ಹಲ್ದ್ವಾನಿ(ಉತ್ತರಾಖಂಡ): ಮದುವೆ ಎಂದರೇ ಸಂಭ್ರಮ, ಈ ಸಂಭ್ರಮದಲ್ಲಿ ಹಾಡು ನೃತ್ಯ ಸಾಮಾನ್ಯ. ಮದುವೆಯ ಮುನ್ನಾದಿನದ ಮೆಹಂದಿ ಕಾರ್ಯಕ್ರಮದಲ್ಲಿ ತಂದೆ ಸಂತೋಷದಿಂದ ನೃತ್ಯ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಗಳ ಮದುವೆಯ ಸುಖ ದುಃಖವಾಗಿ ಮಾರ್ಪಟ್ಟಿದೆ.
ಮದುವೆಯ ಹಿಂದಿನ ರಾತ್ರಿ ಮೆಹೆಂದಿ ಸಮಾರಂಭದಲ್ಲಿ ವಧುವಿನ ತಂದೆ ನೃತ್ಯ ಮಾಡುವಾಗ ಕುಸಿದು ಬಿದ್ದರು. ಅವರನ್ನೂ ಆಸ್ಪತ್ರೆಗೆ ಸೇರಿಸುವ ಮುಂಚೆಯೇ ಪ್ರಾಣಪಕ್ಷಿ ಹಾರಿ ಹೋಗಿತ್ತು. ತಂದೆಯ ಸಾವಿನ ನಡುವೆ ಮಗಳ ಮದುವೆ ಭಾನುವಾರ ರಾತ್ರಿ ಹಲ್ದ್ವಾನಿಯ ಬ್ಯಾಂಕ್ವೆಟ್ ಹಾಲ್‌ನಲ್ಲಿ ನೆರವೇರಿತು.
ತಂದೆ ಸಾವು ತಿಳಿಸದೇ ಮಗಳ ಮದುವೆ: ಮೆಹೆಂದಿ ಸಮಾರಂಭದಲ್ಲಿ ತಂದೆಗೆ ಹೃದಯಾಘಾತ ಸಂಭವಿಸಿ ಆಸ್ಪತ್ರಗೆ ಸೇರಿಸಿದರೂ ಕುಟುಂಬದವರು ಮಗಳಿಗೆ ಮಾಹಿತಿ ನೀಡಿಲ್ಲ. ವಧುವಿನ ಮಾವ ಕನ್ಯಾದಾನ ಮಾಡಿದರು. ಈ ವೇಳೆ, ತಂದೆ ಎಲ್ಲಿ ಎಂದಾಗ ತೀವ್ರ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿದ್ದಾರೆ ಎಂದು ಸುಳ್ಳು ಹೇಳಲಾಗಿತ್ತು.
ವಿವಾಹದ ನಂತರ ಕುಟುಂಬಸ್ಥರು ಎಲ್ಲ ಸಂಬಂಧಿಗಳಿಗೆ ಸಾವಿನ ಸುದ್ದಿ ತಿಳಿಸಿದ್ದಾರೆ. ಪ್ರಾಥಮಿಕ ಹೃದಯ ವೈಫಲ್ಯವೇ ಸಾವಿಗೆ ಕಾರಣ ಎಂದು ನಂಬಲಾಗಿದೆ.
ಇದನ್ನೂ ಓದಿ: ವಿವಾಹ ಔತಣಕೂಟದಲ್ಲಿ ಊಟ ಮುಟ್ಟಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ, ಕೇಸ್ ದಾಖಲು