ಭರತಪುರ(ರಾಜಸ್ಥಾನ): ಮಾಜಿ ಸಂಸದೆ ಹಾಗೂ ಭರತಪುರ ರಾಜಮನೆತನದ ಸದಸ್ಯೆಯಾಗಿರುವ ಕೃಷ್ಣೇಂದ್ರ ಕೌರ್ ಶುಕ್ರವಾರ ಸಂಜೆ 7 ಗಂಟೆಗೆ ನಗರದ ಅಖಾಡ್ ತಿರಾಹಾದಲ್ಲಿ ಕಾನ್ಸ್ಟೆಬಲ್ನೊಂದಿಗೆ ಅನುಚಿತವಾಗಿ ವರ್ತಿಸಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ಮಾಜಿ ಸಂಸದೆಯ ವಿರುದ್ಧ ಕಾನ್ಸ್ಟೇಬಲ್ ದೂರು ನೀಡಿದ ನಂತರ ಪ್ರಕರಣ ದಾಖಲಾಗಿದೆ. ಆರ್ಎಸಿ ಪೊಲೀಸ್ ಕಾನ್ಸ್ಟೇಬಲ್ ಗಜರಾಜ್ ಅವರು ಎಫ್ಐಆರ್ ದಾಖಲಿಸಿದ್ದಾರೆ. ಶೀಘ್ರವೇ ತನಿಖೆ ಆರಂಭಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಮೀನಾ ತಿಳಿಸಿದ್ದಾರೆ.
''ಸಂಜೆ 7 ಗಂಟೆಗೆ ಮಾಜಿ ಸಂಸದೆ ಕೃಷ್ಣೇಂದ್ರ ಕೌರ್ ತಮ್ಮ ಕಾರನ್ನು ನಡುರಸ್ತೆಯಲ್ಲಿ ನಿಲ್ಲಿಸಿದರು, ನಾನು ಕಾರನ್ನು ಮುಂದೆ ಹೋಗುವಂತೆ ಸಿಗ್ನಲ್ ಮಾಡಿದೆ, ಕಾರನ್ನು ಅಲ್ಲೆ ನಿಲ್ಲಿಸಿ ನಿಂದಿಸಲು ಆರಂಭಿಸಿದರು, ನಂತರ ಕಾರಿನಿಂದ ಇಳಿದು ನನಗೆ ಕಪಾಳಮೋಕ್ಷ ಮಾಡಿದರು'' ಎಂದು ಕಾನ್ಸ್ಟೇಬಲ್ ಗಜರಾಜ್ ಆರೋಪಿಸಿದರು.
ಕೌರ್ ಜೊತೆ ಇನ್ನಿಬ್ಬರು ವ್ಯಕ್ತಿಗಳಿದ್ದರು: ಕಾರಿನ ಚಾಲಕ ಮತ್ತು ಇನ್ನೋರ್ವ ವ್ಯಕ್ತಿ ಸಹ ನನ್ನನ್ನು ನಿಂದಿಸಿದ್ದಾರೆ, ನಾನು ಘಟನೆಯ ಬಗ್ಗೆ ಉನ್ನತ ಅಧಿಕಾರಿಗೆ ತಿಳಿಸಿ, ನಂತರ ಕೌರ್ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು