ಪೂರ್ವ ಮದಿನಿಪುರ (ಪಶ್ಚಿಮ ಬಂಗಾಳ): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮದಿನಿಪುರದಲ್ಲಿ ಭಾನುವಾರ ನಡೆಸಿದ ರ್ಯಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಸಿಸಿರ್ ಅಧಿಕಾರಿ ಭಾಗವಹಿಸಿದ್ದರು.
'ಬಂಗಾಳವನ್ನು ದಬ್ಬಾಳಿಕೆಯಿಂದ ಮುಕ್ತಗೊಳಿಸಿ. ನಾವು ನಿಮ್ಮೊಂದಿಗಿದ್ದೇವೆ, ನಮ್ಮ ಕುಟುಂಬವೂ ನಿಮ್ಮೊಂದಿಗಿದೆ. ಜೈ ಶ್ರೀರಾಮ್, ಜೈ ಭಾರತ್ ಎಂದು ಸಂಸದ ಸಿಸಿರ್ ಅಧಿಕಾರಿ ರ್ಯಾಲಿಯಲ್ಲಿ ಭಾಷಣ ಮಾಡುವಾಗ ಹೇಳಿದ್ದಾರೆ.
ಓದಿ:ಅಸ್ಸೋಂನಲ್ಲಿ ಮತ್ತೆ 'ಡಬಲ್ ಇಂಜಿನ್' ಸರ್ಕಾರ: ಪ್ರಧಾನಿ ಮೋದಿ ವಿಶ್ವಾಸ
ಅಮಿತ್ ಶಾ ಸಮ್ಮುಖದಲ್ಲಿ ಟಿಎಂಸಿ ಸಂಸದ ಸಿಸಿರ್ ಅಧಿಕಾರಿ ಅವರು ಭಾನುವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸಿಸಿರ್ ಅಧಿಕಾರಿ ಅವರ ಪುತ್ರ ಮಮತಾ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರು ಇದೀಗ ಟಿಎಂಸಿ ತೊರೆದು ಬಿಜೆಪಿ ಸೇರಿದ್ದಾರೆ.