ETV Bharat / bharat

ನೀರಿನ ಟ್ಯಾಂಕ್​ ಖಾಲಿ ಮಾಡಿ ಮನೆಗೆ ಬೆಂಕಿಯಿಟ್ಟ ತಂದೆ.. ಮಗ, ಸೊಸೆ, ಮೊಮ್ಮಕ್ಕಳಿಬ್ಬರು ಸುಟ್ಟು ಭಸ್ಮ! - ಇಡುಕ್ಕಿ ಜಿಲ್ಲೆಯಲ್ಲಿ ಮಗನ ಕುಟುಂಬವನ್ನು ಬೆಂಕಿ ಹಚ್ಚಿ ಕೊಂದ ತಂದೆ

ಕೌಟುಂಬಿಕ ಕಲಹದಿಂದಾಗಿ ತಂದೆಯೊಬ್ಬ ಮಗ ಮತ್ತು ಆತನ ಕುಟುಂಬವನ್ನೇ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.

Father set his son and family on fire in Kerala, Father killed son family in Idukki district, Kerala crime news, ಕೇರಳದಲ್ಲಿ ಮಗ ಮತ್ತು ಆತನ ಕುಟುಂಬವನ್ನು ಬೆಂಕಿ ಹಚ್ಚಿ ಕೊಂದ ತಂದೆ, ಇಡುಕ್ಕಿ ಜಿಲ್ಲೆಯಲ್ಲಿ ಮಗನ ಕುಟುಂಬವನ್ನು ಬೆಂಕಿ ಹಚ್ಚಿ ಕೊಂದ ತಂದೆ, ಕೇರಳ ಅಪರಾಧ ಸುದ್ದಿ,
ನೀರಿನ ಟ್ಯಾಂಕ್​ ಖಾಲಿ ಮಾಡಿ ಮನೆಗೆ ಬೆಂಕಿಯಿಟ್ಟ ತಂದೆ
author img

By

Published : Mar 19, 2022, 7:38 AM IST

ಇಡುಕ್ಕಿ (ಕೇರಳ): ಕ್ಷುಲ್ಲಕ ಕಾರಣಕ್ಕೆ ತಂದೆಯೊಬ್ಬ ತನ್ನ ಮಗ, ಸೊಸೆ, ಇಬ್ಬರು ಮೊಮ್ಮಕ್ಕಳನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ಜಿಲ್ಲೆಯ ತೊಡುಪುಳದ ಚೀನಿಕುಝಿ ಎಂಬಲ್ಲಿ ನಡೆದಿದೆ.

ಮೃತರನ್ನು ಫೈಸಲ್, ಆತನ ಪತ್ನಿ ಶೀಬಾ ಮತ್ತು ಮಕ್ಕಳಾದ ಮೆಹ್ರಾ(16) ಮತ್ತು ಅಸ್ನಾ(13) ಎಂದು ಗುರುತಿಸಲಾಗಿದೆ. ಕೊಲೆಯಾದ ಮೊಹಮ್ಮದ್ ಫೈಸಲ್ ತಂದೆ ಹಮೀದ್ (79)ನನ್ನು ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ಸಮಸ್ಯೆಗಳಿಂದ ಈ ಘಟನೆ ನಡೆದಿದ್ದು, ಶನಿವಾರ ರಾತ್ರಿ (ಇಂದು ಬೆಳಗ್ಗೆ) 1 ಗಂಟೆಗೆ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಬೆಂಗಳೂರಲ್ಲಿ ಪ್ರೀತಿಸಿದ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟನಾ ಪ್ರಿಯಕರ?

ನಡೆದಿದ್ದೇನು: ಹಮೀದ್ ತಮ್ಮ ಮಗನಿಗೆ ತೊಡುಪುಳದಲ್ಲಿ 50 ಸೆಂಟ್ಸ್ ಜಮೀನು ನೀಡಿ ಮಣಿಯಂಕುಡಿಯಲ್ಲಿ ನೆಲೆಸಿದ್ದರು. 2018 ರಲ್ಲಿ ಹಮೀದ್ ತೊಡುಪುಳಕ್ಕೆ ಹಿಂತಿರುಗಿ ತನ್ನ ಮಗನಿಗೆ ನೀಡಿದ ಭೂಮಿಯನ್ನು ಹಿಂದಿರುಗಿಸುವಂತೆ ಒತ್ತಾಯಿಸಿದರು. ಆದರೆ, ಜಮೀನು ವಾಪಸ್ ಕೊಡಲು ಫೈಸಲ್ ಹಿಂದೇಟು ಹಾಕಿದ್ದರು.

ಫೈಸಲ್ ದಿನಸಿ ಅಂಗಡಿ ನಡೆಸುತ್ತಿದ್ದ. ಕೌಟುಂಬಿಕ ಕಲಹದ ಹಿನ್ನೆಲೆ ಫೈಸಲ್ ಮತ್ತು ಆತನ ತಂದೆ ಹಮೀದ್ ಹಲವು ವರ್ಷಗಳಿಂದ ಬೇರೆ - ಬೇರೆಯಾಗಿದ್ದರು. ಜಮೀನ ನೀಡದ ಕಾರಣ ತನ್ನ ಮಗನ ಹತ್ಯೆಗೆ ಹಮೀದ್ ಯೋಜನೆ ರೂಪಿಸಿದ್ದ. ಅದರ ಭಾಗವಾಗಿ ಹಮೀದ್ ಮನೆಯಲ್ಲಿ ಪೆಟ್ರೋಲ್ ಶೇಖರಿಸಿಕೊಂಡಿದ್ದ. ಬೆಂಕಿ ನಂದಿಸದಂತೆ ಮನೆಯ ಟ್ಯಾಂಕ್​ನಲ್ಲಿದ್ದ ನೀರನ್ನು ಖಾಲಿ ಮಾಡಿದ್ದ. ಬಳಿಕ ಫೈಸಲ್ ಮತ್ತು ಆತನ ಕುಟುಂಬ ಮಲಗಿದ್ದ ವೇಳೆ ಹಮೀದ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಏನು ತಿಳಿಯದಂತೆ ಕಾಲ್ಕಿತ್ತಿದ್ದ.

ಓದಿ: ಮರಿಯುಪೋಲ್ ಥಿಯೇಟರ್ ಮೇಲೆ ಬಾಂಬ್ ದಾಳಿ: ಅವಶೇಷಗಳಡಿ ಸಿಲುಕಿದ 1300 ಕ್ಕೂ ಹೆಚ್ಚು ನಾಗರಿಕರು,130 ಮಂದಿ ರಕ್ಷಣೆ

ಇನ್ನು ಬೆಂಕಿಯ ಜ್ವಾಲೆಯಿಂದ ಫೈಸಲ್​ ಮತ್ತು ಆತನ ಕುಟುಂಬ ಸುಟ್ಟು ಭಸ್ಮವಾಗಿದೆ. ಕೊಲೆಯ ನಂತರ ಆರೋಪಿ ಸಮೀಪದ ತನ್ನ ಸಂಬಂಧಿಕರ ಮನೆಗೆ ಹೋಗಿದ್ದ. ಅಲ್ಲಿಂದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಈ ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.