ಮಧುರೈ, ತಮಿಳುನಾಡು : ಮೀನಾಚಿ ಅಮ್ಮನ ದೇವಸ್ಥಾನದ ವಾರ್ಷಿಕ ಚಿತ್ತಿರೈ ಉತ್ಸವದ ನಿಮಿತ್ತ ನಿನ್ನೆ ಕಲ್ಲಜಗರ್ ದೇವರ ವೈಗೈ ನದಿ ಪ್ರವೇಶ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಮಧುರೈ ನಗರ ಮಾತ್ರವಲ್ಲದೇ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನ ಭಕ್ತರು ಚಿತ್ತಿರೈ ಉತ್ಸವ ವೀಕ್ಷಿಸಲು ಆಗಮಿಸಿದ್ದರು. ಈ ವೇಳೆ, ದುರಾದೃಷ್ಟ ಎಂಬಂತೆ ಕಾಲ್ತುಳಿತದಲ್ಲಿ ಐವರು ಸಾವನ್ನಪ್ಪಿದ್ದಾರೆ.
ಹೌದು, ಮಧುರೈನಿಂದ 21 ಕಿ. ಮೀ ದೂರದಲ್ಲಿರುವ ಕಲ್ಲಜಗರ್ ದೇವಸ್ಥಾನದ ಪ್ರಧಾನ ದೇವತೆಯಾದ ಕಲ್ಲಜಗರ್ ದೇವರ ವಿಗ್ರಹಕ್ಕೆ ಹಸಿರು ಬಟ್ಟೆ ಹೊದಿಸಲಾಗಿತ್ತು. ಇದು ಮುಂಬರುವ ವರ್ಷದಲ್ಲಿ ಸಮೃದ್ಧಿಯನ್ನು ಸೂಚಿಸುತ್ತದೆ. ಜೊತೆಗೆ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಆಡಳಿತ ವಿವಿಧ ವ್ಯವಸ್ಥೆ ಮಾಡಿತ್ತು. ಅಲ್ಲದೇ, ಕಲ್ಲಜಗರ ದರ್ಶನಕ್ಕೆಂದು ಆಗಮಿಸಿದ ಭಕ್ತರು ಉತ್ಸಾಹದಿಂದ ವೈಗೈ ನದಿಗೆ ಇಳಿಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಇದನ್ನೂ ಓದಿ : ಕಾಲ್ತುಳಿತಕ್ಕೆ ಮೂವರು ಸಾವು, ಹಲವರಿಗೆ ಗಂಭೀರ ಗಾಯ.. ಶಿವನ ಪೂಜೆ ವೇಳೆ ದುರಂತ
ಈ ಬೆನ್ನಲ್ಲೇ ಆಳ್ವಾರಪುರಂ ಪ್ರದೇಶದ ಬ್ಯಾರೇಜ್ ಬಳಿ ( 40 ) ವರ್ಷದ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದ್ದು, ಇದನ್ನು ಪೊಲೀಸರು ವಶಪಡಿಸಿಕೊಂಡರು. ಇದಾದ ಬಳಿಕ, ವೈಗೈ ನದಿಯ ಕಲ್ಪಾಲಂ ಪ್ರದೇಶದಲ್ಲಿ 2 ಮೃತದೇಹಗಳು ತೇಲುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಬಳಿಕ ಅಗ್ನಿಶಾಮಕ ದಳದ ನೆರವಿನಿಂದ ಇಬ್ಬರ ಮೃತದೇಹಗಳನ್ನು ಹೊರ ತೆಗೆಯಲಾಯಿತು. ಮೃತರಲ್ಲಿ ಓರ್ವರು ಮಧುರೈನ ವ್ಲಾಚೇರಿ ಜೋಸೆಫ್ ನಗರದ ಪ್ರೇಮಕುಮಾರ್ (18) ಎಂದು ತಿಳಿದು ಬಂದಿದೆ. ಉಳಿದಿಬ್ಬರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮೂವರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಧುರೈ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಇದನ್ನೂ ಓದಿ : ಉಚಿತ ಸೀರೆ ಧೋತಿ ವಿತರಣೆ ವೇಳೆ ತಳ್ಳಾಟ : ನಾಲ್ವರು ಮಹಿಳೆಯರ ಸಾವು, 10 ಜನರಿಗೆ ಗಾಯ
ಈ ನಡುವೆ ಇಂದು ( ಮೇ 6) ಬೆಳಗ್ಗೆ ಮಡಿಚಿಯಂ ಪ್ರದೇಶದಲ್ಲಿ ಚಿತಿರೈ ಹಬ್ಬಕ್ಕೆ ಬಂದಿದ್ದ ಮಧುರೈನ ಎಂಕೆ ಪುರಂನ ಸೂರ್ಯ ಪ್ರಕಾಶ್ (23) ಎಂಬ ಯುವಕ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಅದೇ ರೀತಿ ಮಧುರೈ ವಡಕ್ಕು (ಉತ್ತರ) ಮಾಸಿ ರಸ್ತೆಯಿಂದ ತೀರ್ಥವಾರಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುದಲೈಮುತ್ತು ಎಂಬ ಆಟೋ ಚಾಲಕ ಜನಸಂದಣಿಯಲ್ಲಿ ಸಿಲುಕಿ ಪ್ರಜ್ಞೆ ತಪ್ಪಿದ್ದು, ಬಳಿಕ ಸಾವನ್ನಪ್ಪಿದ್ದಾರೆ. ಮಧುರೈನ ಕಲ್ಲಜಗರ್ ಚಿತ್ತಿರೈ ಉತ್ಸವಕ್ಕೆಂದು ಬಂದಿದ್ದ ಐವರು ಮೃತಪಟ್ಟಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಭಾರತ - ಆಸ್ಟ್ರೇಲಿಯಾ ಟಿ20 ಪಂದ್ಯ : ಹೈದರಾಬಾದ್ನಲ್ಲಿ ಟಿಕೆಟ್ಗಾಗಿ ಕಾಲ್ತುಳಿತ, 7 ಗಂಟೆ ನಂತರ ಆನ್ಲೈನ್ನಲ್ಲಿ ವಿತರಣೆ