ETV Bharat / bharat

ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿ ಆರೋಪ: ದಿವಂಗತ ಗಿಲಾನಿ ಕುಟುಂಬದ ವಿರುದ್ಧ FIR

ಗಿಲಾನಿ ಮೃತದೇಹವನ್ನು ಬಲವಂತವಾಗಿ ಪೊಲೀಸರು ತೆಗೆದುಕೊಂಡು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಅದಲ್ಲದೇ ಗಿಲಾನಿ ಕುಟುಂಬದ ಮಹಿಳೆಯರನ್ನು ಥಳಿಸಿದ್ದಾರೆಂಬ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.

For indulging in 'anti-national activities', police registers FIR against Geelani's family members and others
ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿ ಆರೋಪ: ದಿವಂಗತ ಗೀಲಾನಿ ಕುಟುಂಬದ ವಿರುದ್ಧ ಎಫ್​ಐಆರ್​
author img

By

Published : Sep 4, 2021, 11:16 PM IST

ಶ್ರೀನಗರ(ಜಮ್ಮು-ಕಾಶ್ಮೀರ): ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ, ದಿವಂಗತ ಸೈಯದ್ ಅಲಿ ಗಿಲಾನಿ ಕುಟುಂಬದ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸೆಪ್ಟೆಂಬರ್ 2ರಂದು ಬದ್ಗಾಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಗಿಲಾನಿ ಅಂತ್ಯ ಸಂಸ್ಕಾರದ ವೇಳೆ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದಲ್ಲಿಯೂ ಗಿಲಾನಿ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಸೈಯದ್ ಅಲಿ ಗಿಲಾನಿ ಮೃತದೇಹಕ್ಕೆ ಪಾಕಿಸ್ತಾನದ ಧ್ವಜವನ್ನು ಹೊದಿಸಿದವರ ಮೇಲೆಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ನಮ್ಮ ತಂದೆಯ ಮೃತದೇಹವನ್ನು ಬಲವಂತವಾಗಿ ಪೊಲೀಸರು ತೆಗೆದುಕೊಂಡು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಅದಲ್ಲದೇ ಮನೆಯ ಮಹಿಳೆಯರನ್ನು ಮತ್ತು ಕುಟುಂಬಸ್ಥರನ್ನು ಥಳಿಸಿದ್ದಾರೆ ಎಂಬ ಗಿಲಾನಿ ಪುತ್ರ ನಸೀಮ್ ಗಿಲಾನಿ ಆರೋಪವನ್ನು ಪೊಲೀಸರು ತಳ್ಳಿ ಹಾಕಿದ್ದಾರೆ.

ಪೊಲೀಸರ ವಿರುದ್ಧದ ಆರೋಪಗಳು ಆಧಾರ ರಹಿತವಾಗಿವೆ, ಗಿಲಾನಿ ಅಂತಿಮ ವಿಧಿ-ವಿಧಾನಗಳನ್ನು ಪೂರೈಸಲು ಪೊಲೀಸರು ಕುಟುಂಬಕ್ಕೆ ಎಲ್ಲ ರೀತಿಯಿಂದಲೂ ಸಹಾಯ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪಾಕ್​ ಐಎಸ್​ಐ ಮುಖ್ಯಸ್ಥ ಅಫ್ಘನ್​ಗೆ ಭೇಟಿ : ಅಂತಾರಾಷ್ಟ್ರೀಯ ಸಮುದಾಯದಲ್ಲಿ ಕುತೂಹಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.