ತಿರುವನಂತಪುರಂ: ಕೇರಳದ ಶಾಲಾ ಮಕ್ಕಳು ಜೂನ್ 1 ರಿಂದ ಆನ್‌ಲೈನ್ ತರಗತಿಗಳ ಮೂಲಕ ಈ ಸಾಲಿನ ಶೈಕ್ಷಣಿಕ ವರ್ಷಕ್ಕೆ ಹಾಜರಾಗಲು ಸಜ್ಜಾಗಿದ್ದಾರೆ.
ಫಸ್ಟ್ ಬೆಲ್ ಎಂಬ ರಾಜ್ಯ ಸರ್ಕಾರದ ಆನ್‌ಲೈನ್ ಶಿಕ್ಷಣ ಕಾರ್ಯಕ್ರಮವನ್ನು ಸರ್ಕಾರ ನಡೆಸುವ ಕೈಟ್ ವಿಕ್ಟರ್ಸ್ ಚಾನೆಲ್‌ನಲ್ಲಿ ಮತ್ತು firstbell.kite.kerala.gov.in ವೆಬ್‌ಸೈಟ್ ಮೂಲಕ ಪ್ರಾರಂಭಿಸಲಾಗುತ್ತದೆ.
ಹಾಗೆಯೇ ಅಂಗನವಾಡಿ ಮಕ್ಕಳಿಗೆ 'ಕಿಲಿಕಾಂಚಲ್' ಶೀರ್ಷಿಕೆಯಲ್ಲಿ ಆನ್‌ಲೈನ್ ತರಗತಿಗಳನ್ನು ಜೂನ್ 1 ರಿಂದ 4 ರವರೆಗೆ ಬೆಳಿಗ್ಗೆ 10.30 ರಿಂದ 4 ರವರೆಗೆ ನಡೆಸಲಾಗುವುದು. ಅದೇ ತರಗತಿಗಳ ಮರು ಪ್ರಸಾರವನ್ನು ಜೂನ್ 7 ರಿಂದ ಜೂನ್ 10 ರವರೆಗೆ ಪ್ರಸಾರ ಮಾಡಲಾಗುತ್ತದೆ.
12 ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳು ಜೂನ್ 7 ರಿಂದ ಜೂನ್ 11 ರವರೆಗೆ ಮತ್ತು ಜೂನ್ 14 ರಿಂದ ಜೂನ್ 18 ರವರೆಗೆ ಮರು ಪ್ರಸಾರವಾಗಲಿದೆ. ತರಗತಿಯ ಸಮಯಗಳು ಬೆಳಗ್ಗೆ 8.30 ರಿಂದ 10 ರವರೆಗೆ ಮತ್ತು ಸಂಜೆ 5 ರಿಂದ ಸಂಜೆ 6 ರವರೆಗೆ ಇರುತ್ತದೆ. ಪ್ರತಿದಿನ ಐದು ತರಗತಿಗಳನ್ನು ಹೊಂದಿರುತ್ತವೆ.
1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳು ಜೂನ್ 2 ರಿಂದ 4 ರವರೆಗೆ ಮತ್ತು ಮರು ಪ್ರಸಾರವು ಜೂನ್ 7 ರಿಂದ ಜೂನ್ 9 ರವರೆಗೆ ಮತ್ತು ಜೂನ್ 10 ರಿಂದ 12 ರವರೆಗೆ ಪ್ರಸಾರವಾಗಲಿದೆ.
ತರಗತಿಗಳಿಗೆ ತಪ್ಪಿಸಿಕೊಲ್ಳುವ ವಿದ್ಯಾರ್ಥಿಗಳು ಅದೇ ಪ್ರಸಾರವನ್ನು ಕೈಟ್ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ. ತರಗತಿಯ ಲೈವ್ ಲಿಂಕ್ ಮತ್ತು ಟೈಮ್ ಟೇಬಲ್ ಸಹ ಸೈಟ್ನಲ್ಲಿ ಲಭ್ಯವಾಗಲಿದೆ ಎಂದು ವಿಕ್ಟರ್ಸ್ ಚಾನೆಲ್ ಸಿಇಒ ಅನ್ವರ್ ಸದಾತ್ ಹೇಳಿದ್ದಾರೆ.