ETV Bharat / bharat

ಕಂದಕಕ್ಕೆ ಉರುಳಿ ಬಿದ್ದ ಬಸ್​: ಐವರು ದುರ್ಮರಣ - ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆ

ಜಮ್ಮು ಮತ್ತು ಕಾಶ್ಮೀರದ ಪೂಂಚ್​ನಿಂದ ರಾಜೌರಿ ಕಡೆ ಸಂಚರಿಸುತ್ತಿದ್ದ ಬಸ್​ ಕಂದಕಕ್ಕೆ ಉರುಳಿ ಬಿದ್ದಿದೆ.

five-died-in-rajaouri-road-accident
ಕಂದಕಕ್ಕೆ ಉರುಳಿ ಬಿದ್ದ ಬಸ್​: ಐವರ ದುರ್ಮರಣ
author img

By

Published : Sep 15, 2022, 3:48 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಬಸ್​ವೊಂದು ಕಂದಕಕ್ಕೆ ಉರುಳಿ ಬಿದ್ದು ಐವರು ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆದಿದೆ. ಬಸ್​ನಲ್ಲಿದ್ದ ಅನೇಕ ಪ್ರಯಾಣಿಕರು ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ.

ಪೂಂಚ್​ನಿಂದ ರಾಜೌರಿ ಕಡೆ ಬಸ್​ ಸಂಚರಿಸುತ್ತಿತ್ತು. ವೇಳೆ ಭಿಂಬರ್ ಗಲಿ ಸಮೀಪ ಆಳದ ಕಂದಕಕ್ಕೆ ಬಸ್​ ಉರುಳಿ ಬಿದ್ದಿದೆ. ಪರಿಣಾಮ ಐವರು ಸಾವಿಗೀಡಾಗಿದ್ದಾರೆ. ಈ ಅಪಘಾತದ ವಿಷಯ ತಿಳಿದ ಮಂಜ್​ಕೋಟ್​ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ನೆರವೊಂದಿಗೆ ರಕ್ಷಣೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಅಪಘಾತವಾದ್ರೂ ಶಾಲೆಗೆ ತೆರಳಿದ್ದ 7 ವರ್ಷದ ಬಾಲಕ ಸಾವು: ಬೆಂಗಳೂರಲ್ಲಿ ಸ್ಕೂಲ್ ಬಸ್ ಚಾಲಕ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.