವಾಗಿ ತಮ್ಮ ಹುಟ್ಟೂರು ಕಾನ್ಪುರ ತೆರಳುತ್ತಿದ್ದ ಹಿನ್ನೆಲೆ ರಸ್ತೆ ಸಂಚಾರ ತಡೆಯಲಾಗಿತ್ತು. ಈ ವೇಳೆ, ಟ್ರಾಫಿಕ್ ಜಾಮ್​ನಲ್ಲಿ ಸಿಲುಕಿದ್ದ ಭಾರತೀಯ ಕೈಗಾರಿಕಾ ಅಧ್ಯಯನ ಸಂಘ ವಿಭಾಗದ ಮಹಿಳಾ ಅಧ್ಯಕ್ಷೆ ವಂದನಾ ಮಿಶ್ರಾ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತೆರಳಲಾಗದೇ ಮೃತಪಟ್ಟಿದ್ದರು. ಅಕಾಲಿಕ ಮರಣದ ಬಗ್ಗೆ ರಾಷ್ಟ್ರಪತಿಗಳು ‘ದುಃಖಿತರಾಗಿದ್ದಾರೆ’ ಎಂದು ಪೊಲೀಸ್ ಆಯುಕ್ತ ಅಸಿಮ್ ಅರುಣ್ ಹೇಳಿದ್ದಾರೆ.

ಇದನ್ನೂ ಓದಿ : ರಾಮ​ನಾಥ್ ಕೋವಿಂದ್​ ಆಗಮನ ವೇಳೆ ಟ್ರಾಫಿಕ್​ ಜಾಮ್​​: ಆ್ಯಂಬುಲೆನ್ಸ್​ನಲ್ಲಿ ಪ್ರಾಣ ಬಿಟ್ಟ ಮಹಿಳೆ

ಕಾನ್ಪುರನಗರ ಪೊಲೀಸ್ ಆಯುಕ್ತ ಅಸಿಮ್ ಅರುಣ್ ಹಾಗೂ ಜಿಲ್ಲಾ ನ್ಯಾಯಾಧೀಶ ಅಲೋಕ್ ತಿವಾರಿ ಅವರು ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದು, ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಸಂಚಾರ ತಡೆಹಿದಿದಿದ್ದ ಕಾರಣ ಟ್ರಾಫಿಕ್​​​ ಜಾಮ್​ನಲ್ಲಿ ಸಿಲುಕಬೇಕಾಯಿತು.

ಆದರೆ, ಆಕೆಯ ಪತಿ ವಾಹನ ಬಿಟ್ಟು ಕಳುಹಿಸುವಂತೆ ಬೇಡಿಕೊಂಡರು ಪೊಲೀಸರು ಕಳುಹಿಸಿರಲಿಲ್ಲ. ಟ್ರಾಫಿಕ್ ತೆರೆದ ಬಳಿಕ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಮಹಿಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.