ETV Bharat / bharat

ಕೇವಲ 10 ದಿನಗಳ ಅಂತರದಲ್ಲಿ ಗಂಡ-ಹೆಂಡ್ತಿ, ಇಬ್ಬರು ಮಕ್ಕಳು ಕೊರೊನಾಗೆ ಬಲಿ!

ಕೊರೊನಾದಿಂದಾಗಿ ಗಂಡ, ಹೆಂಡ್ತಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಹರಿಯಾಣದ ಫರೀದಾಬಾದ್​ನಲ್ಲಿ ನಡೆದಿದೆ.

family end corona virus faridabad  four family members death corona faridabad  four family members death covid 19 faridabad  faridabad corona update  ಕೊರೊನಾಗೆ ಒಂದೇ ಕುಟುಂಬ ನಾಲ್ವರು ಸಾವು  ಹರಿಯಾಣದಲ್ಲಿ ಕೊರೊನಾಗೆ ಒಂದೇ ಕುಟುಂಬ ನಾಲ್ವರು ಸಾವು  ಹರಿಯಾಣ ಕೊರೊನಾ ಸುದ್ದಿ
ಗಂಡ-ಹೆಂಡ್ತಿ, ಇಬ್ಬರು ಮಕ್ಕಳು ಕೊರೊನಾಗೆ ಬಲಿ
author img

By

Published : May 1, 2021, 11:11 AM IST

ಫರೀದಾಬಾದ್​: ಒಂದೇ ಕುಟುಂಬದ ನಾಲ್ವರು ಕೋವಿಡ್​ ಸೋಂಕಿಗೆ ಬಲಿಯಾಗಿರುವ ಘಟನೆ ಫ್ರಾಂಟಿಯರ್​ ಕಾಲೋನಿಯಲ್ಲಿ ನಡೆದಿದೆ.

ಮಹಿಪಾಲ್​ ಕುಟುಂಬ ಕಾಲೋನಿಯಲ್ಲಿ ವಾಸಿಸುತ್ತಿತ್ತು. ಇವರ ಕುಟುಂಬ ಸೋಂಕಿನಿಂದ ಬಳಲುತ್ತಿತ್ತು. ಏಪ್ರಿಲ್​ 23ರಂದು ಕೊರೊನಾದಿಂದಾಗಿ ಮಹಿಪಾಲ್​ ಸಾವನ್ನಪ್ಪಿದ್ದಾರೆ. ಮೂರು ದಿನಗಳ ನಂತರ ಆಕೆಯ ಪತ್ನಿ ಭಾರತಿಯೂ ಸಹ ಕೋವಿಡ್​ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದಾದ ಬಳಿಕ ಅವರಿಬ್ಬರ ಮಕ್ಕಳಾದ ವಿಪುಲ್​ ಮತ್ತು ರೋಹಿತ್​ಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಪುಲ್​ ನಾಲ್ಕೈದು ದಿನಗಳ ಹಿಂದೆ ಮೃತಪಟ್ಟಿದ್ದ. ಆದ್ರೆ ಕಿರಿಯ ಮಗ ರೋಹಿತ್ ಸಹ​ ಶುಕ್ರವಾರ ಮೃತ ಪಟ್ಟಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

ಆಸ್ಪತ್ರೆಯವರು ಐದು ಲಕ್ಷ ಬಿಲ್​ ಮಾಡಿದ್ದಾರೆ. ಆದ್ರೆ ಕಾಲೋನಿ ಜನ ಸೇರಿ ಎರಡೂವರೆ ಲಕ್ಷ ಹೊಂದಿಸಿದ್ದರು. ಆದ್ರೂ ಸಹ ಆಸ್ಪತ್ರೆಯವರು ರೋಹಿತ್​ ಶವ ನೀಡಲು ನಿರಾಕರಿಸಿದ್ದಾರೆ ಎಂದು ಕಾಲೋನಿಯ ಅಜಯ್​ ರಾಥೋಡ್​ ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.