ETV Bharat / bharat

2 ವರ್ಷದ ಮಗನನ್ನು ಮಹಡಿಯಿಂದ ಕೆಳಗೆಸೆದು ತಾನೂ ಜಿಗಿದ ತಂದೆ - ಮಗನನ್ನು ಮಹಡಿಯಿಂದ ಕೆಳಗೆಸೆದು ತಾನೂ ಜಿಗಿದ ತಂದೆ

ಮಗನನ್ನು ಎಸೆದು ತಾನೂ ಮಹಡಿಯಿಂದ ಹಾರಿರುವ ಆರೋಪಿ ತಂದೆ ವಿರುದ್ಧ ಕೊಲೆ ಯತ್ನದ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

Newdelhi Police Station
ನವದೆಹಲಿ ಪೊಲೀಸ್​ ಠಾಣೆ
author img

By

Published : Dec 17, 2022, 2:37 PM IST

ನವದೆಹಲಿ: ತಂದೆಯೊಬ್ಬ ತನ್ನ ಎರಡು ವರ್ಷದ ಮಗುವನ್ನು ಟೆರೇಸ್‌ನಿಂದ ಕೆಳಗೆ ಎಸೆದು, ಬಳಿಕ ತಾನೂ ಮಹಡಿಯಿಂದ ಕೆಳಗೆ ಹಾರಿರುವ ಆಘಾತಕಾರಿ ಘಟನೆ ದೆಹಲಿ ಕಲ್ಕಾಜಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ತಂದೆ ಮಗ ಇಬ್ಬರೂ ಗಾಯಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸರು ಆರೋಪಿ ತಂದೆ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಿನ್ನೆ ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದ್ದು, ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಮಗುವನ್ನು ಎಸೆದ ತಂದೆ ಓಖ್ಲಾದ ಸಂಜಯ್​ ಕಾಲೊನಿ ನಿವಾಸಿ ಮಾನಸಿಂಗ್​ ಎಂಬುದು ತಿಳಿದು ಬಂದಿದೆ. ತನ್ನ ಮಡದಿ ಪೂಜಾಳ ಅಜ್ಜಿ ಮನೆಯ ಮೊದಲ ಮಹಡಿಯಿಂದ ಎರಡು ವರ್ಷದ ಮಗನನ್ನು ಎಸೆದು, ಬಳಿಕ ತಾನೂ ಕೆಳಗೆ ಜಿಗಿದಿದ್ದಾನೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಾಂಡೆ ಶನಿವಾರ ತಿಳಿಸಿದ್ದಾರೆ.

ಪೂಜಾ ತನ್ನ ಗಾಯಗೊಂಡ ಮಗುವನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಕರೆದೊಯ್ದಿದ್ದು, ಮಾನ್ ಸಿಂಗ್ ಅವರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ.

ಆರೋಪಿಯ ಪತ್ನಿ ಪೂಜಾ, ತನ್ನ ಪತಿಯೊಂದಿಗೆ ಸಂಬಂಧ ಸರಿಯಿಲ್ಲದಿದ್ದು, ತನ್ನ ಇಬ್ಬರು ಮಕ್ಕಳೊಂದಿಗೆ ಕೆಲವು ದಿನಗಳಿಂದ ಅಜ್ಜಿಯೊಂದಿಗೆ ವಾಸಿಸುತ್ತಿದ್ದೆ. ಇಂದು ಪತಿ ತನ್ನ ಅಜ್ಜಿ ಮನೆಗೆ ಕುಡಿದು ಬಂದು ಜಗಳವಾಡಿದ್ದಾನೆ. ನಂತರ ಎರಡು ವರ್ಷದ ಮಗನನ್ನು ಮನೆಯ ಛಾವಣಿಯಿಂದ ಕೆಳಗೆ ಎಸೆದು ನಂತರ ಕೆಳಗೆ ಹಾರಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.

ಇದನ್ನೂ ಓದಿ: ಮುಂಬೈ ತಾಜ್​ ಹೋಟೆಲ್ 10ನೇ ಮಹಡಿಯಿಂದ ಹಾರಿ ಉದ್ಯಮಿ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.