ETV Bharat / bharat

321 ಕೋಟಿ ರೂ. ಫೈಬರ್​ನೆಟ್​ ಹಗರಣ.. ಎಫ್​ಐಆರ್​ ದಾಖಲು.. - ಅಮರಾವತಿ ನ್ಯೂಸ್​

ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಪ್ರಕರಣವನ್ನ ವಿಶೇಷ ನ್ಯಾಯಾಧೀಶರಿಗೆ ಸಲ್ಲಿಕೆ ಮಾಡಲಾಗಿದೆ. ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳಲ್ಲಿನ ಎಲ್ಲ ಗ್ರಾಮ ಪಂಚಾಯತ್‌ಗಳಿಗೆ ಬ್ರಾಡ್​ಬ್ಯಾಂಡ್​​ ಸೇವೆ ಒದಗಿಸಲು ಕೇಂದ್ರ ಸರ್ಕಾರ 19,041 ಕೋಟಿ ರೂ.ಗಳ ನೆರವು ನೀಡಲು ಮುಂದಾಗಿದೆ..

fibernet scam
fibernet scam
author img

By

Published : Sep 11, 2021, 9:11 PM IST

ಅಮರಾವತಿ(ಆಂಧ್ರಪ್ರದೇಶ): ಕೇಂದ್ರ ಸರ್ಕಾರದ ಭಾರತ್​ ನೆಟ್​ ಯೋಜನೆ ಭಾಗವಾಗಿ ರಾಜ್ಯದ ಎಲ್ಲ ಗ್ರಾಮ ಪಂಚಾಯತ್​​ಗಳಿಗೆ ಇಂಟರ್​ನೆಟ್​​ ಮತ್ತು ದೂರವಾಣಿ ಸೇವೆ ಒದಗಿಸುವ ಯೋಜನೆಯಾಗಿದೆ. ನ್ಯಾಷನಲ್​ ಅಪ್ಟಿಕ್​​ ಫೈಬರ್​​ ನೆಟ್​ವರ್ಕ್​​ ಅಡಿಯಲ್ಲಿ ಫೈಬರ್​ನೆಟ್​ ಯೋಜನೆಗೆ ಕೇಂದ್ರ 3,840 ಕೋಟಿ ರೂ. ಅನುದಾನ ನೀಡಿದೆ. ಆದರೆ, ಇದರಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಆಂಧ್ರಪ್ರದೇಶದ ಅಪರಾದ ತನಿಖಾ ಇಲಾಖೆ ಫೈಬರ್​ ನೆಟ್​ ಲಿಮಿಟೆಡ್​​​ನಲ್ಲಿ ನಡೆದಿರುವ ಅಕ್ರಮದ ಬಗ್ಗೆ ಎಫ್​​ಐಆರ್​ ದಾಖಲು ಮಾಡಿದ್ದು, 321 ಕೋಟಿ ರೂ. ಹಗರಣ ಇದಾಗಿದೆ ಎಂದು ತಿಳಿಸಿದೆ. ಜೊತೆಗೆ 16 ವ್ಯಕ್ತಿಗಳು ಹಾಗೂ ಎರಡು ಕಂಪನಿಗಳು ಇದರಲ್ಲಿ ಆರೋಪಿಗಳೆಂದು ಹೆಸರಿಸಿದೆ. ವೇಮುರಿ ಹರಿಕೃಷ್ಣ ಪ್ರಸಾದ್​, ಟೆರಾ ಸಾಫ್ಟವೇರ್​​ ಲಿಮಿಟೆಡ್​​​ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಕಂಪನಿಗೆ 321 ಕೋಟಿ ರೂ. ಟೆಂಡರ್​​ ಅಕ್ರಮವಾಗಿ ನೀಡಲಾಗಿದೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿರಿ: ಒಂದೇ ಓವರ್​ನಲ್ಲಿ 6 ಸಿಕ್ಸ್​ ಸಿಡಿಸಿ ವಿಶ್ವದಾಖಲೆ.. ಸಿಕ್ಸರ್​ ಕಿಂಗ್​​ ಯುವಿ ಫೋನ್​ಗೆ ಕಾಯುತ್ತಿರುವ ಜಸ್ಕರನ್​!

ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಪ್ರಕರಣವನ್ನ ವಿಶೇಷ ನ್ಯಾಯಾಧೀಶರಿಗೆ ಸಲ್ಲಿಕೆ ಮಾಡಲಾಗಿದೆ. ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳಲ್ಲಿನ ಎಲ್ಲ ಗ್ರಾಮ ಪಂಚಾಯತ್‌ಗಳಿಗೆ ಬ್ರಾಡ್​ಬ್ಯಾಂಡ್​​ ಸೇವೆ ಒದಗಿಸಲು ಕೇಂದ್ರ ಸರ್ಕಾರ 19,041 ಕೋಟಿ ರೂ.ಗಳ ನೆರವು ನೀಡಲು ಮುಂದಾಗಿದೆ.

ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಅದಕ್ಕೆ ಅನುಮೋದನೆ ನೀಡಿದೆ. ಈ ಯೋಜನೆಗೆ ಒಟ್ಟು 29,430 ಕೋಟಿ ರೂ ವೆಚ್ಚವಾಗಲಿದ್ದು, ಇದರಲ್ಲಿ ಖಾಸಗಿ ಸಹಭಾಗಿತ್ವ ಪಡೆದುಕೊಳ್ಳಲು ಕೇಂದ್ರ ನಿರ್ಧಾರ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.