ಕಾಂಚೀಪುರಂ (ತಮಿಳುನಾಡು): ಕಾರ್ಮಿಕರ ಪ್ರತಿಭಟನೆಯಿಂದ ಸ್ಥಗಿತಗೊಂಡಿದ್ದ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಸುಂಗ್ವಾರ್‌ಸತ್ರಂನಲ್ಲಿರುವ ಆ್ಯಪಲ್ ಐಫೋನ್ನ ಬಿಡಿಭಾಗಗಳ ತಯಾರಿಕಾ ಕಂಪನಿ ಫಾಕ್ಸ್ಕಾನ್ ಪೊಂಗಲ್(ಸಂಕ್ರಾಂತಿ) ಬಳಿಕ ಪುನಾರಂಭಕ್ಕೆ ಸಜ್ಜಾಗಿದೆ.
ಕಾರ್ಖಾನೆಯಲ್ಲಿ 18 ಸಾವಿರಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಿದ್ದು, ರಜೆ ಮತ್ತು ಕಳಪೆ ಆಹಾರ ಪೂರೈಕೆ ಆರೋಪದ ಮೇಲೆ ಕಾರ್ಖಾನೆ ವಿರುದ್ಧ ಎಲ್ಲ ಸಿಬ್ಬಂದಿ ಭಾರಿ ಪ್ರತಿಭಟನೆ ನಡೆಸಿದ್ದರು.
ಇದರಿಂದ ಕಾರ್ಖಾನೆ ಕಳೆದ 25 ದಿನಗಳಿಂದ ಉತ್ಪಾದನೆಯನ್ನು ನಿಲ್ಲಿಸಿತ್ತು. ಬಳಿಕ ಸರ್ಕಾರ ಮಧ್ಯಪ್ರವೇಶಿಸಿ ಪ್ರತಿಭಟನಾನಿರತ ಸಿಬ್ಬಂದಿಯ ಮನವೊಲಿಸಿದ ನಂತರ ಕೆಲಸಕ್ಕೆ ಹಾಜರಾಗಲು ಕಾರ್ಮಿಕರು ಒಪ್ಪಿಗೆ ಸೂಚಿಸಿದ್ದಾರೆ.
ಹೀಗಾಗಿ ಮತ್ತೆ ಕಾರ್ಖಾನೆ ಸಂಕ್ರಾಂತಿ ಹಬ್ಬದ ಬಳಿಕ ಉತ್ಪಾದನೆಯನ್ನು ಎಂದಿನಂತೆ ಶುರು ಮಾಡಲಿದೆ ಎಂದು ಕಂಪನಿಯ ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ: ಭಾರತ- ಚೀನಾ ನಡುವೆ 14 ಸುತ್ತಿನ ಮಾತುಕತೆ ಅಂತ್ಯ.. ಸತತ 13 ಗಂಟೆಗಳ ಕಾಲ ಚರ್ಚೆ..!