ETV Bharat / bharat

ಬಿಜೆಪಿಯ ಮಾಜಿ ಸಂಸದ ಪ್ರಭಾತಸಿಂಹ ಚೌಹಾಣ್ ಕಾಂಗ್ರೆಸ್ ಸೇರ್ಪಡೆ - ಈಟಿವಿ ಭಾರತ ಕನ್ನಡ

ಗುಜರಾತ್‌ನ ಪಂಚಮಹಲ್ ಕ್ಷೇತ್ರದ ಬಿಜೆಪಿ ಮಾಜಿ ಸಂಸದ ಪ್ರಭಾತಸಿಂಹ ಚೌಹಾಣ್ ಮಂಗಳವಾರ ಪಕ್ಷದ ಪ್ರಧಾನ ಕಾರ್ಯದರ್ಶಿ ಮೋಹನ್ ಪ್ರಕಾಶ್ ಮತ್ತು ಇತರ ರಾಜ್ಯ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.

former-bjp-mp-prabhatsinh-chauhan-joins-congress
ಬಿಜೆಪಿಯ ಮಾಜಿ ಸಂಸದ ಪ್ರಭಾತಸಿಂಹ ಚೌಹಾಣ್
author img

By

Published : Nov 2, 2022, 11:22 AM IST

ಖೇಡಾ (ಗುಜರಾತ್): ಗುಜರಾತ್​ನಲ್ಲಿ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಇದರ ನಡುವೆ ಪಂಚಮಹಲ್ ಕ್ಷೇತ್ರದ ಬಿಜೆಪಿ ಮಾಜಿ ಸಂಸದ ಪ್ರಭಾತಸಿಂಹ ಚೌಹಾಣ್ ಕಾಂಗ್ರೆಸ್‌ ಸೇರಿದ್ದಾರೆ. ಖೇಡಾ ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯ ವೇಳೆ ಇವರು ಪಕ್ಷ ಸೇರ್ಪಡೆಯಾದರು.

1995 ರಿಂದ ಬಿಜೆಪಿ ತೆಕ್ಕೆಯಲ್ಲಿರುವ ಕಲೋಲ್ ವಿಧಾನಸಭಾ ಕ್ಷೇತ್ರ ಚೌಹಾಣ್ ಅವರ ಆಗಮನದಿಂದ ಕೈ ಪಾಳಯದ ಪಾಲಾಗುವ ಸಾಧ್ಯತೆ ಕಾಣುತ್ತಿದೆ. ಇವರು 1980 ಮತ್ತು 1985ರಲ್ಲಿ ಕಾಂಗ್ರೆಸ್​ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. 1995ರಲ್ಲಿ ಬಿಜೆಪಿ ಸೇರಿದ್ದು 1995, 1998 ಮತ್ತು 2002ರಲ್ಲಿ ಕಲೋಲ್ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದರು. 2009 ಮತ್ತು 2014 ರಲ್ಲಿ ಪಂಚಮಹಲ್ ಕ್ಷೇತ್ರದಿಂದ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದರು.

2017ರಲ್ಲಿ ಬಿಜೆಪಿ ಚೌಹಾಣ್ ಅವರ ಇಚ್ಛೆಗೆ ವಿರುದ್ಧವಾಗಿ ಅವರ ಸೊಸೆ ಸುಮನ್​ ಅವರನ್ನು ಕಲೋಲ್ ಕ್ಷೇತ್ರದಿಂದ ನಾಮನಿರ್ದೇಶನ ಮಾಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಚೌಹಾಣ್ ಈಗ ಬಿಜೆಪಿ ತೊರೆದಿದ್ದಾರೆ.

ಇದನ್ನೂ ಓದಿ: ಹಿಮಾಚಲ ಪ್ರದೇಶ: ರಾಜ್ಯ ಉಪಾಧ್ಯಕ್ಷ ಸೇರಿ ಬಂಡೆದ್ದ ಐವರನ್ನು ಅಮಾನತು ಮಾಡಿದ ಬಿಜೆಪಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.