ಬಾಲಸೋರ್ (ಒಡಿಶಾ): ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕೆಲವೊಂದು ರಹಸ್ಯಗಳನ್ನು ವಿದೇಶಿಗರಿಗೆ ರವಾನೆ ಮಾಡಿರುವ ಆರೋಪದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (DRDO-Defence Research and Development organization) ಕೆಲಸ ಮಾಡುತ್ತಿರುವ ನಾಲ್ವರು ಗುತ್ತಿಗೆ ನೌಕರರನ್ನು ಒಡಿಶಾದ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯ (Official Secret Act) 3, 4 ಮತ್ತು 5ನೇ ಸೆಕ್ಷನ್ಗಳ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿರುವುದು ಮಾತ್ರವಲ್ಲದೇ, ಭಾರತೀಯ ದಂಡ ಸಂಹಿತೆ 120-ಬಿ, 121-ಎ, ಮತ್ತು 34 ರ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ.
ರಾಷ್ಟ್ರದ ಭದ್ರತೆ, ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಗಂಭೀರ ಹಾನಿಯನ್ನುಂಟು ಮಾಡುವ ಆರೋಪ ಆರೋಪಿಗಳ ಮೇಲಿದೆ. ಪ್ರಕರಣದ ತನಿಖೆ ಮುಂದುವರೆಯುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ಬಾಲಸೋರ್ ಜಿಲ್ಲೆಯಲ್ಲಿ ಇದೇ ರೀತಿಯ ಪ್ರಕರಣವೊಂದನ್ನು ಈ ಹಿಂದೆ ಚಂಡಿಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಒಡಿಶಾದ ಕ್ರೈಂ ಬ್ರಾಂಚ್ ಈ ಪ್ರಕರಣವನ್ನು ತನಿಖೆ ಮಾಡಿತ್ತು. ಆಗ ಆರೋಪಿಗಳಿಗೆ ಶಿಕ್ಷೆಯೂ ಆಗಿತ್ತು.
ಇದನ್ನೂ ಓದಿ:ಮಕ್ಕಳಿಗೆ ಕೋವಿಡ್ ಲಸಿಕೆ: ವೈದ್ಯಕೀಯ ಅಧಿಕಾರಿಗಳ ಮಹತ್ವದ ನಿರ್ಧಾರ