ETV Bharat / bharat

ವಸತಿ ಕಟ್ಟಡದ ವಿದ್ಯುತ್ ಮೀಟರ್ ಕೊಠಡಿಯಲ್ಲಿ ಬೆಂಕಿ: 17 ಕುಟುಂಬಗಳ ಸ್ಥಳಾಂತರ - ಮಹಾರಾಷ್ಟ್ರದ ಥಾಣೆ ಜಿಲ್ಲೆ

17 ಕುಟುಂಬಗಳು ವಾಸವಾಗಿದ್ದ ನಾಲ್ಕು ಅಂತಸ್ತಿನ ವಸತಿ ಕಟ್ಟಡದ ವಿದ್ಯುತ್ ಮೀಟರ್ ಕೊಠಡಿಯಲ್ಲಿ ಅಗ್ನಿ ಅವಘಡ ಸಂಭವಿದ್ದು, ಎಲ್ಲರನ್ನೂ ಸ್ಥಳಾಂತರ ಮಾಡಲಾಗಿದೆ.

ವಸತಿ ಕಟ್ಟಡದ ವಿದ್ಯುತ್ ಮೀಟರ್ ಕೊಠಡಿಯಲ್ಲಿ ಬೆಂಕಿ

author img

By

Published : Nov 16, 2021, 11:49 AM IST

ಥಾಣೆ (ಮಹಾರಾಷ್ಟ್ರ): ನಾಲ್ಕು ಅಂತಸ್ತಿನ ವಸತಿ ಕಟ್ಟಡದ ವಿದ್ಯುತ್ ಮೀಟರ್ ಕೊಠಡಿಯಲ್ಲಿ (electric meter room) ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿ ವಾಸಿಸುತ್ತಿದ್ದ 17 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ ಥಾಣೆ (Thane) ಜಿಲ್ಲೆಯ ಕಲ್ವಾ ಪ್ರದೇಶದ ಖರೆಗಾಂವ್‌ನಲ್ಲಿರುವ ಕಟ್ಟಡ ಇದಾಗಿದ್ದು, ಬೆಳಗಿನ ಜಾವ 4.45 ರ ಸುಮಾರಿಗೆ ಅಗ್ನಿ ಅವಘಡ (fire accident) ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಥಾಣೆ ಮಹಾನಗರ ಪಾಲಿಕೆಯ ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕದ (ಆರ್‌ಡಿಎಂಸಿ) ಮುಖ್ಯಸ್ಥ ಸಂತೋಷ್ ಕದಮ್ ಹೇಳಿದ್ದಾರೆ.

ಇದನ್ನೂ ಓದಿ: ಸ್ಯಾಮ್‌ಸಂಗ್ ಸರ್ವೀಸ್ ಸೆಂಟರ್​ನಲ್ಲಿ ಬೆಂಕಿ..!

ಘಟನೆಯಲ್ಲಿ 16 ವಿದ್ಯುತ್ ಮೀಟರ್‌ಗಳು ಬೆಂಕಿಗಾಹುತಿಯಾಗಿವೆ. ಅಗ್ನಿಶಾಮಕ ಸಿಬ್ಬಂದಿ, ಆರ್‌ಡಿಎಂಸಿ ತಂಡ, ಪೊಲೀಸರು ಮತ್ತು ವಿದ್ಯುತ್ ಸರಬರಾಜು ಕಂಪನಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 17 ಕುಟುಂಬಗಳ ಸದಸ್ಯರನ್ನು ಕಟ್ಟಡದಿಂದ ಸ್ಥಳಾಂತರಿಸಲಾಗಿದೆ. ಬೆಂಕಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.