ETV Bharat / bharat

ವಾರಾಣಸಿಯಲ್ಲಿ ಹಿಂದೂ ಸಂಪ್ರದಾಯದಂತೆ ನಡೆದ ಫ್ರೆಂಚ್ ಪ್ರಜೆಯ ಅಂತ್ಯಕ್ರಿಯೆ: ಈಡೇರಿದ ವಿದೇಶಿಗನ ಆಸೆ

ಮೋಕ್ಷವನ್ನು ಪಡೆಯಲು ಕಾಶಿಗೆ ಆಗಮಿಸಿ, ಮೃತಪಟ್ಟಿದ್ದ ಫ್ರಾನ್ಸ್ ಪ್ರಜೆಯ ಅಂತಿಮ ಸಂಸ್ಕಾರವನ್ನು ಜಿಲ್ಲಾಡಳಿತ ಹಿಂದೂ ಸಂಪ್ರದಾಯದಂತಯೇ ಮಾಡಿ ಮುಗಿಸಿದೆ. ಈ ಮೂಲಕ ಅವರ ಆಸೆಯನ್ನು ನೆರವೇರಿಸಿದೆ.

Etv Bharatfor-the-first-time-in-varanshi-french-citizen-will-be-cremated-as-per-hindu-customs
ವಾರಣಾಸಿಯಲ್ಲಿ ಹಿಂದೂ ಸಂಪ್ರದಾಯದಂತೆ ನಡೆದ ಫ್ರೆಂಚ್ ಪ್ರಜೆಯ ಅಂತ್ಯಕ್ರಿಯೆ: ಈಡೇರಿದ ವಿದೇಶಿಗನ ಆಸೆ
author img

By ETV Bharat Karnataka Team

Published : Nov 11, 2023, 7:13 PM IST

ವಾರಾಣಸಿ(ಉತ್ತರ ಪ್ರದೇಶ): ಫ್ರಾನ್ಸ್ ಪ್ರಜೆಯೊಬ್ಬರ ಅಂತಿಮ ಸಂಸ್ಕಾರವನ್ನು ಇದೆ ಮೊದಲ ಬಾರಿಗೆ ಹಿಂದೂ ಸಂಪ್ರದಾಯಗಳೊಂದಿಗೆ ಹರಿಶ್ಚಂದ್ರ ಘಾಟ್​ನಲ್ಲಿ ನೆರವೇರಿಸಲಾಗಿದೆ. ಫ್ರಾನ್ಸ್ ಪ್ರಜೆ ಮೈಕಲ್ ಕೆಲ ದಿನಗಳ ಹಿಂದೆ ಮೋಕ್ಷವನ್ನು ಪಡೆಯಲು ಕಾಶಿಗೆ ಆಗಮಿಸಿದ್ದರು. ಮೂರು ದಿನಗಳ ಹಿಂದೆ ಮೈಕೆಲ್​ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ದೇಹವನ್ನು ಕಾಶಿ ಹಿಂದೂ ವಿಶ್ವವಿದ್ಯಾಲಯದ ಶವಾಗಾರದಲ್ಲಿ ಇರಿಸಲಾಗಿತ್ತು. ಇಂದು ಮರಣೋತ್ತರ ಪರೀಕ್ಷೆ ಬಳಿಕ ಮಧ್ಯಾಹ್ನ 2 ಗಂಟೆಗೆ ಹರಿಶ್ಚಂದ್ರ ಘಾಟ್‌ಗೆ ಪಾರ್ಥಿವ ಶರೀರ ತಂದು, ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.

ಆಧ್ಯಾತ್ಮಿಕ ಮಹತ್ವವನ್ನು ನಂಬುವ ಜನರು ತಮ್ಮ ಜೀವನದ ಕೊನೆಯ ಕ್ಷಣಗಳನ್ನು ಕಾಶಿಯಲ್ಲಿ ಕಳೆಯಲು ಬಯಸುತ್ತಾರೆ. ಅದರಂತೆ ಫ್ರೆಂಚ್ ಪ್ರಜೆ ಮೈಕೆಲ್ ಇಂತಹ ಅದೃಷ್ಟವನ್ನು ಪಡೆದರು. ಅನಾರೋಗ್ಯದ ನಂತರ ಅವರು ತಮ್ಮ ಜೀವನದ ಅಂತಿಮ ಕ್ಷಣಗಳನ್ನು ಕಳೆಯಲು ಕಾಶಿಗೆ ಬಂದಿದ್ದರು. ಬಹಳಷ್ಟು ಶ್ರಮ ವಹಿಸಿದ ನಂತರ ಅವರಿಗೆ ಇಲ್ಲಿ ತಂಗಲು ಕೊಠಡಿ ಸಿಕ್ಕಿತು. ಅವರು ಕಾಶಿಯಲ್ಲಿ ಸುಮಾರು 20 ದಿನಗಳನ್ನು ಕಳೆದಿದ್ದರು.

ಕಾಶಿಯಲ್ಲಿ ಸತ್ತರೆ ಸ್ವರ್ಗ ಸಿಗುತ್ತದೆ ಎಂದು ಪುಸ್ತಕದಲ್ಲಿ ಓದಿ ತಿಳಿದುಕೊಂಡೆ ಎಂದು ಮೈಕೆಲ್ ಹೇಳಿದ್ದರು. ಇದಾದ ನಂತರ ಅವರು ತಮ್ಮ ಕುಟುಂಬವನ್ನು ತೊರೆದು ವಾರಾಣಸಿಗೆ ಆಗಮಿಸಿದ್ದರು. ಮೈಕೆಲ್​ ಅವಿವಾಹಿತರಾಗಿದ್ದರು. ಮೈಕೆಲ್ ವಿದೇಶಿ ಪ್ರಜೆಯಾದ್ದರಿಂದ ಯಾರು ಅವರಿಗೆ ಮನೆ ಬಾಡಿಗೆ ನೀಡಿರಲಿಲ್ಲ. ನಂತರ, ಮೈಕೆಲ್ ಅತಿಥಿ ಗೃಹದಲ್ಲಿ ವಾಸಿಸಲು ಪ್ರಾರಂಭಿಸಿದ್ದರು. ಸುಮಾರು 10 ದಿನಗಳ ಕಾಲ ಅಲ್ಲಿಯೇ ಇದ್ದ ಅವರು ಅನಾರೋಗ್ಯದ ಕಾರಣ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು.

ಮೈಕೆಲ್ ಪ್ರಜ್ಞಾಹೀನರಾದ ನಂತರ ಅವರನ್ನು ಕಬೀರಚೌರಾ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಹಿತಿಯ ಪ್ರಕಾರ, ಮೈಕೆಲ್ ಕೂಡ 10 ದಿನಗಳ ಕಾಲ ಆಸ್ಪತ್ರೆಯ ಬೆಡ್‌ ಮೇಲೆಯೇ ಇದ್ದರು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಮಾಹಿತಿ ಪಡೆದು, ಬಳಿಕ ಈ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಇದಾದ ಬಳಿಕ ಜಿಲ್ಲಾಡಳಿತ ಕ್ರಮಕೈಗೊಂಡು. ಘಾಟ್‌ನಲ್ಲಿರುವ ಅಪ್ನಾಘರ್ ಆಶ್ರಮದಲ್ಲಿ ಅವರಿಗೆ ಉಳಿಯಲು ವ್ಯವಸ್ಥೆ ಮಾಡಿತ್ತು.

ಮೈಕೆಲ್ ಅವರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದ ಪ್ರಕಾರ ನಡೆಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಮೈಕೆಲ್ ಅವರ ದೇಹವನ್ನು ಶುದ್ಧೀಕರಿಸಿ, ಬಿಳಿ ಹೊದಿಕೆಯಿಂದ ಮುಚ್ಚಿ, ಇದರ ನಂತರ ಅವರನ್ನು ಶ್ರೀಗಂಧ ಮತ್ತು ತುಪ್ಪ- ಅಗರಬತ್ತಿ ಬಳಸಿ ಅಂತ್ಯಕ್ರಿಯೆ ಮಾಡಲಾಯಿತು. ಈ ವೇಳೆ ಮೈಕೆಲ್ ಅವರ ಪಾರ್ಟ್​ನರ್​ ಆಮಿ ಕೂಡ ಉಪಸ್ಥಿತರಿದ್ದರು. ವಾರಾಣಸಿ ಆಯುಕ್ತ ಕೌಶಲ್ ರಾಜ್ ಶರ್ಮಾ ಈ ಸಂಪೂರ್ಣ ಪ್ರಕ್ರಿಯೆಯ ವೆಚ್ಚವನ್ನು ಭರಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ದೀಪೋತ್ಸವ : 24 ಲಕ್ಷ ದೀಪಗಳಿಂದ ಗಿನ್ನೆಸ್​ ದಾಖಲೆಗೆ ಸಜ್ಜು, ಜಾರ್ಖಂಡ್​ನ ಆದಿವಾಸಿಗಳು ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.