ETV Bharat / bharat

ದುರ್ಗಾದೇವಿ ಪೆಂಡಾಲ್​ಗೆ ಬೆಂಕಿ.. ಐವರು ಭಕ್ತರ ಸಾವು, 70 ಜನರಿಗೆ ಗಾಯ

author img

By

Published : Oct 3, 2022, 10:17 AM IST

ಉತ್ತರಪ್ರದೇಶದಲ್ಲಿ ದುರ್ಗಾದೇವಿಯ ಪೆಂಡಾಲ್​ಗೆ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಬೆಂಕಿ ಹೊತ್ತಿಕೊಂಡು ಐವರು ಭಕ್ತರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

fire-in-durga-pandal-in-bhadohi
ದುರ್ಗಾದೇವಿ ಪೆಂಡಾಲ್​ಗೆ ಬೆಂಕಿ

ಭದೋಹಿ(ಉತ್ತರಪ್ರದೇಶ): ದುರ್ಗಾದೇವಿಯ ಪೆಂಡಾಲ್​ನಲ್ಲಿ ಶಾರ್ಟ್​ ಸರ್ಕ್ಯೂಟ್​ ಉಂಟಾಗಿ ಬೆಂಕಿ ಹೊತ್ತಿಕೊಂಡು 5 ಮಂದಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟು, 70 ಕ್ಕೂ ಅಧಿಕ ಭಕ್ತರು ಗಾಯಗೊಂಡ ಘಟನೆ ಉತ್ತರಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಭದೋಹಿ ಜಿಲ್ಲೆಯಲ್ಲಿ ದುರ್ಗಾ ದೇವಿ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಭಾನುವಾರ ರಾತ್ರಿ ಆರತಿ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ 150 ಕ್ಕೂ ಅಧಿಕ ಜನರು ಪೆಂಡಾಲ್​ನಲ್ಲಿ ದೇವಿಯ ದರ್ಶನ ಪಡೆಯುತ್ತಿದ್ದರು. ಇದ್ದಕ್ಕಿದ್ದಂತೆ ಶಾರ್ಟ್​ ಸರ್ಕ್ಯೂಟ್​ ಉಂಟಾಗಿದೆ.

ಈ ವೇಳೆ ಇಬ್ಬರು ಮಕ್ಕಳು ಸೇರಿದಂತೆ 5 ಭಕ್ತರು ವಿದ್ಯುತ್​ ಪ್ರವಹಿಸಿ ಮತ್ತು ಬೆಂಕಿ ಹೊತ್ತಿಕೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 70 ಅಧಿಕ ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ದೇವಿಯ ಪೆಂಡಾಲ್​ಗೆ ಬೆಂಕಿ ಹೊತ್ತಿಕೊಂಡ ಮಾಹಿತಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಗಾಯಾಳುಗಳ ರಕ್ಷಣೆಗೆ ಮುಂದಾದರು. ದೇವಿಯ ಪೆಂಡಾಲ್​ನಲ್ಲಿ ನಡೆದ ದುರಂತ ಅಲ್ಲಿನ ಜನರಲ್ಲಿ ಆತಂಕ ಉಂಟು ಮಾಡಿದೆ.

ಓದಿ: ಉಗ್ರ ದಾಳಿ ಸಂಚು, ಪಾಕ್​ ಜೊತೆ ನಂಟು ಹೊಂದಿದ್ದ ಮೂವರ ಬಂಧನ: 4 ಗ್ರೆನೇಡ್, ನಗದು​ ವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.