ETV Bharat / bharat

ರಾಜಸ್ಥಾನದ ಮಾಜಿ ಸಿಎಂ ಜಗನ್ನಾಥ ಪಹಾಡಿಯಾ ಕೋವಿಡ್​ನಿಂದ ಮೃತ

ಪಹಾಡಿಯಾ ನಿಧನದಿಂದಾಗಿ ರಾಜಸ್ಥಾನ ರಾಜ್ಯ ಸರ್ಕಾರ ಗುರುವಾರ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದ್ದು, ಕ್ಯಾಬಿನೆಟ್ ಸಭೆ ನಡೆಸಿ, ಸಂತಾಪ ಸೂಚಿಸಲಿದೆ.

Former Rajasthan CM Jagannath Pahadia dies of COVID-19
ರಾಜಸ್ಥಾನದ ಮಾಜಿ ಸಿಎಂ ಜಗನ್ನಾಥ ಪಹಾಡಿಯಾ ಕೋವಿಡ್​ನಿಂದ ಮೃತ
author img

By

Published : May 20, 2021, 5:49 AM IST

ಜೈಪುರ, ರಾಜಸ್ಥಾನ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಜಗನ್ನಾಥ ಪಹಾಡಿಯಾ ತಮ್ಮ 89ನೇ ವಯಸ್ಸಿನಲ್ಲಿ ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ.

1980-81ರಲ್ಲಿ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದ ಅವರು ಹರಿಯಾಣ ಮತ್ತು ಬಿಹಾರದ ಮಾಜಿ ಗವರ್ನರ್ ಕೂಡಾ ಆಗಿದ್ದರು. ಪಹಾಡಿಯಾ ನಿಧನದ ಸುದ್ದಿ ಕೇಳಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿಧನದ ಬಗ್ಗೆ ತುಂಬಾ ಆಘಾತಕ್ಕೊಳಗಾಗಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಕಾರ್ಮಿಕರ ಠೇವಣಿ ಆಧರಿತ ವಿಮೆ ಗರಿಷ್ಠ 7 ಲಕ್ಷಕ್ಕೆ ಏರಿಕೆ: ಇಪಿಎಫ್​ಓ ಹೊಸ ನೀತಿಯ ಪೂರ್ಣ ಮಾಹಿತಿ

ಕೋವಿಡ್​​ನಿಂದಾಗಿ ಪಹಾಡಿಯಾ ನಮ್ಮನ್ನು ತೊರೆದಿದ್ದು, ಮೊದಲಿನಿಂದಲೂ ಅವರಿಗೆ ನನ್ನ ಬಗ್ಗೆ ತುಂಬಾ ಪ್ರೀತಿ ಇತ್ತು. ಅವರು ಇಲ್ಲವಾಗಿರುವುದರಿಂದ ನನಗೆ ವೈಯಕ್ತಿಕವಾಗಿಯೂ ನಷ್ಟವಾಗಿದೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.

ಪಹಾಡಿಯಾ ನಿಧನದಿಂದಾಗಿ ರಾಜಸ್ಥಾನ ರಾಜ್ಯ ಸರ್ಕಾರ ಗುರುವಾರ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದ್ದು, ಈ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗುವುದು. ಪಹಾಡಿಯಾಗೆ ಸಂತಾಪ ಸೂಚಿಸಲು ಗುರುವಾರ ಮಧ್ಯಾಹ್ನ 12 ಗಂಟೆಗೆ ಕ್ಯಾಬಿನೆಟ್ ಸಭೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.