ಬಸ್ತಿ : ಅಶ್ಲೀಲ ವಿಡಿಯೋ ಮತ್ತು ಚಿತ್ರಗಳನ್ನು ಕಳುಹಿಸಿದ ಆರೋಪದ ಮೇಲೆ ಮಹಿಳೆಯೊಬ್ಬಳು ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ಮತ್ತು ಇಬ್ಬರು ಕಂದಾಯ ಸಿಬ್ಬಂದಿ ಸೇರಿದಂತೆ 14 ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಎಫ್ಐಆರ್ ದಾಖಲಾಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸಬ್ ಇನ್ಸ್‌ಪೆಕ್ಟರ್ ದೀಪಕ್ ಸಿಂಗ್ ಮತ್ತು ಆತನ ಸಹಾಯಕ ಕಾನ್ಸ್ಟೇಬಲ್ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕೆಲವು ತಿಂಗಳ ಹಿಂದೆ ನಾನು ನನ್ನ ನಗರದಲ್ಲಿ ಮಾಸ್ಕ್ ತಪಾಸಣೆ ವೇಳೆ ಎಸ್‌ಐ ಸಿಂಗ್ ಅವರನ್ನು ಭೇಟಿಯಾಗಿದ್ದೆ. ಆಗ ಸಿಂಗ್ ನನ್ನ ಫೋನ್ ನಂಬರ್ ಕೇಳಿದರು. ಪೊಲೀಸ್ ಅಧಿಕಾರಿಗೆ ಫೋನ್ ನಂಬರ್ ಕೊಡಲು ಮಹಿಳೆಗೆ ಇಷ್ಟವಿರಲಿಲ್ಲ. ಆದ್ರೂ ಪೊಲೀಸ್ ಅಧಿಕಾರಿ ಎಂದು ಹೇಳಿದ್ದರಿಂದ ತನ್ನ ಸಂಖ್ಯೆಯನ್ನು ಆ ಮಹಿಳೆ ಪೊಲೀಸ್ ಅಧಿಕಾರಿಗೆ ಹಂಚಿಕೊಂಡಿದ್ದಾಳೆ. ಕೆಲವು ದಿನಗಳ ಬಳಿಕ ಸಂತ್ರಸ್ತ ಮಹಿಳೆಗೆ ಅಶ್ಲೀಲ ಚಿತ್ರಗಳು ಮತ್ತು ವಿಡಿಯೊಗಳನ್ನು ದೀಪಕ್ ಸಿಂಗ್ ಕಳುಹಿಸಿದರು ಎಂದು ಅವರು ತಮ್ಮ ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
ಸಂತ್ರಸ್ತೆ ಎಚ್ಚರಿಕೆ ಬಳಿಕವೂ ಪೊಲೀಸ್ ಅಧಿಕಾರಿ ವಿಡಿಯೋಗಳನ್ನು ಕಳುಹಿಸುತ್ತಲೇ ಇದ್ದನು. ಹೀಗಾಗಿ ಎಸ್ಪಿಗೆ ಸಿಂಗ್ ವಿರುದ್ಧ ದೂರು ನೀಡಿದ್ದಳು. ಆದರೆ, ತನಿಖೆಯಲ್ಲಿ ಸಿಂಗ್ ಅವರಿಗೆ ಎಸ್ಪಿ ಕ್ಲೀನ್ ಚಿಟ್ ನೀಡಿದ್ದಾರೆ. ನಂತರ ಮಹಿಳೆ ಮತ್ತು ಆಕೆಯ ಕುಟುಂಬಸ್ಥರು ಮಹಿಳಾ ಆಯೋಗ ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಿದರು.
ದೂರಿನ ನಂತರ ಎಸ್‌ಪಿ ಕ್ರಮ ಕೈಗೊಂಡು ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ. 14 ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿದೆ.