ETV Bharat / bharat

ಗುಜರಾತ್‌ನಲ್ಲಿ ಪ್ರವಾಹ ಪರಿಸ್ಥಿತಿ: ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆ

ಗುಜರಾತ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆ ಮತ್ತು ಪ್ರವಾಹಕ್ಕೆ 61 ಜನರು ಮೃತಪಟ್ಟಿದ್ದಾರೆ. ಗುಜರಾತ್, ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರದಲ್ಲಿ ಪ್ರವಾಹದಿಂದ ಹೆಚ್ಚು ಹಾನಿಯಾಗಿದೆ.

ಗುಜರಾತ್‌ನಲ್ಲಿ ಪ್ರವಾಹ ಪರಿಸ್ಥಿತಿ
ಗುಜರಾತ್‌ನಲ್ಲಿ ಪ್ರವಾಹ ಪರಿಸ್ಥಿತಿ
author img

By

Published : Jul 12, 2022, 4:10 PM IST

ಅಹಮದಾಬಾದ್: ಗುಜರಾತ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆ ಮತ್ತು ಪ್ರವಾಹಕ್ಕೆ 61 ಜನರು ಮೃತಪಟ್ಟಿದ್ದಾರೆ. ಗುಜರಾತ್, ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರದಲ್ಲಿ ಪ್ರವಾಹದಿಂದ ಹೆಚ್ಚು ಹಾನಿಯಾಗಿದೆ. ಸರ್ಕಾರದ ಮಾಹಿತಿ ಪ್ರಕಾರ, ಗುಜರಾತ್‌ನಲ್ಲಿ ಮಳೆಯಿಂದ 10 ಸಾವಿರಕ್ಕೂ ಹೆಚ್ಚು ಜನ ಸಂತ್ರಸ್ತರಾಗಿದ್ದು, ಅವರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ.

ಸೋಮವಾರ ಸಂಜೆ 6 ಗಂಟೆಯವರೆಗೆ ರಾಜ್ಯದಲ್ಲಿ ಮಳೆಯಿಂದಾಗಿ 10,700 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, ಗುಜರಾತ್‌ನ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿರುವ ಈ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜೀ ಅವರೊಂದಿಗೆ ಮಾತನಾಡಿದ್ದೇನೆ. ಮೋದಿ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವ ಭರವಸೆ ನೀಡಿದ್ದೇನೆ ಎಂದಿದ್ದಾರೆ.

ಗುಜರಾತ್ ಆಡಳಿತ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಸಂತ್ರಸ್ತ ಜನರಿಗೆ ತ್ವರಿತ ನೆರವು ನೀಡುವಲ್ಲಿ ತೊಡಗಿವೆ. ಗುಜರಾತ್‌ನಲ್ಲಿ ನರ್ಮದಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಕಾರಣದಿಂದಾಗಿ ಕರ್ಜನ್ ಅಣೆಕಟ್ಟಿನ 9 ಗೇಟ್‌ಗಳನ್ನು ತೆರೆಯಲಾಗಿದೆ.

ಈ 9 ಗೇಟ್​ಗಳಿಂದ 2 ಲಕ್ಷ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಭರೂಚ್ ಮತ್ತು ನರ್ಮದಾ ಜಿಲ್ಲೆಗಳ ತಗ್ಗು ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದೆ. ಭರೂಚ್‌ನ 12 ಗ್ರಾಮಗಳು ಮತ್ತು ನರ್ಮದೆಯ 8 ಗ್ರಾಮಗಳನ್ನು ಅಲರ್ಟ್ ಮೋಡ್‌ನಲ್ಲಿ ಇರಿಸಲಾಗಿದೆ. ಪ್ರವಾಹದಿಂದಾಗಿ ಇಲ್ಲಿ ಪರಿಸ್ಥಿತಿ ಹದಗೆಡುವ ನಿರೀಕ್ಷೆಯಿದೆ.

ಇದನ್ನೂ ಓದಿ: 4 ದಿನದ ಬಳಿಕ ಬಾಲ್ಟಾಲ್​ ಕ್ಯಾಂಪ್​ನಿಂದ ಅಮರನಾಥ ಯಾತ್ರೆ ಪುನಾರಂಭ

ವಾಸ್ತವವಾಗಿ, ಕರ್ಜನ್ ನದಿಯ ನೀರು ನೇರವಾಗಿ ನರ್ಮದಾ ನದಿಯನ್ನು ಸಂಧಿಸುತ್ತದೆ. ಇದರಿಂದಾಗಿ ಭರೂಚ್ ಬಳಿ ನರ್ಮದೆಯ ಮಟ್ಟವು ಹೆಚ್ಚಾಗುತ್ತದೆ. ಅಹಮದಾಬಾದ್‌ನಲ್ಲಿ ಸೋಮವಾರ ತಡರಾತ್ರಿ ಮತ್ತೆ ಆರಂಭವಾದ ಮಳೆಯಿಂದ ಸಮಸ್ಯೆ ಹೆಚ್ಚಿದೆ.

ಇಲ್ಲಿ ಸಂಜೆ 6ರಿಂದ ಬೆಳಗಿನ ಜಾವ 5ರವರೆಗೆ ಸುಮಾರು 456 ಮಿ.ಮೀ ಮಳೆ ದಾಖಲಾಗಿದೆ. ಛೋಟಾ ಉದಯಪುರದ ಬೊಡೆಲಿಯಲ್ಲಿ 6 ಗಂಟೆಗಳಲ್ಲಿ 411 ಮಿಮೀ ಮಳೆ ದಾಖಲಾಗಿದೆ.

  • Dang, Gujarat | Landslide at several places in Saputara Waghai road as incessant rainfall continues to lash the area, movement of vehicles affected pic.twitter.com/3wtIDC3KYC

    — ANI (@ANI) July 11, 2022 " class="align-text-top noRightClick twitterSection" data=" ">

ಗುಜರಾತ್‌ನಲ್ಲಿ ಸೋಮವಾರದವರೆಗಿನ ಅಂಕಿ- ಅಂಶಗಳ ಪ್ರಕಾರ, 61 ಜನರು ಸಾವನ್ನಪ್ಪಿದ್ದಾರೆ. ಎನ್‌ಡಿಆರ್‌ಎಫ್‌ನ 13 ತಂಡಗಳು ಗುಜರಾತ್‌ನಲ್ಲಿ ಕೆಲಸದಲ್ಲಿ ತೊಡಗಿವೆ. ಈ ಪೈಕಿ ನವಸಾರಿಯಲ್ಲಿ ಎರಡು ತಂಡಗಳು, ಗಿರ್ ಸೋಮನಾಥ್, ಸೂರತ್, ರಾಜ್‌ಕೋಟ್, ಬನಸ್ಕಾಂತ, ವಲ್ಸಾದ್, ಭಾವನಗರ, ಕಚ್, ಜಾಮ್‌ನಗರ, ಅಮ್ರೇಲಿ, ದ್ವಾರಕಾ ಮತ್ತು ಜುನಾಗಢದಲ್ಲಿ ತಲಾ ಒಂದು ತಂಡಗಳು ಕಾರ್ಯನಿರ್ವಹಿಸುತ್ತಿವೆ.

ಇದಲ್ಲದೇ, ಎಸ್‌ಡಿಆರ್‌ಎಫ್‌ನ 18 ತಂಡಗಳು ರಾಜ್ಯದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಗುಜರಾತ್‌ನಲ್ಲಿ ರಾಜ್ಯ ಹೆದ್ದಾರಿಗಳು ಮತ್ತು ಹಳ್ಳಿಗಳ ರಸ್ತೆಗಳು ಸೇರಿದಂತೆ 300 ಕ್ಕೂ ಹೆಚ್ಚು ರಸ್ತೆಗಳು ಮಳೆಯಿಂದಾಗಿ ಮುಚ್ಚಲ್ಪಟ್ಟಿವೆ. ಮುಂದಿನ 24 ಗಂಟೆಗಳಲ್ಲಿ ಗುಜರಾತ್‌ನಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.