ETV Bharat / bharat

ಸಂತೆ ಮುಗಿಸಿ ಬಸ್​ಗಾಗಿ ಕಾಯುತ್ತಿದ್ದಾಗ ಐಷರ್ ಡಿಕ್ಕಿ ​: ಐವರು ಸಾವು - ರಸ್ತೆ ಅಪಘಾತ

ಐಷರ್​ ವಾಹನ ಡಿಕ್ಕಿಯಾಗಿ ಐವರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮಹೆಬೂಬ್​ನಗರದಲ್ಲಿ ನಡೆದಿದೆ.

ಸಂತೆ ಮುಗಿಸಿ ಬಸ್​ಗಾಗಿ ಕಾಯುತ್ತಿದ್ದವರಿಗೆ ಡಿಕ್ಕಿ ಹೊಡೆದ ಐಚರ್

author img

By ETV Bharat Karnataka Team

Published : Jan 6, 2024, 9:20 AM IST

Updated : Jan 6, 2024, 10:42 AM IST

ಮಹೆಬೂಬ್​ನಗರ: ಐಷರ್​ ವಾಹನ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿಯ ಬಾಲನಗರ ಚೌಕ್​ ಬಳಿ ಶುಕ್ರವಾರ ಸಂಜೆ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಬಾಳನಗರದಲ್ಲಿ ಎಂದಿನಂತೆ ಶುಕ್ರವಾರದ ಸಂತೆಗೆ ಜನ ಸೇರಿದ್ದರು. ಸಂತೆ ಖರೀದಿ ಬಳಿಕ ತಮ್ಮ ಊರಿಗೆ ಹಿಂತಿರುಗಲು ಜನರು ಬಸ್​​ಗಾಗಿ ಕಾಯುತ್ತಿದ್ದರು. ಸಂಜೆ 5.50 ಗಂಟೆ ಸುಮಾರಿಗೆ ಕೆಲವರು ಮನೆಗೆ ತೆರಳಲು ಆಟೋವೊಂದನ್ನು ಹತ್ತಿದ್ದು, ಇನ್ನೂ ಕೆಲ ಜನರು ರಸ್ತೆ ಪಕ್ಕದಲ್ಲೇ ನಿಂತಿದ್ದರು. ಇದೇ ವೇಳೆ ಹೈದ್ರಾಬಾದ್‌ನಿಂದ ಜಡಚರ್ಲಾ ಕಡೆಗೆ ತೆರಳುತ್ತಿದ್ದ ಐಷರ್​ ವಾಹನ ನಿಯಂತ್ರಣ ಕಳೆದುಕೊಂಡು ನಿಂತಿದ್ದ ಜನರು, ಆಟೋ ಹಾಗೂ ಬೈಕ್​ನಲ್ಲಿ ತೆರಳುತ್ತಿದ್ದವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಐಷರ್​ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯಲ್ಲಿ ಬೀಬಿನಗರ ಪಂಚಾಯತ್ ಪಾರಿ ಲೋಕನಾಯಕ ತಾಂಡಾದ ಪಟ್ಲಾವತ್ ಪನ್ನಿ (65), ಆಕೆಯ ಮೊಮ್ಮಗಳು ಜುನ್ನು (2), ಮೋತಿಗನಪುರದ ಮೋಕ್ಷಿತಾ (8) ಮತ್ತು ಸುನೀತಾ (32) ಹಾಗೂ ಬಾಲಾನಗರ ಮಂಡಲ ಕೇಂದ್ರದ ಜಸ್ವಂತ್ (10) ಎಂಬುವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಉಳಿದಂತೆ ಭದ್ರಸಿಂಗ್ ಮತ್ತು ಮೌನಿಕಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಭದ್ರಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ರವಾನಿಸಲಾಗಿದೆ.

ಜನರಿಂದ ಐಷರ್​ಗೆ ಬೆಂಕಿ ಹಚ್ಚಿ ಆಕ್ರೋಶ: ಘಟನೆಯಿಂದ ಉದ್ರಿಕ್ತಗೊಂಡ ಸ್ಥಳೀಯರು ಐಷರ್​ ವಾಹನಕ್ಕೆ ಬೆಂಕಿ ಹಚ್ಚಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ವಾಹನವನ್ನೂ ತಡೆ ಹಿಡಿದಿದ್ದಾರೆ. ಅಲ್ಲದೇ, ಜಡಚರ್ಲ ಗ್ರಾಮಾಂತರ ಪೊಲೀಸ್ ಠಾಣೆ ಸಿಐ ಜಮುಲಪ್ಪ ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿ ಪ್ರತಿಭಟನೆ ತಡೆಯಲು ಮುಂದಾಗಿದ್ದು, ಅವರ ಮೇಲೆಯೂ ಜನರು ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದ ಪೊಲೀಸ್​ ಸಿಬ್ಬಂದಿ ತಪ್ಪಿಸಿಕೊಂಡು ಅಂಗಡಿಯೊಂದರ ಒಳ ಹೋಗಿ ಶಟರ್ ಮುಚ್ಚಿ ಅಡಗಿ ಕುಳಿತಿದ್ದಾರೆ. ಆದರೂ ಬಿಡದ ಕೆಲವರು ಶಟರ್​ ಮುರಿಯಲು ಯತ್ನಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಮಹೆಬೂಬ್​ನಗರ ಡಿಎಸ್​​ಪಿ ಮಹೇಶ್ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಬಾಲನಗರಕ್ಕೆ ತೆರಳಿ ಹಲ್ಲೆಗೆ ಯತ್ನಿಸಿದ ಜನರನ್ನು ವಶಕ್ಕೆ ಪಡೆದಿದ್ದಾರೆ.

ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಗಂಟೆ ಕಾಲ ಸುಮಾರು 10 ಕಿಲೋ ಮೀಟರ್​ ದೂರದವರೆಗೆ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಪಘಾತದ ಬಳಿಕ ಪರಾರಿಯಾಗಿದ ಐಷರ್​ ಚಾಲಕನ ಬಂಧನಕ್ಕೆ ಶೋಧ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬೆನಾಪೋಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ; ನಾಲ್ವರು ಸಾವು

Last Updated : Jan 6, 2024, 10:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.