ETV Bharat / bharat

ಪುಣೆ ಅಹಮದ್​​​ನಗರ ಹೆದ್ದಾರಿಯಲ್ಲಿ ಭೀಕರ ಅಪಘಾತ.. ಐವರ ದುರ್ಮರಣ - ಈಟಿವಿ ಭಾರತ ಕನ್ನಡ

ಪುಣೆ ಅಹಮದ್​​​ನಗರ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

road accident on Pune Ahmednagar highway
ಪುಣೆ ಅಹಮದ್‌ ನಗರ ಹೆದ್ದಾರಿಯಲ್ಲಿ ಭೀಕರ ಅಪಘಾತ
author img

By

Published : Aug 17, 2022, 8:42 AM IST

Updated : Aug 17, 2022, 9:54 AM IST

ಪುಣೆ(ಮಹಾರಾಷ್ಟ್ರ): ಪುಣೆ ಅಹಮದ್‌ನಗರ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನಪ್ಪಿದ್ದು, ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಮೃತರನ್ನು ಸಂಜಯ್ ಭೌಸಾಹೇಬ್ ಮ್ಹಾಸ್ಕೆ(53), ರಾಮ್ ಭೌಸಾಹೇಬ್ ಮ್ಹಾಸ್ಕೆ (45), ರಾಮ್ ರಾಜು ಮ್ಹಾಸ್ಕೆ (7), ಹರ್ಷದಾ ರಾಮ್ ಮ್ಹಾಸ್ಕೆ (4) ಹಾಗೂ ವಿಶಾಲ್ ಸಂಜಯ್ ಮ್ಹಾಸ್ಕೆ(16) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಸಾಧನಾ ರಾಮ್ ಮ್ಹಾಸ್ಕೆ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೂಲಗಳ ಪ್ರಕಾರ, ರಸ್ತೆ ಬಿಟ್ಟು ರಾಂಗ್ ರೂಟ್​​​​ನಲ್ಲಿ ಬಂದ ಲಾರಿ ಏಕಾಏಕಿ ರಸ್ತೆ ಮಧ್ಯೆ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗ್ತಿದೆ. ರಂಜನಗಾಂವ್ ಎಂಐಡಿಸಿಯ ಎಲ್​​ಜಿ ಕಂಪನಿ ಎದುರು ಈ ಭೀಕರ ಅಪಘಾತ ಸಂಭವಿಸಿದೆ. ಮೃತರೆಲ್ಲರೂ ಪನ್ವೇಲ್‌ಗೆ ಹೊರಟಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೀಕರ ರೈಲು ಅಪಘಾತ: 53 ಮಂದಿ ಗಾಯ

Last Updated : Aug 17, 2022, 9:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.