ಸಿವಾನ್(ಬಿಹಾರ): ತಾಯಿಯ ಸಾವಿನ ಸೂತಕ ಬಿಡಲು ಸ್ನಾನಕ್ಕೆಂದು ನದಿಗಿಳಿದ ತಂದೆ, ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ನೀರುಪಾಲಾದ ದುರಂತ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಜರ್ಹಿ ನದಿ ದುರಂತ: ಸಿವಾನ್ ಜಿಲ್ಲೆಯ ಅನಸವ್ ಪ್ರದೇಶದ ಜರ್ಹಿ ನದಿಯಲ್ಲಿ ಈ ದುರ್ಘಟನೆ ನಡೆದಿದೆ. ಎರಡು ದಿನಗಳ ಹಿಂದಷ್ಟೇ ತಾಯಿ ಮೃತಪಟ್ಟಿದ್ದರು. ಶುಕ್ರವಾರ ಶವಸಂಸ್ಕಾರ ಮಾಡಿದ ಬಳಿಕ ಸೂತಕವನ್ನು ಬಿಡಲು ಸ್ನಾನಕ್ಕೆಂದು ತಂದೆ, ನಾಲ್ವರು ಮಕ್ಕಳು ಜರ್ಹಿ ನದಿಗೆ ಇಳಿದಿದ್ದಾರೆ.
ಈ ವೇಳೆ ರಭಸದಿಂದ ಹರಿಯುತ್ತಿದ್ದ ನದಿಯಲ್ಲಿ ಇಬ್ಬರು ಮಕ್ಕಳು ಕಾಲು ಜಾರಿ ಬಿದ್ದು ಕೊಚ್ಚಿಕೊಂಡು ಹೋಗುತ್ತಿದ್ದಾಗ, ಅವರನ್ನು ಕಾಪಾಡಲು ತಂದೆ ಇನ್ನಿಬ್ಬರು ಮಕ್ಕಳು ನದಿಗೆ ಧುಮುಕಿದ್ದಾರೆ. ಈ ವೇಳೆ ಐವರೂ ನೀರಿನ ರಭಸಕ್ಕೆ ನದಿಯಲ್ಲಿ ಮುಳುಗಿ ದುರಂತ ಅಂತ್ಯ ಕಂಡಿದ್ದಾರೆ.
ಸ್ಥಳೀಯ ಈಜುಗಾರರ ಸಹಾಯದಿಂದ ಎಲ್ಲ ಐದೂ ಮೃತದೇಹಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓದಿ: ನ್ಯೂಯಾರ್ಕ್ನಲ್ಲಿ ಭಾರತೀಯ ಲೇಖಕ ಸಲ್ಮಾನ್ ರಶ್ದಿ ಮೇಲೆ ಮಾರಣಾಂತಿಕ ಹಲ್ಲೆ