ಚಮೋಲಿ (ಉತ್ತರಖಂಡಾ): ಏಪ್ರಿಲ್ 22ರಿಂದ ಚಾರ್ಧಾಮ್ ಯಾತ್ರೆ ಆರಂಭವಾಗಿದ್ದು, ಇಂದು ಬದ್ರಿನಾಥ ಧಾಮದ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದೆ. ಇಂದು ಬೆಳಗ್ಗೆ 7.10ಕ್ಕೆ ಬದ್ರಿನಾಥ ದೇಗುಲದ ಬಾಗಿಲು ತೆಗೆದಿದ್ದು, ಅರ್ಚಕರು ಬದ್ರಿ ವಿಶಾಲ್ಗೆ ಪೂಜಾ ಪುನಸ್ಕಾರಗಳನ್ನು ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಇಂದು ವಿಶ್ವದ ಪ್ರಖ್ಯಾತ ದೇಗುಲವಾದ ಬದ್ರಿನಾಥದ ಮೊದಲ ಪೂಜೆ ನಡೆಸಲಾಯಿತು.
-
Uttarakhand| Badrinath temple being decorated with different types of flowers.
— ANI UP/Uttarakhand (@ANINewsUP) April 26, 2023 " class="align-text-top noRightClick twitterSection" data="
The doors of Badrinath temple will open tomorrow, 27th April. pic.twitter.com/xr4Awqz1tm
">Uttarakhand| Badrinath temple being decorated with different types of flowers.
— ANI UP/Uttarakhand (@ANINewsUP) April 26, 2023
The doors of Badrinath temple will open tomorrow, 27th April. pic.twitter.com/xr4Awqz1tmUttarakhand| Badrinath temple being decorated with different types of flowers.
— ANI UP/Uttarakhand (@ANINewsUP) April 26, 2023
The doors of Badrinath temple will open tomorrow, 27th April. pic.twitter.com/xr4Awqz1tm
ಇನ್ನು ಈಗಾಗಲೇ ಆರಂಭವಾಗಿರುವ ಚಾರ್ಧಾಮ್ ಯಾತ್ರೆ ಹಿನ್ನಲೆ ವಿಐಪಿಗಳು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಇಂದು ಬದ್ರಿನಾಥ ದರ್ಶನಕ್ಕೆ ಆಗಮಿಸಿದರು. ಈ ಹಿನ್ನೆಲೆ 20 ಕ್ವಿಂಟಾಲ್ ಹೂವುಗಳಿಂದ ಬದ್ರಿನಾಥ ದೇಗುಲವನ್ನು ಅಲಂಕರಿಸಲಾಗಿತ್ತು. ಈ ಮುಂಚೆ ಏಪ್ರಿಲ್ 22ರಂದು ಗಂಗೋತ್ರಿ ಮತ್ತು ಯಮುನೋತ್ರಿ ಧಾಮದ ಬಾಗಿಲನ್ನು ತೆರೆಯಲಾಗಿತ್ತು. ಇನ್ನು ಏಪ್ರಿಲ್ 25ರಂದು ಕೇಥರಾನಾಥ ದೇಗುಲದಲ್ಲಿ ಭಕ್ತರ ದರ್ಶನ ಆರಂಭವಾಯಿತು. ಇಂದು ಬದ್ರಿನಾಥ ಧಾಮ ಕೂಡ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದ್ದು, ನಾಲ್ಕು ಧಾಮಗಳ ದರ್ಶನವನ್ನು ಇದೀಗ ಯಾತ್ರಾರ್ಥಿಗಳು ಕೈಗೊಳ್ಳಬಹುದಾಗಿದೆ.
ಈ ಬಾರಿ ಸರಿ ಸುಮಾರು 95 ಸಾವಿರಕ್ಕೂ ಹೆಚ್ಚು ಭಕ್ತರು ಚಾರ್ಧಾಮ್ ಯಾತ್ರೆಗೆ ಮುಂದಾಗಿದ್ದಾರೆ. ಆರಂಭದಲ್ಲಿ ಭಕ್ತರ ಅಂಕಿ - ಸಂಖ್ಯೆಗಳನ್ನು ಗಮನಿಸಿದಾಗ ಎಲ್ಲಾ ದಾಖಲೆಗಳನ್ನು ಮೀರಿ ಈ ಬಾರಿ ಭಕ್ತರು ಯಾತ್ರೆ ನಡೆಸಿರುವುದು ವರದಿಯಾಗಿದೆ. ಕಳೆದ ವರ್ಷದ ದಾಖಲೆ ಮೀರಿ ಈ ಬಾರಿ ಭಕ್ತರು ಚಾರ್ಧಾಮ್ ಯಾತ್ರೆಯತ್ತ ಹೆಜ್ಜೆ ಹಾಕಿದ್ದಾರೆ. ಸಾಂಕ್ರಾಮಿಕತೆ ಹಿನ್ನಲೆ ಈ ಚಾರ್ಧಾಮ್ ಯಾತ್ರೆಗೆ ಕೆಲವು ವರ್ಷ ಬ್ರೇಕ್ ನೀಡಲಾಗಿತ್ತು, ಇದೀಗ ಈ ಯಾತ್ರೆ ಆರಂಭವಾಗಿದ್ದು, ಭಕ್ತರ ಸಂಖ್ಯೆ ಕೂಡ ನಿರೀಕ್ಷೆಗೂ ಮೀರಿ ಇದೆ.
ಈಗಾಗಲೇ ಆನ್ಲೈನ್ ಮೂಲಕ ಲಕ್ಷಾಂತರ ಜನರು ಚಾರ್ಧಾಮ್ ಯಾತ್ರೆಗೆ ದಾಖಲಾತಿ ನಡೆಸಿದ್ದಾರೆ. ಈ ನೋಂದಾಣಿ ಗಮನಿಸಿದಾಗ ನಿರೀಕ್ಷೆ ಮೀರಿ ದಾಖಲಾತಿ ನಡೆದಿದ್ದು, ಇದು ಎಲ್ಲಾ ದಾಖಲೆಗಳನ್ನು ಹೊಡೆದುರುಳಿಸಿದೆ. ಚಾರ್ಧಾಮ್ ಯಾತ್ರೆ ಕೂಡ ಸುಲಭ ಮಾರ್ಗವಲ್ಲದ ಕಾರಣಕ್ಕೆ ಭಕ್ತರಿಗೆ ಅವಶ್ಯಕವಾದ ಎಲ್ಲ ಸೌಲಭ್ಯಗಳನ್ನು ಮಾಡುವ ಮೂಲಕ ಅವರ ಸುರಕ್ಷತೆಗೆ ಒತ್ತು ನೀಡಲಾಗಿದೆ ಎಂದು ಮಂಗಳವಾರ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದರು.
ಚಾರ್ಧಾಮ್ ಯಾತ್ರೆ ಸುಲಭ ಮತ್ತು ಸುರಕ್ಷಿತವಾಗಿರುವಂತೆ ಮಾಡಲು ಎಲ್ಲ ಸಾಧ್ಯವಾದ ಪ್ರಯತ್ನಗಳನ್ನು ನಡೆಸಲಾಗಿದೆ. ಸಾಮಾಜಿಕ ಸಂಸ್ಥೆಗಳು ಮತ್ತು ಸ್ವಯಂ ಸಂಘಟನೆಗಳು ಕೂಡ ಯಾತ್ರೆಗೆ ಸಂಪೂರ್ಣವಾದ ಸಹಕಾರ ಒದಗಿಸಿದೆ. ಇದರ ಆಧಾರದ ಅನುಸಾರ ಕಳೆದ ವರ್ಷದ ಅನುಭವದಿಂದ ಪ್ರವಾಸ ವ್ಯವಸ್ಥೆಗಳನ್ನು ಮುಂಚಿತವಾಗಿಯೇ ನಡೆಸಲಾಗಿದೆ ಎಂದು ಧಾಮಿ ತಿಳಿಸಿದ್ದರು. ಅಲ್ಲದೇ ಗಂಗೋತ್ರಿ ಮತ್ತು ಯಮುನೋತ್ರಿಯಲ್ಲಿ ಯಾತ್ರಾ ಸರಾಗವಾಗಿ ನಡೆಯುತ್ತಿದೆ. ಏಪ್ರಿಲ್ 27ರಿಂದ ಬದ್ರಿ ವಿಶಾಲ್ ದೇಗುಲ ಕೂಡ ಭಕ್ತರ ದರ್ಶನಕ್ಕೆ ತೆರೆಯಲಿದೆ ಎಂದಿದ್ದರು.
ಕೇಧಾರನಾಥ್ನಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಖ್ಯಮಂತ್ರಿ ಧಾಮಿ ಅವರು ದೇಶ ಮತ್ತು ರಾಜ್ಯದ ಜನರಿಗೆ ಸುಖ ಮತ್ತು ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸಿದರು.
ಇದನ್ನೂ ಓದಿ: 'ಲಿಕೇಜ್ ಪ್ರಾಬ್ಲಂ'... ಪ್ರಾರಂಭವಾದ ದಿನವೇ ವಂದೇ ಭಾರತ್ ರೈಲಲ್ಲಿ ದೋಷ