ಕಾಮರೆಡ್ಡಿ: ಜಿಲ್ಲೆಯ ಮಚರೆಡ್ಡಿ ವಲಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಾನ್‌ಪುರ (ಎಂ)ನಲ್ಲಿ ಆರ್‌ಟಿಸಿ ಬಸ್ ಮತ್ತು ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
![Five were killed in road accident in Telangana Five were killed in road accident in Kamareddy Kamareddy crime news Telangana accident news ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವು ಕಾಮರೆಡ್ಡಿ ರಸ್ತೆ ಅಪಘಾತದಲ್ಲಿ ಐವರು ಸಾವು ಕಾಮರೆಡ್ಡಿ ಅಪರಾಧ ಸುದ್ದಿ ತೆಲಂಗಾಣ ಅಪಘಾತ ಸುದ್ದಿ](https://etvbharatimages.akamaized.net/etvbharat/prod-images/whatsapp-image-2022-03-28-at-1021131_2803newsroom_1648443288_659.jpeg)
ಸ್ಥಳೀಯರ ನೆರವಿನಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಕರೀಂನಗರ-1 ಡಿಪೋ ಬಸ್ ಸಿರಿಸಿಲ್ಲದಿಂದ ಕಾಮರೆಡ್ಡಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
![Five were killed in road accident in Telangana Five were killed in road accident in Kamareddy Kamareddy crime news Telangana accident news ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವು ಕಾಮರೆಡ್ಡಿ ರಸ್ತೆ ಅಪಘಾತದಲ್ಲಿ ಐವರು ಸಾವು ಕಾಮರೆಡ್ಡಿ ಅಪರಾಧ ಸುದ್ದಿ ತೆಲಂಗಾಣ ಅಪಘಾತ ಸುದ್ದಿ](https://etvbharatimages.akamaized.net/etvbharat/prod-images/whatsapp-image-2022-03-28-at-102113_2803newsroom_1648443288_546.jpeg)
ಓದಿ: ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ; ನಮಗೆ ಹಿಜಾಬ್ಗಿಂತ ಮಕ್ಕಳ ಭವಿಷ್ಯವೇ ಮುಖ್ಯ ಎಂದ ತಾಯಿ!
ಪೊಲೀಸರು ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಮೃತರಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಬಾಲಕನೊಬ್ಬ ಸೇರಿದ್ದಾರೆ. ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
![Five were killed in road accident in Telangana Five were killed in road accident in Kamareddy Kamareddy crime news Telangana accident news ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವು ಕಾಮರೆಡ್ಡಿ ರಸ್ತೆ ಅಪಘಾತದಲ್ಲಿ ಐವರು ಸಾವು ಕಾಮರೆಡ್ಡಿ ಅಪರಾಧ ಸುದ್ದಿ ತೆಲಂಗಾಣ ಅಪಘಾತ ಸುದ್ದಿ](https://etvbharatimages.akamaized.net/etvbharat/prod-images/whatsapp-image-2022-03-28-at-1022381_2803newsroom_1648443288_75.jpeg)
ಬಸ್ ಟೈಯರ್ ಸ್ಫೋಟಗೊಂಡು ಅಪಘಾತ ಸಂಭವಿಸಿರುವುದರ ಬಗ್ಗೆ ಶಂಕೆ ಇದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.