ETV Bharat / bharat

ಎಲ್‌ಪಿಜಿ ಸಿಲಿಂಡರ್​ಗಳ ಸ್ಫೋಟದಿಂದ ಅಗ್ನಿ ಅವಘಡ, ಶಬ್ಧ ಕೇಳಿದ ಸ್ಥಳೀಯರಲ್ಲಿ ಭೀತಿ.. - ತಥಾವಾಡೆ ಪ್ರದೇಶದಲ್ಲಿ ಭಾರಿ ಬೆಂಕಿ

ಅನೇಕ ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರಿಂದ ಮಹಾರಾಷ್ಟ್ರದ ಪಿಂಪ್ರಿ ಚಿಂಚ್‌ವಾಡ್ ನಗರದ ತಥಾವಾಡೆ ಪ್ರದೇಶದಲ್ಲಿ ಭಾನುವಾರ ರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯ ಜನರಲ್ಲಿ ಭೀತಿಯನ್ನು ಉಂಟುಮಾಡಿದೆ.

LPG cylinder explosion
ಎಲ್‌ಪಿಜಿ ಸಿಲಿಂಡರ್​ಗಳ ಸ್ಫೋಟದಿಂದ ಅಗ್ನಿ ಅವಘಡ, ಶಬ್ಧ ಕೇಳಿದ ಸ್ಥಳೀಯರಲ್ಲಿ ಭೀತಿ...
author img

By PTI

Published : Oct 9, 2023, 9:06 AM IST

ಮಹಾರಾಷ್ಟ್ರ: ಪಿಂಪ್ರಿ-ಚಿಂಚ್‌ವಾಡ್‌ನ ತಥಾವಾಡೆ ಪ್ರದೇಶದಲ್ಲಿ ಗ್ಯಾಸ್ ಸಿಲಿಂಡರ್‌ಗಳಲ್ಲಿ ಸ್ಫೋಟಗೊಂಡ ಪರಿಣಾಮ ಭಾರಿ ಬೆಂಕಿ ಕಾಣಿಸಿಕೊಂಡಿದೆ. 6 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಬೀಡುಬಿಟ್ಟಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪಿಂಪ್ರಿ - ಚಿಂಚ್ವಾಡ್ ಅಗ್ನಿಶಾಮಕ ಇಲಾಖೆ ಮಾಹಿತಿ ನೀಡಿದೆ.

  • #WATCH | Maharashtra: A massive fire broke out following explosions in gas cylinders in the Tathawade area of Pimpri-Chinchwad. 6 fire tenders present at the spot. The situation is under control: Pimpri-Chinchwad Fire Department (08.10) pic.twitter.com/4hEoZf4fbw

    — ANI (@ANI) October 8, 2023 " class="align-text-top noRightClick twitterSection" data=" ">

ಪಿಂಪ್ರಿ ಚಿಂಚ್‌ವಾಡ್ ನಗರದ ತಥಾವಾಡೆ ಪ್ರದೇಶದಲ್ಲಿ ಭಾನುವಾರ ರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಅನೇಕ ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದು, ಸ್ಥಳೀಯ ಜನರಲ್ಲಿ ಭೀತಿಯನ್ನು ಉಂಟುಮಾಡಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಟ್ಯಾಂಕರ್‌ನಿಂದ ಸಿಲಿಂಡರ್‌ಗಳಿಗೆ ಅಕ್ರಮವಾಗಿ ಎಲ್‌ಪಿಜಿ ತುಂಬುತ್ತಿರುವ ಶಂಕೆ ಇದೆ. ಸ್ಫೋಟದ ನಂತರ, ಹತ್ತಿರದ ಕಾಲೇಜಿಗೆ ಸೇರಿದ ಒಂದೆರಡು ಬಸ್‌ಗಳು ಸಹ ಬೆಂಕಿಗೆ ಆಹುತಿಯಾಗಿವೆ ಎಂದು ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಎಲ್‌ಪಿಜಿ ಸಿಲಿಂಡರ್​ಗಳ ಸ್ಫೋಟ ಬಗ್ಗೆ ಅಧಿಕಾರಿಗಳು ಹೇಳಿದ್ದೇನು?: ''ರಾತ್ರಿ 10:30 ರ ಸುಮಾರಿಗೆ ಘಟನೆ ಸಂಭವಿಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ, ನಾಲ್ಕೈದು ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಅಗ್ನಿಶಾಮಕ ಇಲಾಖೆಯಿಂದ ನೀರಿನ ಟ್ಯಾಂಕರ್‌ಗಳನ್ನು ತಕ್ಷಣವೇ ಸ್ಥಳಕ್ಕೆ ರವಾನಿಸಲಾಯಿತು. ಸಿಬ್ಬಂದಿ ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತಂದರು. ದೊಡ್ಡ ಪ್ರಮಾಣದ ಸ್ಫೋಟದ ಶಬ್ಧದಿಂದ ಸ್ಥಳೀಯರಲ್ಲಿ ಭಯ ಮೂಡಿದೆ ಎಂದು ಪಿಂಪ್ರಿ ಚಿಂಚ್‌ವಾಡ್ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ್ದ ಅಗ್ನಿ ಅವಘಡ: ಮತ್ತೊಂದೆಡೆ, ಇತ್ತೀಚೆಗೆ ಮಹಾರಾಷ್ಟ್ರದ ಗೋರೆಗಾಂವ್‌ನಲ್ಲಿರುವ ಜಿ+5 ಕಟ್ಟಡದಲ್ಲಿ ದೊಡ್ಡ ಪ್ರಮಾಣದ ಅಗ್ನಿ ಅವಘಡ ಸಂಭವಿಸಿತ್ತು. ಅಗ್ನಿ ದುರಂತದಲ್ಲಿ ಎಂಟು ಜನರು ಮೃತಪಟ್ಟಿದ್ದರು. 51 ಜನರು ಗಾಯಗೊಂಡಿದ್ದರು. 50ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿತ್ತು. ಗಾಯಾಳುಗಳ ಚಿಕಿತ್ಸೆಗಾಗಿ ಹತ್ತಿರದ ಮುಂಬೈನ ಟ್ರಾಮಾ ಕೇರ್ ಮತ್ತು ಕೂಪರ್ ಆಸ್ಪತ್ರೆಗೆ ರವಾನಿಸಲಾಗಿದೆ.

ಪಶ್ಚಿಮ ಗೋರೆಗಾಂವ್‌ನ ಆಫ್ ಎಂಜಿ ರಸ್ತೆಯಲ್ಲಿರುವ ಜೈ ಭವಾನಿ ಕಟ್ಟಡದಲ್ಲಿ ಅಕ್ಟೋಬರ್​ 6 ರಂದು (ಶುಕ್ರವಾರ) ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಗ್ನಿ ಅವಘಡ ಜರುಗಿತ್ತು. ಹಲವು ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದರು. ಅಧಿಕಾರಿಗಳ ಮಾಹಿತಿ ಪ್ರಕಾರ, ಗೋರೆಗಾಂವ್‌ನ ಎಂಜಿ ರಸ್ತೆಯಲ್ಲಿರುವ ಜೈ ಭವಾನಿ ಕಟ್ಟಡದ ನೆಲದ ಮೇಲಿನ ಅಂಗಡಿಗಳು, ಸ್ಕ್ರ್ಯಾಪ್ ವಸ್ತುಗಳು ಮತ್ತು ನಿಲುಗಡೆ ಮಾಡಿದ ವಾಹನಗಳಿಗೂ ಬೆಂಕಿ ಆವರಿಸಿತ್ತು. ಟೆರೇಸ್ ಸೇರಿದಂತೆ ವಿವಿಧ ಮಹಡಿಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ರಕ್ಷಿಸಲಾಗಿತ್ತು. ಸುಮಾರು 30 ವಾಹನಗಳು ಸುಟ್ಟು ಹೋಗಿದ್ದವು.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಪ್ರತ್ಯೇಕ ಅಪಘಾತಕ್ಕೆ 12 ಮಂದಿ ಸಾವು; ಬಸ್​ ಕಂದಕಕ್ಕೆ ಬಿದ್ದು 4, ಕಾರಿನ ಮೇಲೆ ಬಂಡೆ ಬಿದ್ದು 8 ಮಂದಿ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.