ಜೈಪುರ(ರಾಜಸ್ಥಾನ): ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆಯುತ್ತಿದೆ. ಪಕ್ಷದ ಉಸ್ತುವಾರಿ ವಹಿಸಿದ್ದ ಅಜಯ್ ಮಾಕನ್ ಅವರನ್ನು ಬದಲಿಸಿ, ಆ ಜಾಗಕ್ಕೆ ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವ್ ಅವರನ್ನು ನೇಮಕ ಮಾಡಲಾಗಿದೆ. ಇದನ್ನು ಡಿಸಿಎಂ ಸಚಿನ್ ಪೈಲಟ್ ಸ್ವಾಗತಿಸಿದ್ದಾರೆ.
-
पंजाब के पूर्व उपमुख्यमंत्री श्री सुखजिंदर सिंह रंधावा जी को राजस्थान कांग्रेस का प्रभारी नियुक्त किए जाने पर हार्दिक बधाई एवं शुभकामनाएं। मुझे पूर्ण विश्वास है कि आपके मार्गदर्शन में प्रदेश कांग्रेस को मजबूती मिलेगी।@Sukhjinder_INC
— Sachin Pilot (@SachinPilot) December 6, 2022 " class="align-text-top noRightClick twitterSection" data="
">पंजाब के पूर्व उपमुख्यमंत्री श्री सुखजिंदर सिंह रंधावा जी को राजस्थान कांग्रेस का प्रभारी नियुक्त किए जाने पर हार्दिक बधाई एवं शुभकामनाएं। मुझे पूर्ण विश्वास है कि आपके मार्गदर्शन में प्रदेश कांग्रेस को मजबूती मिलेगी।@Sukhjinder_INC
— Sachin Pilot (@SachinPilot) December 6, 2022पंजाब के पूर्व उपमुख्यमंत्री श्री सुखजिंदर सिंह रंधावा जी को राजस्थान कांग्रेस का प्रभारी नियुक्त किए जाने पर हार्दिक बधाई एवं शुभकामनाएं। मुझे पूर्ण विश्वास है कि आपके मार्गदर्शन में प्रदेश कांग्रेस को मजबूती मिलेगी।@Sukhjinder_INC
— Sachin Pilot (@SachinPilot) December 6, 2022
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ವೇಳೆ ಶಾಸಕರು, ಮಂತ್ರಿಗಳು ಬಂಡೆದ್ದು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಉಸ್ತುವಾರಿಯಾಗಿದ್ದ ಅಜಯ್ ಮಾಕನ್ ಸಂಧಾನಕ್ಕೆ ಶತಪ್ರಯತ್ನ ನಡೆಸಿದ್ದರು. ಆದರೆ, ಶಾಸಕರು, ಸಚಿವರು ಇದಕ್ಕೆ ಓಗೊಡಲಿಲ್ಲ. ಕೊನೆಗೆ ಅಶೋಕ್ ಗೆಹ್ಲೋಟ್ ಅವರು ಸ್ಪರ್ಧೆಯಿಂದಲೇ ಹಿಂದೆ ಸರಿಯಬೇಕಾಯಿತು.
ಬಂಡೆದ್ದ ನಾಯಕರ ವಿರುದ್ಧ ಪಕ್ಷ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅಜಯ್ ಮಾಕನ್ ಅವರು ಬೇಸರಿಸಿಕೊಂಡು ಹುದ್ದೆ ತೊರೆಯಲು ಇಚ್ಚಿಸಿದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮನ್ನು ಉಸ್ತುವಾರಿ ಜವಾಬ್ದಾರಿಯಿಂದ ತಪ್ಪಿಸಲು ಮನವಿ ಮಾಡಿದ್ದರು. ಇದನ್ನು ಒಪ್ಪಿರುವ ಕಾಂಗ್ರೆಸ್, ಪಂಜಾಬ್ ಮಾಜಿ ಡಿಸಿಎಂ ಸುಖಜಿಂದರ್ ಸಿಂಗ್ರನ್ನು ನೇಮಿಸಿ ಆದೇಶಿಸಲಾಗಿದೆ.
ಓದಿ: ಕೇರಳ ವಿಧಾನಸಭೆ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರ ಸಮಿತಿ