ETV Bharat / bharat

1.5 ಲಕ್ಷ ರೂ.ಗೆ ಮಾರಾಟಗೊಂಡಿದ್ದ ಬಾಲಕಿ ರಕ್ಷಿಸಿದ ಮಕ್ಕಳ ಕಲ್ಯಾಣ ಸಮಿತಿ

ಕಳೆದ ಕೆಲ ತಿಂಗಳ ಹಿಂದೆ ಮಾರಾಟಗೊಂಡಿದ್ದ 14 ವರ್ಷದ ಬಾಲಕಿಯೊಬ್ಬಳ ರಕ್ಷಣೆ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

MP News
MP News
author img

By

Published : Jun 24, 2021, 5:39 PM IST

ಧಾರ್​(ಮಧ್ಯಪ್ರದೇಶ): ಕಳೆದ ಕೆಲ ದಿನಗಳ ಹಿಂದೆ 14 ವರ್ಷದ ಬಾಲಕಿಯೊಬ್ಬಳನ್ನು ಪಾಪಿ ತಂದೆ 1.5 ಲಕ್ಷ ರೂಗೆ ಮಾರಾಟ ಮಾಡಿದ್ದನು. ಇದೀಗ ಆಕೆಯ ರಕ್ಷಣೆ ಮಾಡುವಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ(Child Welfare Committee) ಯಶಸ್ವಿಯಾಗಿದೆ. ಮಧ್ಯಪ್ರದೇಶದ ಧಾರ್​​ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಪ್ರತಾಪುರ ದಭ್ಯಾ ಗ್ರಾಮದ 25 ವರ್ಷದ ವ್ಯಕ್ತಿ ಕಳೆದ ಮೂರು ತಿಂಗಳ ಹಿಂದೆ ಬಾಲಕಿಯ ಮಾರಾಟ ಮಾಡಿದ್ದನು. ಇದಾದ ಬಳಿಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಇದರ ಬಗ್ಗೆ ದೂರು ದಾಖಲು ಮಾಡಿಕೊಂಡಿತ್ತು. ಬಾಲಕಿಯ ಫೋನ್​ ನಂಬರ್​​​ ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದ ಅಧಿಕಾರಿಗಳು ಇದೀಗ ರಕ್ಷಣೆ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸಂಯೋಜಕ ರಾಧೇಶ್ಯಾಮ್ ಕಾಜಲೆ, ಪಂಚಾಯ್ತಿ ಒತ್ತಡಕ್ಕೆ ಮಣಿದು ತಂದೆಯೊಬ್ಬ ತನ್ನ ಮಗಳಿಗೆ ಹಿಂಸೆ ನೀಡಿ ಮಾರಾಟ ಮಾಡಿದ್ದಾನೆ. ಇದೀಗ ಆಕೆಯ ರಕ್ಷಣೆ ಮಾಡಲಾಗಿದೆ ಎಂದಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.