ETV Bharat / bharat

ಬೈಕ್​ಗಳಿಗೆ ಡಿಕ್ಕಿ ಹೊಡೆದ ಕಾರ್​: ಒಂದೇ ಕುಟುಂಬದ ಮೂವರು ಸೇರಿ ಐವರ ದುರ್ಮರಣ

author img

By

Published : May 28, 2021, 8:35 AM IST

ಅತೀವೇಗ ತಿಥಿ ಬೇಗ ಅನ್ನೋ ಮಾತಿದೆ. ಇದಕ್ಕೆ ಉದಾಹರಣೆಯಾಗಿ ಉತ್ತರ ಪ್ರದೇಶದಲ್ಲೊಂದು ದುರಂತ ಸಂಭವಿಸಿದೆ. ಅತಿ ವೇಗವಾಗಿ ಬಂದ ಕಾರೊಂದು ನಿಯಂತ್ರಣ ಕಳೆದುಕೊಂಡು ಬೈಕ್​ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸೇರಿ ಐವರು ಸಾವನ್ನಪ್ಪಿದ್ದಾರೆ.

Five killed in road accident, Five killed in road accident at unnao, Fatehpur road accident, unnao road accident news, ರಸ್ತೆ ಅಪಘಾತದಲ್ಲಿ ಐವರು ಸಾವು, ಉನ್ನಾವೋ ರಸ್ತೆ ಅಪಘಾತದಲ್ಲಿ ಐವರು ಸಾವು,  ಉನ್ನಾವೋ ರಸ್ತೆ ಅಪಘಾತ,  ಉನ್ನಾವೋ ರಸ್ತೆ ಅಪಘಾತ ಸುದ್ದಿ,
ಅಪಘಾತದ ಬಗ್ಗೆ ಎಸ್​ಪಿ ಮಾಹಿತಿ

ಉನ್ನಾವೋ(ಉತ್ತರ ಪ್ರದೇಶ): ವೇಗದೂತ ಕಾರ್​ವೊಂದು ನಿಯಂತ್ರಣ ತಪ್ಪಿ ವಾಹನಗಳಿಗೆ ಗುದ್ದಿ ಹಳ್ಳಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಫತೇಪುರ ಚೌರಾಸಿ ಬಳಿ ನಡೆದಿದೆ.

ಈ ಬಗ್ಗೆ ಮಾಹಿತಿ ನೀಡಿದ ಎಸ್​ಪಿ ಆನಂದ್​ ಕುಲ್ಕರ್ಣಿ, ನಿನ್ನೆ ಸಂಜೆ 7ರ ಸುಮಾರಿಗೆ ಕಾಜೀಪುರ ಬಂಗರ್​ ಗ್ರಾಮದ ರಾಜಾರಾಮ್​ ತನ್ನ ಮಗ ಮತ್ತು ಮೊಮ್ಮಗನ ಜೊತೆ ಬೈಕ್​ನಲ್ಲಿ ಔಷಧಿ ತರಲು ತೆರಳುತ್ತಿದ್ದರು. ಈ ವೇಳೆ ಅತೀ ವೇಗದಲ್ಲಿದ್ದ ಕಾರ್​ ನಿಯಂತ್ರಣ ಕಳೆದುಕೊಂಡು ರಾಜಾರಾಮ್​ ಬೈಕ್​ ಸೇರಿದಂತೆ ಎರಡು ಬೈಕ್​ಗಳು, ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಮರಕ್ಕೆ ಡಿಕ್ಕಿಯಾಗಿ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿದೆ ಎಂದರು.

ಅಪಘಾತದ ಬಗ್ಗೆ ಎಸ್​ಪಿ ಮಾಹಿತಿ

ಬೈಕ್​ನಲ್ಲಿದ್ದ ರಾಕೇಶ್​ (35), ಆತನ ತಂದೆ ರಾಜಾರಾಮ್​ (65) ಮತ್ತು ರಾಕೇಶ್​ ಮಗ ರಿತಿಕ್​ (5) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಂದು ಬೈಕ್​ನಲ್ಲಿ ಕೆಲಸದ ನಿಮಿತ್ತ ಮೂವರು ಮಾಧವ್​ಗಂಜ್​ನಿಂದ ಉನ್ನಾವೋಗೆ ಬರುತ್ತಿದ್ದರು. ಈ ವೇಳೆ ಕಾರು ಡಿಕ್ಕಿಯ ರಭಸಕ್ಕೆ ಅನೀಶ್​ (25) ಮತ್ತು ಮೋಹಿತ್​ (38) ಸಾವನ್ನಪ್ಪಿದ್ದು, ಸೌರಭ್​ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಪಘಾತದಲ್ಲಿ ಸೈಕಲ್​ ಸವಾರ ದೀಪಕ್​ಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಎಸ್​ಪಿ ತಿಳಿಸಿದರು.

ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮೃತರಿಗೆ 2 ಲಕ್ಷ ರೂ ಹಾಗೂ ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೇವೆಗಳನ್ನು ಒದಗಿಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.