ಚುರು (ರಾಜಸ್ಥಾನ): ಜಿಲ್ಲೆಯ ಸರ್ದಾರ್ ಶಹರ್ ಪಟ್ಟಣದಲ್ಲಿ ಮದುವೆ ಊಟ ಸೇವಿಸಿ 45 ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಅಸ್ವಸ್ಥರಾದವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಔತಣಕೂಟ ಮುಗಿಯುತ್ತಿದ್ದಂತೆ ಅಲ್ಲಿದ್ದವರಲ್ಲಿ ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿತ್ತು. ಅಲ್ಲಿಯೇ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿಯಿಂದಲೂ ತಮ್ಮವರ ನೋಡಲು ಆಸ್ಪತ್ರೆಗೆ ಕುಟುಂಬಸ್ಥರು ಆಗಮಿಸುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಆದರೆ, ಆಸ್ಪತ್ರೆಯಲ್ಲಿ ಕಡಿಮೆ ಹಾಸಿಗೆಯ ವ್ಯವಸ್ಥೆ ಇದ್ದು, ಒಂದು ಬೆಡ್ನಲ್ಲಿ ಇಬ್ಬರು - ಮೂವರಿಗೆ ಚಿಕಿತ್ಸೆ ನೀಡಿದರೂ ಹಾಸಿಗೆ ಕೊರತೆಯಾಗಿದ್ದು, ಕೆಲವರನ್ನ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನಿಡಲಾಗುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಅನಾರೋಗ್ಯ ಪೀಡಿತರು ಒಟ್ಟುಗೂಡಿದ್ದರಿಂದ, ಆಸ್ಪತ್ರೆ ಉಸ್ತುವಾರಿ ತಡರಾತ್ರಿ ಇಡೀ ವೈದ್ಯಕೀಯ ಸಿಬ್ಬಂದಿಗೆ ಕರೆ ಮಾಡಿ ಚಿಕಿತ್ಸೆ ಆರಂಭಿಸಿದರು. ರಾತ್ರಿಯಿಡೀ ರೋಗಿಗಳ ಆಗಮನ ಮುಂದುವರಿಯಿತು. ಅನೇಕ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿಯೂ ದಾಖಲಾಗಿದ್ದಾರೆ. ಘಟನೆ ಸಂಬಂಧ ಸರ್ದಾರ್ ಶಹರ್ ಪೋಲಿಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಘಟನೆಯಲ್ಲಿ ಯಾವುದೇ ಪ್ರಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಓದಿ: ಗ್ರೆನೇಡ್ ಸ್ಫೋಟಿಸಿ ತಂದೆ, ಮಗಳ ಸಾವು: ಘಟನೆ ಸುತ್ತ ನಾನಾ ಅನುಮಾನ!