ಮೊರೆನಾ(ಮಧ್ಯಪ್ರದೇಶ): ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿರುವ ಗ್ಯಾಂಗ್ ಹಾಗೂ ಪೊಲೀಸರ ನಡುವೆ ಗುಂಡಿನ ಕಾಳಗ ನಡೆದಿದೆ. ಈ ವೇಳೆ ಪೊಲೀಸರು ಎರಡು ಟ್ರಾಲಿ ಹಾಗೂ ಟ್ರ್ಯಾಕ್ಟರ್ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ಥಾನದ ಧೋಲ್ಪುರ್ದಲ್ಲಿ ಈ ಘಟನೆ ನಡೆದಿದ್ದು, ದಾಳಿ ನಡೆಸಿರುವ ಪೊಲೀಸರು ಕೆಲವರು ಬಂಧನ ಮಾಡುವಲ್ಲಿ ಸಹ ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶ - ರಾಜಸ್ಥಾನ ಗಡಿಯ ಸಾಗರಪಾರ ಪೊಲೀಸ್ ಪೋಸ್ಟ್ನಲ್ಲಿ ಧೋಲ್ಪುರ್ ಎಂಬಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿ ವೇಳೆ ಯಾವುದೇ ರೀತಿಯ ಸಾವು - ನೋವು ಸಂಭವಿಸಿಲ್ಲ. ಆರ್ಎಸಿ ಕಮಾಂಡೋ ವಿಷ್ಣು ಕುಮಾರ್ ಈ ದಾಳಿಯ ನೇತೃತ್ವ ವಹಿಸಿಕೊಂಡಿದ್ದರು.
ಇದನ್ನೂ ಓದಿರಿ: ಸಹೋದರಿಯರಿಬ್ಬರ ಮೇಲೆ ಗ್ಯಾಂಗ್ರೇಪ್.. ಇಬ್ಬರು ಪೊಲೀಸರ ಬಂಧನ
ಚಂಬಲ್ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದು, ಮೊರೆನಾದಿಂದ ಧೋಲ್ಪುರ್ ಕಡೆಗೆ ಮರಳು ತುಂಬಿದ್ದ ನಾಲ್ಕು ಟ್ರ್ಯಾಕ್ಟರ್ ಬರುತ್ತಿದ್ದವು. ಇದನ್ನ ತಡೆಯಲು ಮುಂದಾದಾಗ ಮರಳು ಮಾಫಿಯಾ ಗ್ಯಾಂಗ್ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ತಕ್ಷಣವೇ ಅವರ ಬೆನ್ನಟ್ಟಿರುವ ಪೊಲೀಸ್ ಪಡೆ ತಿರುಗೇಟು ನೀಡಿದ್ದಾರೆ. ಈ ವೇಳೆ ಶಿವ ಸಿಂಗ್ ಗುರ್ಜಾರ್ ಎಂಬ ವ್ಯಕ್ತಿಯ ಬಂಧನ ಮಾಡಲಾಗಿದ್ದು, ಕೆಲವರು ತಪ್ಪಿಸಿಕೊಂಡಿದ್ದಾರೆ. ಅಕ್ರಮ ಮರಳು ವಶಪಡಿಸಿಕೊಂಡಿರುವ ಪೊಲೀಸರು ಪಿಸ್ತೂಲ್, ಐದು ಜೀವಂತ ಕಾರ್ಟ್ರಿಜ್ ವಶಕ್ಕೆ ಪಡೆದಿಕೊಂಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.