ETV Bharat / bharat

ಮಾರುಕಟ್ಟೆಗಳಲ್ಲಿ ವಿಶೇಷ ಸ್ಥಾನ ಪಡೆದ ಒಡಿಶಾದ ಸಾವಯವ ‘ಅರಿಶಿನ’

ಕೊರಾಪುತ್​ ​​ ಜಿಲ್ಲೆಯ ಲಕ್ಷ್ಮಿಪುರ ಬ್ಲಾಕ್‌ನಲ್ಲಿರುವ ಪರ್ವತದ ತಪ್ಪಲಿನಲ್ಲಿರುವ ತಿಮಾಜೋಲಾ ಗ್ರಾಮದ ಜನರಿಗೆ ಅರಿಶಿನವು ಈಗ ಆದಾಯದ ಮೂಲವಾಗಿದೆ. ಪ್ರತಿ ವರ್ಷ ಈ ಪ್ರದೇಶದಲ್ಲಿ ಸರಿ ಸುಮಾರು ನೂರು ಟನ್‌ಗಿಂತ ಹೆಚ್ಚು ಅರಿಶಿನ ಬೆಳೆಯಲಾಗುತ್ತದೆ. ಈ ಅರಿಶಿನ ದೇಶದ ವಿವಿಧ ಮಾರುಕಟ್ಟೆಗಳನ್ನು ತಲುಪುತ್ತಿದೆ.

Finest Turmeric from the villages of Odisha ಮಾರುಕಟ್ಟೆಗಳಲ್ಲಿ ವಿಶೇಷ ಸ್ಥಾನ ಪಡೆದ ಒಡಿಶಾದ ಅರಿಸೀನ
ಮಾರುಕಟ್ಟೆಗಳಲ್ಲಿ ವಿಶೇಷ ಸ್ಥಾನ ಪಡೆದ ಒಡಿಶಾದ ಅರಿಸೀನ
author img

By

Published : Dec 19, 2020, 6:04 AM IST

ಕೊರಾಪುತ್​ (ಒಡಿಶಾ): ಅರಿಶಿನ ಅನೇಕ ಉಪಯೋಗಗಳನ್ನು ಹೊಂದಿರುವ ಉತ್ಪನ್ನ. ಅರಿಶಿನವನ್ನು ಭಾರತದ ಹೆಚ್ಚಿನ ಆಹಾರ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಅರಿಶಿನವಿಲ್ಲದೇ ಆಹಾರವು ಆಕರ್ಷಕವಾಗಿ ಕಾಣುವುದಿಲ್ಲ. ಅಡುಗೆಗೆ ಅತ್ಯಗತ್ಯ ಮಾತ್ರವಲ್ಲ, ಅರಿಶಿನವೂ ಅನೇಕ ಔಷಧೀಯ ಗುಣಗಳನ್ನು ಸಹ ಹೊಂದಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ, ಕೊರಾಪುಟ್​​ ಜಿಲ್ಲೆಯ ಲಕ್ಷ್ಮಿಪುರ ಬ್ಲಾಕ್‌ನಲ್ಲಿರುವ ಪರ್ವತದ ತಪ್ಪಲಿನಲ್ಲಿರುವ ತಿಮಾಜೋಲಾ ಗ್ರಾಮದ ಜನರಿಗೆ ಅರಿಶಿನವು ಈಗ ಆದಾಯದ ಮೂಲವಾಗಿದೆ. ಈ ಗ್ರಾಮವು ಸುಮಾರು 100 ಕುಟುಂಬಗಳನ್ನು ಹೊಂದಿದೆ. ಹೆಚ್ಚಿನ ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಅರಿಶಿನ ಕೃಷಿಯನ್ನೇ ಅವಲಂಬಿಸಿವೆ.

ಪರ್ವತದ ತಪ್ಪಲಿನಲ್ಲಿ ಬೆಳೆಯುವ ಸಾವಯವ ಅರಿಶಿನ

ಅರಿಶಿನ ಕೃಷಿ ಈ ಗ್ರಾಮಸ್ಥರ ಇತ್ತೀಚಿನ ವೃತ್ತಿಯಲ್ಲ. ಬದಲಿಗೆ ಇದು ಅವರ ತಂದೆ ಮತ್ತು ಅಜ್ಜನ ಕಾಲದಿಂದಲೂ ಅವರ ಸಂಪ್ರದಾಯವಾಗಿದೆ. ಯಾವುದೇ ರಾಸಾಯನಿಕವನ್ನು ಬಳಸದೆ ಅರಿಶಿನ ಬೆಳೆಸುತ್ತಾರೆ. ಈ ಹಳ್ಳಿಯಲ್ಲಿ 70 ರಿಂದ 80 ಎಕರೆ ಕೃಷಿ ಭೂಮಿಯಲ್ಲಿ ಅರಿಶಿನ ಬೆಳೆಯಲಾಗುತ್ತದೆ. ಸಾವಯವ ಗೊಬ್ಬರದಿಂದ ಈ ಗ್ರಾಮದಲ್ಲಿ ಉತ್ಪತ್ತಿಯಾಗುವ ಅರಿಶಿನ, ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಗ್ರಾಮಸ್ಥರು ಕೂಡ ಈ ಕೃಷಿಯಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಮತ್ತೊಂದೆಡೆ, ಸ್ವಯಂಸೇವಾ ಸಂಸ್ಥೆ ಅಧಿಕಾರಿ ಬಸಂತಾ ಪ್ರಧಾನ್ ಅವರ ಪ್ರಕಾರ, ಲಕ್ಷ್ಮಿಪುರದಲ್ಲಿ ಉತ್ಪತ್ತಿಯಾಗುವ ಅರಿಶಿನವು ಹೆಚ್ಚು ಎಣ್ಣೆ ಅಂಶವನ್ನು ಹೊಂದಿರುತ್ತದೆ ಮತ್ತು ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸದೇ ಉತ್ಪಾದಿಸಲಾಗುತ್ತಿರುವುದರಿಂದ, ಅದರ ಔ​​ಷಧೀಯ ಮೌಲ್ಯಗಳು ಎಲ್ಲರನ್ನೂ ಆಕರ್ಷಿಸುತ್ತಿವೆ. ಮತ್ತೊಂದೆಡೆ, ತಿಮಾಜೋಲಾದ ಹಾಗೆಯೇ ಸುಮಾರು 30 ಹಳ್ಳಿಗಳ ಬೆಳೆಗಾರರು ಸಹ ಅರಿಶಿನ ಕೃಷಿಯಲ್ಲಿ ತೊಡಗಿದ್ದಾರೆ. ಇದರ ಫಲವಾಗಿ, ಪ್ರತಿ ವರ್ಷ ಈ ಪ್ರದೇಶದಲ್ಲಿ ಸರಿ ಸುಮಾರು ನೂರು ಟನ್‌ಗಿಂತ ಹೆಚ್ಚು ಅರಿಶಿನ ಬೆಳೆಯಲಾಗುತ್ತದೆ. ಈ ಅರಿಶಿನ ದೇಶದ ವಿವಿಧ ಮಾರುಕಟ್ಟೆಗಳನ್ನು ತಲುಪುತ್ತಿದೆ. ಈ ಅರಿಶಿನದಲ್ಲಿ ಶೇಕಡಾ 5.67 ರಿಂದ 6.64 ರಷ್ಟು ಕರ್ಕ್ಯುಮಿನ್ ಇದೆ. ಅರಿಶಿನ ಕೃಷಿಕರನ್ನು ಪ್ರೋತ್ಸಾಹಿಸುವ ಸಲುವಾಗಿ, ಬಾಯ್ಲರ್ ಮತ್ತು ಡ್ರೈಯರ್ ಯಂತ್ರಗಳನ್ನು ಒದಗಿಸುವುದರ ಜೊತೆಗೆ ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಯೋಜನೆಯನ್ನು ಒರ್ಮಾಸ್ ಹೊಂದಿದೆ.

ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಅರಿಶಿನವು ಜನರ ಆರೋಗ್ಯಕ್ಕೆ ಉತ್ತಮ ಕೊಡುಗೆ ಮತ್ತು ರೈತರಿಗೆ ಉತ್ತಮ ಆದಾಯದ ಮೂಲವಾಗಿದೆ. ಇದು ಸ್ಥಳೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಯಲ್ಲಿಯೂ ಖ್ಯಾತಿ ಗಳಿಸಿದೆ. ಸರ್ಕಾರ ಅರಿಶಿನ ಕೃಷಿಗೆ ಸ್ಥಳೀಯ ಜನರಿಗೆ ಸುಧಾರಿತ ಬೀಜ ಮತ್ತು ಪ್ರೋತ್ಸಾಹವನ್ನು ಒದಗಿಸಿದರೆ ಅರಿಶಿನ ಕೃಷಿಗೆ ಮತ್ತಷ್ಟು ಪ್ರೋತ್ಸಾಹ ದೊರೆತಂತಾಗುತ್ತದೆ ಎಂಬುದು ಇಲ್ಲಿನ ಸ್ಥಳೀಯರ ಅಭಿಪ್ರಾಯವಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.