ಸೋನಿಪತ್ : ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ರೈತರ ಪ್ರತಿಭಟನೆ ನಿರಂತರವಾಗಿ ನಡೆಯುತ್ತಿದೆ. ಇಂದಿಗೆ ಈ ಪ್ರತಿಭಟನೆ 4 ತಿಂಗಳನ್ನ ಪೂರೈಸಿದೆ. ಕೃಷಿ ಕಾನೂನುಗಳನ್ನು ವಿರೋಧಿಸಿ ಯುನೈಟೆಡ್ ಕಿಸಾನ್ ಮೋರ್ಚಾ ಇಂದು ಇಡೀ ಭಾರತ್ ಬಂದ್ಗೆ ಕರೆ ನೀಡಿದೆ.
ಕುಂಡ್ಲಿ ಗಡಿಯಲ್ಲಿರುವ ಪ್ರೀತಮುರ ಗ್ರಾಮಸ್ಥರು ಮತ್ತು ಪ್ರತಿಭಟನೆಯಲ್ಲಿ ಕುಳಿತಿರುವ ರೈತರು ದಾರಿ ಬಗ್ಗೆ ಹೊಡೆದಾಟ ನಡೆಸಿದ್ದಾರೆ. ಜಗಳದಲ್ಲಿ ಎರಡೂ ಕಡೆಯಿಂದ ಕಲ್ಲು ತೂರಾಟ ಮತ್ತು ಕಟ್ಟಿಗೆಯಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಸ್ಥಿತಿ ತಿಳಿಗೊಳಿಸುವ ಪ್ರಯತ್ನದಲ್ಲಿದ್ದಾರೆ. ವಿಶೇಷವೆಂದರೆ, ಇಂದು ಕಿಸಾನ್ ಮೋರ್ಚಾದ ಕರೆಯ ಮೇರೆಗೆ ರೈತರು ದೇಶಾದ್ಯಂತ ಭಾರತ್ ಬಂದ್ ಘೋಷಿಸಿದ್ದಾರೆ. ಅದೇ ಸಮಯದಲ್ಲಿ ಸೋನಿಪತ್ ಗಡಿಯಿಂದ ಈ ಆತಂಕಕಾರಿ ಸುದ್ದಿ ಬಂದಿದೆ.