ನವದೆಹಲಿ : ಶುಕ್ರವಾರ ಜೈಲು ಅಧಿಕಾರಿಗಳು ಮತ್ತು ಕೆಲವು ಕೈದಿಗಳ ನಡುವೆ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ನಾಲ್ಕು ಕೈದಿಗಳು, ಸಹಾಯಕ ಸೂಪರಿಂಟೆಂಡೆಂಟ್ ಮತ್ತು ತಿಹಾರ್ ಜೈಲಿನ ವಾರ್ಡನ್ ಸೇರಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಡಿಜಿ ಸಂದೀಪ್ ಗೋಯಲ್ ಹೇಳಿದ್ದಾರೆ.
ಜೈಲಿನ ಅಧಿಕಾರಿಗಳು ಮತ್ತು ವಿಚಾರಣಾಧೀನ ಕೈದಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸಹಾಯಕ ಸೂಪರಿಂಟೆಂಡೆಂಟ್ ಸುನಿಲ್ ಮತ್ತು ವಾರ್ಡನ್ ನೀರಜ್ ಶೋಕೀನ್ ಕೈದಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.
ಈ ವೇಳೆ ಮಾರಾಮಾರಿ ಸಂಭವಿಸಿದ್ದು, ನಾಲ್ವರು ಕೈದಿಗಳು ಗಾಯಗೊಂಡಿದ್ದಾರೆ ಎಂದು ಗೋಯಲ್ ತಿಳಿಸಿದ್ದಾರೆ. ಗಾಯಗೊಂಡ ಜೈಲು ಅಧಿಕಾರಿಗಳನ್ನು ಮತ್ತು ಕೈದಿಗಳನ್ನು ದೀನ್ ದಯಾಳ್ ಉಪಾಧ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸಂದೀಪ್ ಗೋಯಲ್ ಹೇಳಿದರು.
ಇದನ್ನೂ ಓದಿ: ಸಾಮಾನ್ಯ ಇ-ಹರಾಜು ಮೂಲಕ ಕಲ್ಲಿದ್ದಲು ಮಾರಾಟಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ