ಭುವನೇಶ್ವರ(ಒಡಿಶಾ): ಭಾರತದ ಆತಿಥ್ಯದಲ್ಲಿ ಫಿಫಾ 17 ವರ್ಷದೊಳಗಿನವರ ಮಹಿಳಾ ಫುಟ್ಬಾಲ್ ವಿಶ್ವಕಪ್ ನಾಳೆಯಿಂದ ಆರಂಭವಾಗಲಿದೆ. ಒಡಿಶಾ, ಗೋವಾ, ಮಹಾರಾಷ್ಟ್ರದಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಹೋಸ್ಟ್ ಸಿಟಿ ಲೋಗೋವನ್ನು ಶನಿವಾರ ಬಿಡುಗಡೆ ಮಾಡಿದರು.
ಭಾರತದಲ್ಲಿ ನಡೆಯಲಿರುವ ಮೊದಲ ಫಿಫಾ ಮಹಿಳಾ ಫುಟ್ಬಾಲ್ ವಿಶ್ವಕಪ್ ಇದಾಗಿದೆ. ಅಕ್ಟೋಬರ್ 11 ರಿಂದ 30 ರವರೆಗೆ ಆಯೋಜಿಸಲಾಗಿದೆ. ಭಾರತ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಅಮೆರಿಕಾ, ಮೊರಾಕೊ ಮತ್ತು ಬ್ರೆಜಿಲ್ ಜೊತೆಗೆ ಸೆಣಸಾಡಲಿದೆ. ಗುಂಪು ಹಂತದ ಪಂದ್ಯಗಳನ್ನು ಒಡಿಶಾದ ಭುವನೇಶ್ವರ ಕಳಿಂಗ ಕ್ರೀಡಾಂಗಣದಲ್ಲಿ ಆಡಲಿದೆ. ಪಂದ್ಯಗಳ ಟಿಕೆಟ್‌ಗಳನ್ನು fifa.com/tickets ನಿಂದ ಖರೀದಿಸಬಹುದು.
ಲೋಗೋ ಬಿಡುಗಡೆ ಬಳಿಕ ಮಾತನಾಡಿದ ಸಿಎಂ ನವೀನ್ ಪಟ್ನಾಯಕ್, "ಒಡಿಶಾ ಪ್ರಮುಖ ಕ್ರೀಡಾ ತಾಣವಾಗಿ ಹೊರಹೊಮ್ಮುತ್ತಿದೆ. ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ ಅನ್ನು ನಮ್ಮ ರಾಜ್ಯದಲ್ಲಿ ಆಯೋಜನೆಯಾಗಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಒಡಿಶಾದ ಅಧಿಕೃತ ಹೋಸ್ಟ್ ಸಿಟಿ ಲಾಂಛನವು ಫಿಫಾ ಅಂಡರ್ 17 ಮಹಿಳಾ ವಿಶ್ವಕಪ್ 2022 ರ ಅಧಿಕೃತ ಲಾಂಛನವನ್ನು ಪ್ರಸ್ತುತಪಡಿಸುವ ಒಂದು ಸಂಯೋಜನೆಯಾಗಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಕಲಾಕೃತಿಯು ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಕ್ರೀಡಾ ವ್ಯವಸ್ಥೆಯ ವೈಭವವನ್ನು ಪ್ರದರ್ಶಿಸುತ್ತದೆ ಎಂದರು.
ಓದಿ: ಅಥ್ಲೆಟಿಕ್ಸ್ ಜಾಗತಿಕ ಆಟ, ಇಂಗ್ಲಿಷ್ ಕಲಿಯುತ್ತಿದ್ದೇನೆ: ನೀರಜ್ ಚೋಪ್ರಾ