ಬರ್ನಾಲಾ (ಪಂಜಾಬ್): ಮದ್ಯ ಸೇವನೆ ತಡೆದಿದ್ದಕ್ಕೆ ಕೋಪಗೊಂಡ ಇಬ್ಬರು ಪುತ್ರರು ತಂದೆಯನ್ನು ಕೊಚ್ಚಿ ಕೊಂದಿರುವ ಅಮಾನವೀಯ ಘಟನೆ ಪಂಜಾಬ್ ರಾಜ್ಯದ ಬರ್ನಾಲಾ ಜಿಲ್ಲೆಯ ಜಾಲೂರ್ ಗ್ರಾಮದಲ್ಲಿ ನಡೆದಿದೆ. ಇಬ್ಬರು ಪುತ್ರರ ವಿರುದ್ಧ ಬರ್ನಾಲಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಇಬ್ಬರು ಪುತ್ರರು ಡ್ರಗ್ಸ್, ಮದ್ಯ ಕುಡಿದಿದ್ದನ್ನು ತಂದೆ ವಿರೋಧಿಸಿದ್ದಾರೆ. ಮದ್ಯ ಕುಡಿಯುವುದಕ್ಕೆ ಬೈದಿದ್ದರಿಂದ ತಂದೆ ಮತ್ತು ಮಕ್ಕಳ ನಡುವೆ ಜಗಳ ಶುರುವಾಗಿದೆ. ಮಾತು ಮಾತಿಗೆ ಬೆಳೆದು ಜಗಳ ವಿಕೋಪಕ್ಕೆ ತಿರುಗಿ ದೊಣ್ಣೆಯಿಂದ ಹೊಡೆದಾಡಿದ್ದಾರೆ. ಇದೇ ವೇಳೆ ಕೋಪಗೊಂಡ ಪುತ್ರರು ತಂದೆಯನ್ನು ಕೊಡಲಿ, ಮಚ್ಚಿನಿಂದ ಕೊಚ್ಚಿ ಗಾಯಗೊಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ 65 ವರ್ಷದ ರಾಮ್ ಸಿಂಗ್ ಸ್ಥಳದಲ್ಲಿ ಮೃತಪಟ್ಟರೆ, ಗಾಯಗೊಂಡಿದ್ದ ಇಬ್ಬರು ಪುತ್ರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬರ್ನಾಲಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಕರಣ್ ಶರ್ಮಾ ಮಾಹಿತಿ ನೀಡಿದ್ದಾರೆ.
ಮೃತರ ಮಗಳು ಕುಲದೀಪ್ ಕೌರ್ ಅವರ ಹೇಳಿಕೆ ಪ್ರಕಾರ, ಆಕೆ ತಂದೆಯ ಮನೆಗೆ ಬಂದಿದ್ದಳು. ಇದೇ ವೇಳೆ ಪುತ್ರರು ತಂದೆಯ ಮೇಲೆ ದೊಣ್ಣೆಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಮೂವರ ನಡುವೆ ನಡುವೆ ಮಾರಾಮಾರಿ ನಡೆದಿದೆ. ಇದೇ ವೇಳೆ ಇಬ್ಬರು ಪುತ್ರರು ತಮ್ಮ ತಂದೆ ರಾಮ್ ಸಿಂಗ್ ಅವರನ್ನು ಕೊಡಲಿ ಮತ್ತು ಮಚ್ಚಿನಿಂದ ಗಾಯಗೊಳಿಸಿದರು. ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ರಾಮಸಿಂಗ್ ನೋವು ತಡೆಯಲಾರದೇ ಸಾವಿಗೀಡಾದರು ಎಂದು ದೂರು ನೀಡಿದ್ದಾಳೆ.
ಮೃತರ ಪುತ್ರಿ ಕುಲದೀಪ್ ಕೌರ್ ಹೇಳಿಕೆ ಮೇಲೆ ಗುರುಪ್ರೀತ್ ಸಿಂಗ್ ಮತ್ತು ಅಮರ್ ಸಿಂಗ್ ಇಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದಲ್ಲಿ ಗುರುಪ್ರೀತ್ ಸಿಂಗ್ ಆತನನ್ನು ಬಂಧಿಸಲಾಗಿದೆ. ಅಮರ್ ಸಿಂಗ್ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸರ್ಕಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೂಡಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕೋಟ್ಯಂತರ ಮೌಲ್ಯದ 77 ಕೆಜಿ ಹೆರಾಯಿನ್ ವಶ: ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಪಂಜಾಬ್ ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ. ಚಂಡಿಗಢದಲ್ಲಿ ಕೋಟ್ಯಂತರ ಮೌಲ್ಯದ 77 ಕೆಜಿ ಹೆರಾಯಿನ್ ಅನ್ನು ಪೊಲೀಸರು ಜಪ್ತಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂರು ಪಿಸ್ತೂಲ್ಗಳನ್ನು ವಶಕ್ಕೆ ಪಡೆದಿದ್ದಾರೆ.
"ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಕ್ರಮವಾಗಿ 41 ಕೆಜಿ ಹಾಗೂ 31 ಕೆಜಿ ಸೇರಿ ಒಟ್ಟಾರೆ 77 ಕೆಜಿ ಹೆರಾಯಿನ್ ಜಪ್ತಿಯಾಗಿದೆ. ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 400 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ದೇಶದ ಗಡಿಯಾಚೆಗಿನ ಹಾಗೂ ಅಂತಾರಾಜ್ಯ ಮಾದಕವಸ್ತು ಕಳ್ಳಸಾಗಣೆಯಲ್ಲಿ ಆರೋಪಿಗಳು ತೊಡಗಿದ್ದರು" ಎಂದು ಪಂಜಾಬ್ ರಾಜ್ಯ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಮಾಹಿತಿ ನೀಡಿದ್ದಾರೆ.
ಇದನ್ನೂಓದಿ: POCSO Case: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ; ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ