ETV Bharat / bharat

ದೊಡ್ಡ ಬಿಕ್ಕಟ್ಟಿಗೆ ಎಸೆಯಲ್ಪಟ್ಟ ಅನ್ನದಾತ : ಕೃಷಿ ಅರ್ಥಶಾಸ್ತ್ರಜ್ಞ ಪ್ರೊ. ನರಸಿಂಹ ರೆಡ್ಡಿ ಅಭಿಮತ - ಅನ್ನದಾತರ ಸಮಸ್ಯೆಗಳು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನುಗಳ ಕುರಿತಂತೆ ರೈತರ ಪ್ರತಿಭಟನೆ ಭುಗಿಲೆದ್ದಿದೆ. ಪರ-ವಿರೋಧ ಚರ್ಚೆಗಳು ಸಹ ನಡೆದಿವೆ. ಈ ಸಂದರ್ಭದಲ್ಲಿ ಕೃಷಿ ಆರ್ಥಶಾಸ್ತ್ರಜ್ಞ ಪ್ರೊ.(ನಿವೃತ್ತ) ಡಿ. ನರಸಿಂಹ ರೆಡ್ಡಿ 'ಈಟಿವಿ ಭಾರತ'ದೊಂದಿಗೆ ಕೇಂದ್ರದ ಕೃಷಿ ಕಾನೂನುಗಳ ಕುರಿತಂತೆ ಮಾತನಾಡಿದ್ದಾರೆ.

Annadaata thrown into a larger crisis
ಸಂಕಷ್ಟದಲ್ಲಿ ರೈತ
author img

By

Published : Dec 23, 2020, 8:57 AM IST

Updated : Dec 23, 2020, 9:42 AM IST

“ಕೇಂದ್ರ ಸರ್ಕಾರ ತಂದಿರುವ ಕೃಷಿ ಕಾನೂನುಗಳು ರೈತರಲ್ಲಿ ಹೆಚ್ಚಿನ ಬಿಕ್ಕಟ್ಟು ಉಂಟು ಮಾಡುತ್ತಿವೆ. ಈಗಾಗಲೇ ಹಲವಾರು ಸಮಸ್ಯೆಗಳಿಂದ ಬಾಧಿತರಾಗಿರುವ ರೈತರನ್ನು ರಕ್ಷಿಸಲು ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸರಕಾರ ಹೊಸ ಕಾನೂನುಗಳನ್ನು ಮಾತ್ರ ರೂಪಿಸಿ ರೈತರನ್ನು ದೊಡ್ಡ ರೈತರು ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಮರ್ಜಿಗೆ ಸಿಲುಕಿಸಿದೆ” ಎಂದು ಆರೋಪಿಸುತ್ತಾರೆ ಕೃಷಿ ಅರ್ಥಶಾಸ್ತ್ರಜ್ಞ ಪ್ರೊಫೆಸರ್ (ನಿವೃತ್ತ) ಡಿ. ನರಸಿಂಹ ರೆಡ್ಡಿ.

Annadaata thrown into a larger crisis
ಸಂಕಷ್ಟದಲ್ಲಿ ರೈತ

ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಾಗೂ ಹೈದರಾಬಾದ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಸೋಶಿಯಲ್ ಸೈನ್ಸಸ್‌ನಲ್ಲಿ ಡೀನ್ ಆಗಿ ನಿವೃತ್ತರಾಗಿರುವ ಪ್ರೊಫೆಸರ್ ರೆಡ್ಡಿ ಈಗ ದೆಹಲಿ ಮೂಲದ ಮಾನವ ಅಭಿವೃದ್ಧಿ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಂಧ್ರಪ್ರದೇಶ ಸರ್ಕಾರವು 2005 ಮತ್ತು 2016ರಲ್ಲಿ ರಚಿಸಿದ್ದ ಕೃಷಿ ಆಯೋಗಗಳಲ್ಲಿ ಅವರು ಸದಸ್ಯರಾಗಿದ್ದರು. ಹಲವಾರು ಸಂಶೋಧನಾ ಪ್ರಬಂಧಗಳ ಲೇಖಕರಾಗಿರುವ ಪ್ರೊ. ನರಸಿಂಹ ರೆಡ್ಡಿ ಅವರು ಹೊಸ ಕೃಷಿ ಕಾನೂನುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನುಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದು, ಅದರ ವಿವರಗಳು ಇಲ್ಲಿವೆ:

  • ಕೇಂದ್ರ ಸರ್ಕಾರ ಪರಿಚಯಿಸಿದ ಹೊಸ ಕಾನೂನುಗಳಿಂದ ರೈತ ಯಾವ ರೀತಿಯ ಸಮಸ್ಯೆಗಳಿಗೆ ಸಿಲುಕುತ್ತಾನೆ?

ಕೇಂದ್ರದ ಹೊಸ ಕಾನೂನುಗಳು ರೈತರ ಹಿತಾಸಕ್ತಿಗೆ ದೊಡ್ಡ ಹೊಡೆತ ನೀಡುತ್ತವೆ. ರೈತರ ಹಿತಾಸಕ್ತಿಗಳನ್ನು ಕಾಪಾಡುವಂತಹ ಕೆಲವು ಬದಲಾವಣೆಗಳನ್ನು ತರುವ ಮೂಲಕ ಕೇಂದ್ರ ಸರಕಾರ ಕೃಷಿ ಮಾರುಕಟ್ಟೆ ಸಮಿತಿಗಳನ್ನು ಅಭಿವೃದ್ಧಿಪಡಿಸುವ ನಿರೀಕ್ಷೆ ಇತ್ತು. ಆದರೆ, ಸರಕಾರ ಪರಿಚಯಿಸಿದ್ದು ಅನಿಯಂತ್ರಿತ ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಮಾತ್ರ. ಇದು ನಿಜಕ್ಕೂ ಆತಂಕಕಾರಿ ವಿಷಯ. ಹೆಚ್ಚಿನ ಸಂಖ್ಯೆಯ ರೈತರಿಗೆ ಈ ಕಾನೂನುಗಳು ಯಾವುದೇ ಪ್ರಯೋಜನ ನೀಡುವುದಿಲ್ಲ.

ಇಲ್ಲಿಯವರೆಗೆ ನಾವು ಹೊಂದಿರುವುದು ಕನಿಷ್ಟ ಬೆಂಬಲ ಬೆಲೆಯೊಂದಿಗಿನ ನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆಯನ್ನು. ಆದರೆ, ಹೊಸ ಕಾನೂನುಗಳಲ್ಲಿ ಬೇಡಿಕೆ ಮತ್ತು ಪೂರೈಕೆಗಳೇ ಬೆಲೆ ಮತ್ತು ಕೃಷಿ ಉತ್ಪನ್ನವನ್ನು ನಿರ್ದೇಶಿಸತೊಡಗುತ್ತವೆ. ಮತ್ತೊಂದು ಪ್ರಮುಖ ಅಂಶವೆಂದರೆ, ಅಗತ್ಯ ಸರಕುಗಳ ಕಾಯ್ದೆಯನ್ನು ಹೊಸ ಕಾನೂನುಗಳಲ್ಲಿ ಅಪ್ರಸ್ತುತಗೊಳಿಸಲಾಗಿದೆ. ದುರುದ್ದೇಶಪೂರ್ವಕ ಸಂಗ್ರಹಣೆ ವಿರುದ್ಧ ಅಗತ್ಯ ಸರಕುಗಳ ಕಾಯ್ದೆ ನಿಜಕ್ಕೂ ಭದ್ರಕೋಟೆಯಾಗಿತ್ತು. ಭಾರೀ ಪ್ರಮಾಣದಲ್ಲಿ ಸರಕುಗಳನ್ನು ಅಗ್ಗದ ಬೆಲೆಗೆ ಸಂಗ್ರಹಿಸುವ ವ್ಯಾಪಾರ ಪದ್ಧತಿಗಳ ವಿರುದ್ಧ ರೈತರು ಮತ್ತು ಗ್ರಾಹಕರನ್ನು ಇದು ರಕ್ಷಿಸುತ್ತಿತ್ತು. ಆದರೆ, ಅನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ರೈತಸ್ನೇಹಿಯಾಗಿದ್ದ ಈ ಕಾನೂನನ್ನು ಈಗ ಕಸದ ಬುಟ್ಟಿಗೆ ಎಸೆಯಲಾಗಿದೆ.

ಹೊಸ ಕಾನೂನುಗಳ ಪರಿಣಾಮವಾಗಿ, ಸರ್ಕಾರದ ಹೂಡಿಕೆ ಪ್ರಮಾಣ ಕ್ಷೀಣಿಸುತ್ತದೆ. ಎಲ್ಲಾ ರೀತಿಯ ನಿಯಂತ್ರಣಗಳನ್ನೂ ತೆಗೆದುಹಾಕಲಾಗುವುದು. ಭಾರತೀಯ ಆಹಾರ ನಿಗಮದ (ಎಫ್‌ಸಿಐ – ಫುಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ) ಪಾತ್ರವೂ ಇನ್ನು ಮುಂದೆ ನಗಣ್ಯವಾಗುತ್ತದೆ. ಕೃಷಿ ಉತ್ಪನ್ನಗಳ ಸಂಗ್ರಹ ಅಧಿಕಾರ ಸಂಪೂರ್ಣವಾಗಿ ಖಾಸಗಿಯವರ ಕೈ ಸೇರುತ್ತದೆ. ಸಂಗ್ರಹದಿಂದ ಹಿಡಿದು ಸಂಸ್ಕರಣೆಯವರೆಗೆ, ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ಚಟುವಟಿಕೆಗಳನ್ನು ದೊಡ್ಡ ಉದ್ಯಮಿಗಳು ನಿರ್ದೇಶಿಸತೊಡಗುತ್ತಾರೆ. ಅವರಾದರೂ ಹೆಚ್ಚೇನೂ ಮಾಡುವುದಿಲ್ಲ. ಬದಲಾಗಿ, ಕೃಷಿ ಉತ್ಪನ್ನಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಬ್ರ್ಯಾಂಡ್‌ ಸೃಷ್ಟಿಸುತ್ತಾರಷ್ಟೇ.

ಇದರಿಂದ ಏನಾಗುತ್ತದೆ? ಪ್ರಾಥಮಿಕ ಕೃಷಿ ಮೂಲಸೌಕರ್ಯದ ಮೇಲಿನ ಹೂಡಿಕೆಗಳು ಕಡಿಮೆಯಾಗುತ್ತ ಹೋಗುತ್ತವೆ. ಗೋದಾಮುಗಳು, ಶೀತಲ ಸಂಗ್ರಹ ಸೌಲಭ್ಯಗಳು ಮತ್ತು ಸಂಸ್ಕರಣಾ ಘಟಕಗಳನ್ನು ನಿಯಂತ್ರಿಸುವ ಸಂಸ್ಥೆಗಳು ಅಥವಾ ವ್ಯಕ್ತಿಗಳೇ ಕೃಷಿ ಬೆಲೆಗಳನ್ನೂ ನಿರ್ದೇಶಿಸತೊಡಗುತ್ತಾರೆ. ಈ ಸರಳ ಸತ್ಯವನ್ನು ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು.

ಹೊಸ ಕಾನೂನುಗಳಿಂದ ಸಕ್ರಿಯವಾಗಲಿರುವ ಖಾಸಗಿ ಗೋದಾಮುಗಳು, ರೈತರ ಸರಕುಗಳನ್ನು ಶೇಖರಿಸಿಡಲು ಹೆಚ್ಚಿನ ಶುಲ್ಕವನ್ನು ಸಂಗ್ರಹಿಸುತ್ತವೆ. ರೈತ ತನ್ನ ಸರಕುಗಳನ್ನು ಅಂತಹ ಗೋದಾಮುಗಳಲ್ಲಿ ಸಂಗ್ರಹಿಸಿ ಉತ್ತಮ ಬೆಲೆಗೆ ಕಾಯುತ್ತಿದ್ದರೆ, ಇಳುವರಿ ಹೆಚ್ಚಿಸಲು ಮಾಡಿದ ಹೂಡಿಕೆಗಿಂತ ಆತನಿಗೆ ಹೆಚ್ಚೇನೂ ಸಿಗುವುದಿಲ್ಲ. ಒಂದು ವೇಳೆ ಗೋದಾಮುಗಳು ಸರ್ಕಾರದ ನಿಯಂತ್ರಣದಲ್ಲಿದ್ದರೆ, ರೈತನು ಕೈಗೆಟುಕುವ ಬೆಲೆಯಲ್ಲಿ ಸರಕುಗಳನ್ನು ಸಂಗ್ರಹಿಸಬಹುದು. ಅಂತಹ ಗೋದಾಮುಗಳಲ್ಲಿ ಸಂಗ್ರಹವಾಗಿರುವ ಉತ್ಪನ್ನಗಳ ಮೇಲೂ ಅವನು ಸಾಲ ಪಡೆಯಬಹುದು. ಆದರೆ, ಹೊಸ ಕಾನೂನುಗಳು ಅಂತಹ ಸೌಲಭ್ಯಗಳನ್ನು ಅಸಾಧ್ಯವಾಗಿಸುತ್ತವೆ.

  • ಸೂಕ್ತ ಬೆಲೆ ಸಿಗುವಂತಹ ಯಾವುದೇ ಮಾರುಕಟ್ಟೆಯಲ್ಲಿ ರೈತ ತನ್ನ ಉತ್ಪನ್ನಗಳಿಗೆ ಮಾರಾಟ ಮಾಡುವ ಅವಕಾಶವನ್ನು ಹೊಸ ಕಾನೂನು ಕಲ್ಪಿಸುತ್ತದೆ. ಹೀಗಿರುವಾಗ ಇದು ರೈತನಿಗೆ ನಷ್ಟವನ್ನುಂಟು ಮಾಡುತ್ತದೆ ಎಂದು ನೀವು ಹೇಗೆ ಹೇಳುತ್ತೀರಿ?

ದೇಶದಲ್ಲಿರುವ ಅಂದಾಜು ಶೇಕಡಾ 85ರಷ್ಟಿರುವ ರೈತರು ಸಣ್ಣ ಮತ್ತು ಪ್ರಮುಖರಲ್ಲದ ಕೃಷಿಕರು. ಒಂದು ವೇಳೆ ಮಾರುಕಟ್ಟೆ ಪ್ರಾಂಗಣವು ದೂರದಲ್ಲಿದ್ದರೆ, ರೈತರು ತಮ್ಮ ಉತ್ಪನ್ನಗಳನ್ನು ತಮ್ಮ ಗ್ರಾಮದಲ್ಲಿಯೇ ವ್ಯಾಪಾರಿಗೆ ಮಾರಾಟ ಮಾಡುತ್ತಾರೆ. ಹೀಗಿರುವಾಗ ಇಂತಹ ರೈತರು ಉತ್ತಮ ಬೆಲೆಗಾಗಿ ತಮ್ಮ ಸರಕುಗಳನ್ನು ದೂರದ ಸ್ಥಳಗಳಿಗೆ ಒಯ್ಯಬಹುದು ಎನ್ನಲು ಹೇಗೆ ಸಾಧ್ಯ? ತಾನು ಬೆಳೆದ 10 ಕ್ವಿಂಟಲ್ ಭತ್ತ ಅಥವಾ 10 ಚೀಲ ಹತ್ತಿಗಾಗಿ, ದೂರದ ಸ್ಥಳದಲ್ಲಿರುವ ಮಾರುಕಟ್ಟೆಗೆ ಆ ಸರಕುಗಳನ್ನು ಸಾಗಿಸಲು ಸಾಧಾರಣ ರೈತನೊಬ್ಬ ಟ್ರ್ಯಾಕ್ಟರ್ ಸೇವೆಯನ್ನು ಬಳಸಿಕೊಳ್ಳುವುದು ಸಾಧ್ಯವೆ? ಉತ್ತಮ ಬೆಲೆ ಪಡೆಯುವವರೆಗೆ ಅಂತಹ ರೈತ ಆ ಮಾರುಕಟ್ಟೆಯಲ್ಲಿ ಕಾಯಬಲ್ಲನೆ? ಇಂದಿಗೂ ತೆಲಂಗಾಣದ ರೈತರು ಉತ್ತಮ ಬೆಲೆ ಪಡೆಯಲು ತಮ್ಮ ಉತ್ಪನ್ನಗಳನ್ನು ದೂರದ ಸ್ಥಳಗಳಿಗೆ ಕೊಂಡೊಯ್ಯುವ ಸ್ಥಿತಿಯಲ್ಲಿಲ್ಲ. ಒಂದು ವೇಳೆ ಕೃಷಿ ಮಾರುಕಟ್ಟೆ ಪ್ರಾಂಗಣಗಳ ಇತಿಶ್ರೀ ಆದಲ್ಲಿ ರೈತರನ್ನು ಕರುಣಾಜನಕ ಪರಿಸ್ಥಿತಿಗೆ ಈಡು ಮಾಡಿದಂತಾಗುವುದು.

  • ಪಂಜಾಬ್ ಮತ್ತು ಹರಿಯಾಣ ಮೂಲದ ಕಮಿಷನ್ ಏಜೆಂಟರನ್ನು ಹೊರತುಪಡಿಸಿ, ಈ ಕಾನೂನುಗಳಿಂದಾಗಿ ಯಾವ ರೈತರಿಗೂ ಯಾವುದೇ ರೀತಿ ನಷ್ಟವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ನಿಮ್ಮ ಅನಿಸಿಕೆ ಏನು?

ಅದು ನಿಜವಲ್ಲ. ಈ ಕಾನೂನುಗಳ ದುಷ್ಟ ಪರಿಣಾಮವನ್ನು ಇಡೀ ದೇಶವೇ ಅನುಭವಿಸಲಿದೆ. ಪಂಜಾಬ್‌ನಲ್ಲಿನ ಸಮಸ್ಯೆ ಕೊಂಚ ಬೇರೆಯೇ ಇದೆ. ಅಲ್ಲಿ ಬೆಳೆಯುವ ಶೇಕಡಾ 84ರಷ್ಟು ಕೃಷಿ ಉತ್ಪನ್ನಗಳೆಂದರೆ ಭತ್ತ ಮತ್ತು ಗೋಧಿ ಮಾತ್ರ. ತಮ್ಮ ಉತ್ಪನ್ನಗಳ ಶೇಕಡಾ 95ರಷ್ಟು ಇಳುವರಿಗೆ ಅವರು ಕನಿಷ್ಟ ಬೆಂಬಲ ಬೆಲೆ ಪಡೆಯುತ್ತಾರೆ. ಇನ್ನು, ಪಂಜಾಬ್‌ನಲ್ಲಿ ಬೆಳೆ ಬದಲಾವಣೆ ಎಂದರೆ ಭತ್ತದ ನಂತರ ಗೋಧಿ ಬೆಳೆಯುವುದು ಎಂದೇ ಅರ್ಥ. ಈ ಬೆಳೆಗಳನ್ನೇ ಅಲ್ಲಿ ಬೆಳೆಯಲಾಗುತ್ತದೆ. ಏಕೆಂದರೆ ಅವುಗಳು ಕನಿಷ್ಟ ಬೆಂಬಲ ಬೆಲೆಯನ್ನು ಪಡೆಯುವುದು ಪಕ್ಕಾ. ವಿಪರ್ಯಾಸವೆಂದರೆ ಭತ್ತವನ್ನು ಬೆಳೆಯುವ ಪಂಜಾಬ್ ತಾನೇ ಅದನ್ನು ಬಳಸುವುದಿಲ್ಲ. ಹೀಗಾಗಿ ರೈತರು ತಮಗಾಗಿ ಏನನ್ನೂ ಇಟ್ಟುಕೊಳ್ಳದೆ ಇಡೀ ಫಸಲನ್ನು ಮಾರಾಟ ಮಾಡುತ್ತಾರೆ. ಆದರೆ, ಇತರ ರಾಜ್ಯಗಳಲ್ಲಿ ಇದು ಹಾಗಲ್ಲ. ರೈತನು ತನ್ನ ಸ್ವಂತ ಅವಶ್ಯಕತೆಗಳನ್ನು ಪೂರೈಸಲು ಕೆಲ ಪ್ರಮಾಣದ ಫಸಲನ್ನು ಇಟ್ಟುಕೊಂಡ ಬಾಕಿ ಉಳಿಯುವ ಭತ್ತವನ್ನಷ್ಟೇ ಮಾರುತ್ತಾನೆ. ಆಂಧ್ರಪ್ರದೇಶದಲ್ಲಿ ಬಿತ್ತನೆಯಾಗುವ ಶೇ. 40ರಷ್ಟು ಬೆಳೆ ಭತ್ತವೇ ಆಗಿದೆ. ತೆಲಂಗಾಣದಲ್ಲಿ ಹತ್ತಿಯನ್ನು ಹೆಚ್ಚು ವ್ಯಾಪಕವಾಗಿ ಬೆಳೆಯಲಾಗುತ್ತದೆಯಾದರೂ, ಕಳೆದ ವರ್ಷ ಮತ್ತು ಈ ವರ್ಷ ಭತ್ತದ ಬಿತ್ತನೆ ಅಲ್ಲಿ ಗಣನೀಯವಾಗಿ ಹೆಚ್ಚಾಗಿದೆ.

ಸಮಸ್ಯೆ ಕೇವಲ ಭತ್ತ ಮತ್ತು ಗೋಧಿ ಬೆಳೆಯುವ ರೈತರಿಗಷ್ಟೇ ಸೀಮಿತವಾಗಿಲ್ಲ. ಶೇಂಗಾ ಪ್ರಧಾನ ಬೆಳೆಯಾಗಿರುವ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಉದಾಹರಣೆಯನ್ನು ಹೇಳುತ್ತೇನೆ ಕೇಳಿ. ಶೇಂಗಾಗೆ ಪರ್ಯಾಯವೊಂದನ್ನು ಉತ್ತೇಜಿಸುವ ಅವಶ್ಯಕತೆ ಅಲ್ಲಿದೆ ಎಂಬುದನ್ನು ನಾವು ಕಳೆದ ಹಲವಾರು ದಶಕಗಳಿಂದ ಕೇಳುತ್ತಿದ್ದೇವೆ. ಆ ಜಿಲ್ಲೆಯ ರೈತರು ಸಹ ಪಪ್ಪಾಯಿ ಮತ್ತು ಇತರ ತೋಟಗಾರಿಕಾ ಬೆಳೆಗಳಂತಹ ಪರ್ಯಾಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ, ಇಂತಹ ಬೆಳೆಗಾರರ ಆ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ಇಂತಹ ಉತ್ಪನ್ನಗಳನ್ನು ಸಂಗ್ರಹಿಸುವ ಹಾಗೂ ಮಾರುಕಟ್ಟೆಗೆ ಕಳಿಸುವಂತಹ ಯಾವುದೇ ವ್ಯವಸ್ಥೆ ಅಲ್ಲಿಲ್ಲ. ತೆಲಂಗಾಣದಲ್ಲಿ ಹತ್ತಿಗೆ ಬೆಂಬಲ ಬೆಲೆ ಇದ್ದರೂ ಕೂಡಾ ಅಲ್ಲಿಯ ಹತ್ತಿ ಬೆಳೆಗಾರರು ಪ್ರತಿವರ್ಷ ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ. ಇಂತಹ ಪರಿಸ್ಥಿತಿಯನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಬದಲು, ಮಾರುಕಟ್ಟೆಯನ್ನು ಅನಿಯಂತ್ರಿತಗೊಳಿಸುವ ಕಾನೂನುಗಳನ್ನು ಮಾಡಿದೆ ಕೇಂದ್ರ ಸರಕಾರ, ಆ ಮೂಲಕ ಇಡೀ ಮಾರುಕಟ್ಟೆಯನ್ನು ಖಾಸಗಿ ಪಕ್ಷಗಳಿಗೆ ಹಸ್ತಾಂತರಿಸಲು ಮುಂದಾಗಿದೆ. ಇಂತಹ ಕಾನೂನುಗಳ ದುಷ್ಪರಿಣಾಮಗಳನ್ನು ಎಲ್ಲಾ ರಾಜ್ಯಗಳು ಅನುಭವಿಸಲಿವೆ.

  • ಹೊಸ ಕಾನೂನುಗಳ ಪರಿಣಾಮವಾಗಿ ಎರಡು ರೀತಿಯ ಮಾರುಕಟ್ಟೆಗಳು ಹೊರಹೊಮ್ಮುತ್ತವೆ ಎಂದು ಹೇಳಲಾಗಿದೆ. ಅಲ್ಲದೇ ಎರಡು ವಿಭಿನ್ನ ರೀತಿಯ ನಿಯಮಗಳು ಇರುತ್ತವೆ ಎಂದು ಹೇಳಲಾಗುತ್ತದೆ. ಇದು ಹೇಗೆ ಸಾಧ್ಯ?

ಹೌದು, ಕೃಷಿ ಮಾರುಕಟ್ಟೆ ಸಮಿತಿಗಳು ಇರಲಿವೆ. ಆದರೆ, ಆ ಮಾರುಕಟ್ಟೆ ಪ್ರಾಂಗಣದ ಹೊರಗೆ ಬಂದು ಸರಕುಗಳನ್ನು ಖರೀದಿಸಲು ಖಾಸಗಿ ವ್ಯಕ್ತಿಗಳಿಗೆ ಅವಕಾಶವಿರುತ್ತದೆ. ಅಂದರೆ ಎರಡು ರೀತಿಯ ಮಾರುಕಟ್ಟೆಗಳು ಇರುತ್ತವೆ ಎಂದರ್ಥ. ಕನಿಷ್ಟ ಬೆಂಬಲ ಬೆಲೆಯನ್ನು ಖಾಸಗಿ ವಿತರಕರ ಮೇಲೆ ಜಾರಿಗೊಳಿಸುವುದು ಹೇಗೆ ಸಾಧ್ಯ? ಕೃಷಿ ಉತ್ಪನ್ನಗಳನ್ನು ನಿರ್ದಿಷ್ಟ ಬೆಲೆಗೆ ಖರೀದಿಸುವಂತೆ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸುವ ಯಾವುದೇ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಿಲ್ಲ. ಬದಲಾಗಿ, ಮುಕ್ತ ಮಾರುಕಟ್ಟೆಯನ್ನು ಸಕ್ರಿಯಗೊಳಿಸಲಿಕ್ಕಾಗಿ ಹೊಸ ಕಾನೂನುಗಳನ್ನು ಜಾರಿಗೆ ತಂದಿತು. ಮಾರುಕಟ್ಟೆ ಪ್ರಾಂಗಣದಲ್ಲಿ ನಿಯಂತ್ರಿತ ಮಾರ್ಕೆಟಿಂಗ್ ಇರುತ್ತದೆ ಮತ್ತು ಅದರ ಹೊರಗೆ ಅನಿಯಂತ್ರಿತ ಮಾರುಕಟ್ಟೆ ಇರುತ್ತದೆ. ಆ ಮಾರುಕಟ್ಟೆಗಳಲ್ಲಿ ಪ್ರತಿಯೊಂದಕ್ಕೂ ವಿಭಿನ್ನ ಶುಲ್ಕಗಳು ಮತ್ತು ನಿಯಮಗಳು ಅನ್ವಯವಾಗುತ್ತವೆ.

ಇದರ ಪರಿಣಾಮವಾಗಿ, ವ್ಯಾಪಾರಿಗಳು ನಿಯಂತ್ರಿತ ಮಾರುಕಟ್ಟೆಯನ್ನು ಬಿಟ್ಟು ತಮ್ಮ ವ್ಯವಹಾರವನ್ನು ಅನಿಯಂತ್ರಿತ ಮಾರುಕಟ್ಟೆಯಲ್ಲಿ ಮಾಡುತ್ತಾರೆ. ಮಾರುಕಟ್ಟೆ ಪ್ರಾಂಗಣದಲ್ಲಿ ರೈತರಿಗೆ ಬೆಲೆ ನಿಗದಿಪಡಿಸಲು ವ್ಯಾಪಾರಿಗಳು ತಮ್ಮೊಳಗೇ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಈಗಾಗಲೇ ಇದೆ. ಕಾನೂನು ಜಾರಿಗೆ ಬಂದ ನಂತರ ಅವರು ಇದನ್ನೇ ಮಾರುಕಟ್ಟೆ ಪ್ರಾಂಗಣದ ಹೊರಗೂ ಮಾಡುತ್ತಾರೆ. ಮಾರುಕಟ್ಟೆ ಪ್ರಾಂಗಣದೊಳಗೆ ಇದು ನಮ್ಮ ಗಮನಕ್ಕೆ ಬಂದಾಗ ನಾವು ಅಧಿಕಾರಿಗಳನ್ನು ಸಂಪರ್ಕಿಸಬಹುದು. ಅಂತಹ ವ್ಯಾಪಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮಾಡಲು ಪ್ರಯತ್ನಿಸಬಹುದು. ಆದರೆ ಹೊಸ ನಿಯಮಗಳು ಜಾರಿಗೊಂಡರೆ, ಕೃಷಿ ಮಾರುಕಟ್ಟೆ ಪ್ರಾಂಗಣದ ಹೊರಗೆ ನಮ್ಮ ದೂರುಗಳನ್ನು ಕೇಳಲು ಯಾರೂ ಇರುವುದಿಲ್ಲ.

ಇನ್ನು, ಮಾರುಕಟ್ಟೆ ಪ್ರಾಂಗಣದ ಹೊರಗೆ ಬೆಲೆ, ತೂಕ, ತೇವಾಂಶ, ಗುಣಮಟ್ಟ ಇತ್ಯಾದಿ ಅಂಶಗಳ ಕಾರಣದಿಂದಾಗಿ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬುಡಕಟ್ಟು ಪ್ರದೇಶಗಳು ಮತ್ತು ಇತರ ದೂರದ ಪ್ರದೇಶಗಳಲ್ಲಿ ಈ ರೀತಿಯ ರೈತರ ಶೋಷಣೆ ಈಗಾಗಲೇ ಜಾರಿಯಲ್ಲಿದೆ. ಹೊಸ ಕಾನೂನುಗಳು ಎಲ್ಲಾ ರೈತರನ್ನು ಈ ರೀತಿಯ ಸಮಸ್ಯೆಗಳಿಗೆ ಒಡ್ಡುತ್ತವೆ. ಕೃಷಿ ಮಾರುಕಟ್ಟೆ ಪ್ರಾಂಗಣಗಳನ್ನು ರದ್ದುಗೊಳಿಸದೆ ಕನಿಷ್ಟ ಬೆಂಬಲ ಬೆಲೆಯನ್ನು ಮಾತ್ರ ಇಲ್ಲವಾಗಿಸಲು ಕೇಂದ್ರ ಸರ್ಕಾರ ಬಯಸಿದೆ ಎಂಬುದು ಹೊಸ ಕಾನೂನುಗಳಿಂದ ಸ್ಪಷ್ಟ.

ಪಂಜಾಬ್, ಹರಿಯಾಣ ಮತ್ತು ಪೂರ್ವ ಉತ್ತರಪ್ರದೇಶವನ್ನು ಹೊರತುಪಡಿಸಿ, ಕೃಷಿ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ) ರೈತರಿಂದ ಕೇವಲ ಶೇ. 20ರಷ್ಟು ಉತ್ಪನ್ನಗಳನ್ನು ಮಾತ್ರ ಖರೀದಿಸುತ್ತವೆ. ಆ ಪ್ರಮಾಣದ ಕನಿಷ್ಟ ಬೆಲೆಯನ್ನಾದರೂ ಪಡೆದುಕೊಳ್ಳಲು ರೈತರು ಬೇಡಿಕೆ ಇಡಲು ಅವಕಾಶವಿದೆ. ಹೊಸ ಕಾನೂನುಗಳು ಜಾರಿಗೆ ಬಂದಾಗ, ಕನಿಷ್ಟ ಬೆಂಬಲ ಬೆಲೆ ಇರುತ್ತದೆ ಎಂದು ಸರಕಾರ ವಾದಿಸುತ್ತದೆ. ಆದರೆ ಅನಿಯಂತ್ರಿತ ಮಾರುಕಟ್ಟೆಯಿಂದಾಗಿ ಅದನ್ನು ಜಾರಿಗೊಳಿಸಲು ಮಾತ್ರ ಸಾಧ್ಯವಾಗದು.

  • ಹಿಂದಿನ ಯುಪಿಎ ಸರ್ಕಾರ ಕಡೆಗಣಿಸಿದ್ದ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆಯಲ್ಲ?

ಇದು ಸಂಪೂರ್ಣವಾಗಿ ಸುಳ್ಳು ಪ್ರಚಾರ. ಇಂದು ನಡೆಯುತ್ತಿರುವುದು ಸ್ವಾಮಿನಾಥನ್ ವರದಿ ಸೂಚಿಸಿದ್ದಕ್ಕೆ ಸಂಪೂರ್ಣ ವಿರುದ್ಧವಾಗಿ. ಬೆಂಬಲ ಬೆಲೆಯನ್ನು ಹೇಗೆ ಲೆಕ್ಕ ಹಾಕಬೇಕೆಂಬುದನ್ನು ಸ್ವಾಮಿನಾಥನ್‌ ಆಯೋಗ ಸ್ಪಷ್ಟವಾಗಿ ನಿಗದಿಪಡಿಸಿತ್ತು ಮತ್ತು ಬೆಂಬಲ ಬೆಲೆಗೆ ಹೆಚ್ಚುವರಿಯಾಗಿ ಶೇಕಡಾ 50ರಷ್ಟನ್ನು ಸೇರಿಸಲು ಅದು ಸಲಹೆ ನೀಡಿತ್ತು. ಆದರೆ, ಬೆಲೆ ಲೆಕ್ಕಾಚಾರದ ವಿಧಾನದ ಕುರಿತು ಆಯೋಗ ನೀಡಿದ್ದ ಸಲಹೆಯನ್ನು ಇವರು ವಿರೂಪಗೊಳಿಸುತ್ತಿದ್ದಾರೆ. ಅವರು ಈಗ ಮಾಡುತ್ತಿರುವುದನ್ನು ಆಯೋಗದ ಶಿಫಾರಸಿನ ಅನುಷ್ಠಾನ ಎಂದು ಭಾವಿಸುವುದು ಹೇಗೆ ಸಾಧ್ಯ? ಬೆಲೆಯನ್ನು ನಿಗದಿಪಡಿಸುವಾಗ, ಹೂಡಿಕೆಯ ಮೇಲಿನ ಬಡ್ಡಿ ಮತ್ತು ಭೂ ಹಿಡುವಳಿ ಸೇರಿದಂತೆ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವಂತೆ ಆಯೋಗ ಹೇಳಿದೆ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳು ಕೇವಲ ಕನಿಷ್ಟ ಬೆಂಬಲ ಬೆಲೆಗಷ್ಟೇ ಸೀಮಿತವಾಗಿಲ್ಲ. ಗೋದಾಮುಗಳು ಮತ್ತು ಇತರ ಮೂಲಸೌಕರ್ಯ ಸೌಲಭ್ಯಗಳ ಬಗ್ಗೆ ಕೂಡ ಆಯೋಗ ಹಲವಾರು ಶಿಫಾರಸುಗಳನ್ನು ಮಾಡಿದೆ. ಆದರೆ, ಕೇಂದ್ರ ಸರಕಾರ ಈಗ ಮಾಡುತ್ತಿರುವುದು ಆಯೋಗದ ಶಿಫಾರಸಿಗೆ ಸಂಪೂರ್ಣ ವಿರುದ್ಧವಾಗಿದೆ.

  • ಕಾನೂನುಗಳು ರೈತರ ಪರವಾಗಿ ಇರದಿದ್ದಾಗ, ರಾಜ್ಯ ಸರ್ಕಾರಗಳು ಅವುಗಳನ್ನು ಪಾಲಿಸದೇ ಇರುವುದು ಸಾಧ್ಯವಿಲ್ಲವೇ?

ಇದರಲ್ಲಿ ರಾಜ್ಯ ಸರ್ಕಾರಗಳಿಗೆ ಯಾವುದೇ ಪಾತ್ರವಿಲ್ಲ. ಕೃಷಿ ರಾಜ್ಯ ವಿಷಯವಾಗಿದೆ. ಬೀಜ ಪೂರೈಕೆಯಿಂದ ಹಿಡಿದು ಬೆಳೆ ಸಂಗ್ರಹದವರೆಗೆ ಎಲ್ಲವೂ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದೆ ನಿಜ. ಆದರೆ ಕೇಂದ್ರ ಸರ್ಕಾರವು ತನ್ನ ಪರವಾಗಿರುವ ನಿಯಮದ ಲಾಭವನ್ನು ಪಡೆದುಕೊಳ್ಳುವ ಮೂಲಕ ಹೊಸ ಕಾನೂನುಗಳನ್ನು ಜಾರಿಗೆ ತಂದಿದೆ. ಈ ಹಿಂದೆ ಕೇಂದ್ರವು ಒಂದು ಮಾದರಿ ಕಾನೂನನ್ನು ರೂಪಿಸಿ ಅದನ್ನು ರಾಜ್ಯ ಸರಕಾರಗಳ ನಡುವೆ ಪ್ರಸಾರ ಮಾಡಿ ಆ ವಿಧಾನಗಳ ಮೂಲಕ ಏನನ್ನಾದರೂ ಜಾರಿಗೆ ತನ್ನಿ ಎಂದು ಸಲಹೆ ನೀಡಿತ್ತು. ಆದರೆ, ಇದುವರೆಗಿನ ಸಂಪ್ರದಾಯಕ್ಕೆ ವಿರುದ್ಧವಾಗಿ, ಈಗ ಕೇಂದ್ರವೇ ಈ ಕಾನೂನುಗಳನ್ನು ಜಾರಿಗೆ ತಂದುಬಿಟ್ಟಿದೆ. ಈಗ ರಾಜ್ಯಗಳು ಈ ಕಾನೂನುಗಳನ್ನು ಅನುಸರಿಸಬೇಕಿದೆ.

ಬೀಜ, ರಸಗೊಬ್ಬರ, ಬೆಳೆ ಸಾಲ, ಬೆಳೆ ಸಂಗ್ರಹಣೆ ಅಥವಾ ಇನ್ನಾವುದೇ ಆಗಿರಲಿ- ರೈತ ತನ್ನ ಎಲ್ಲ ಅವಶ್ಯಕತೆಗಳಿಗಾಗಿ ರಾಜ್ಯ ಸರಕಾರದ ಕಡೆಗೇ ಮುಖ ಮಾಡುತ್ತಾನೆ. ಕೇಂದ್ರವು ರಾಜ್ಯಗಳ ಅಧಿಕಾರವನ್ನು ಅತಿಯಾಗಿ ಉಲ್ಲಂಘಿಸುತ್ತಿದೆ. ನಿಯಂತ್ರಿತ ಮಾರ್ಕೆಟಿಂಗ್ ಇಲ್ಲದಿದ್ದರೆ ರಾಜ್ಯ ಸರ್ಕಾರದ ನಿಯಂತ್ರಣವೂ ಇರುವುದಿಲ್ಲ. ಈ ವಿಷಯದಲ್ಲಿ ರಾಜ್ಯಗಳಿಗೆ ಯಾವುದೇ ಪಾತ್ರವಿಲ್ಲ ಎಂಬಂತೆ ವರ್ತಿಸುವ ಕೇಂದ್ರದ ನಡೆ ಸರಿಯಲ್ಲ.

ಕೃಷಿ ಮಾರುಕಟ್ಟೆ ಪ್ರಾಂಗಣದ ವ್ಯಾಪ್ತಿಗೆ ಮೀರಿದ ಹೊಸ ವ್ಯಾಪಾರ ಅಂಶಗಳನ್ನು ಕೇಂದ್ರ ಸರ್ಕಾರ ರಚಿಸಿದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಪ್ರತಿಯೊಂದು ಸ್ಥಳವೂ ಕೃಷಿ ಮಾರುಕಟ್ಟೆ ಸಮಿತಿಯ ವ್ಯಾಪ್ತಿಗೆ ಬರುತ್ತದೆ ಎಂದು ಕೆಲವು ರಾಜ್ಯಗಳು ವಾದಿಸುತ್ತಿರುವುದು ಈ ಕಾರಣಕ್ಕಾಗಿ. ಹೊಸ ಕಾನೂನನ್ನು ರೂಪಿಸುವಾಗ, ಕೇಂದ್ರವು ರೈತರನ್ನು ಸಂಪರ್ಕಿಸಿಲ್ಲ. ಅದೇ ರೀತಿ ರಾಜ್ಯ ಸರ್ಕಾರಗಳನ್ನೂ ಅದು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದರಿಂದಾಗಿ ಮುಂದೆ ತೊಂದರೆಗೆ ಸಿಲುಕುವವರು ಮಾತ್ರ ರೈತರೇ. ಇದರ ಹೊಡೆತವನ್ನು ರಾಜ್ಯಗಳು ಸಹ ಎದುರಿಸಬೇಕಾಗುತ್ತದೆ. ಉದಾರೀಕರಣದ ತನ್ನ ನೀತಿಯನ್ನು ವಿಸ್ತರಿಸುವ ಭಾಗವಾಗಿ, ದೊಡ್ಡ ಉದ್ಯಮಿಗಳನ್ನು ಈ ಕ್ಷೇತ್ರಕ್ಕೆ ಕರೆ ತರಲು ಕೇಂದ್ರ ಸರ್ಕಾರ ಈ ಕಾನೂನುಗಳನ್ನು ಜಾರಿಗೆ ತಂದಿದೆ. ಅದಕ್ಕಾಗಿಯೇ ಅದು ರಾಜ್ಯಗಳನ್ನು ಸಂಪೂರ್ಣವಾಗಿ ಪಕ್ಕಕ್ಕೆ ಸರಿಸಿದೆ.

  • ರೈತರಿಗೆ ಸಾಂತ್ವನದ ಕ್ರಮವಾಗಿ ಕೇಂದ್ರ ಸರ್ಕಾರ ಏನು ಮಾಡಬೇಕು?

ಕೃಷಿ ಕ್ಷೇತ್ರದಲ್ಲಿ ಸರ್ಕಾರದ ಹೂಡಿಕೆಯನ್ನು ಹೆಚ್ಚಿಸಬೇಕು. ಮುಂದಿನ ಹತ್ತು ವರ್ಷಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ 1 ಲಕ್ಷ ಕೋಟಿ ರೂಪಾಯಿಗಳನ್ನು ನೀಡುವ ಬದಲು, ಸರ್ಕಾರವೇ ಆ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು. ಕೃಷಿಗೆ ಸಂಬಂಧಿಸಿದ ಕ್ಷೇತ್ರಗಳನ್ನು ಪ್ರೋತ್ಸಾಹಿಸಬೇಕು. ಆ ಕ್ಷೇತ್ರಗಳನ್ನು ಅವಲಂಬಿಸಿರುವ ಜನರ ಪ್ರಮಾಣವನ್ನು ಶೇಕಡಾ 25ಕ್ಕೆ ಹೆಚ್ಚಿಸಬೇಕು. ದೇಶದಲ್ಲಿ ತಲಾ ಭೂಸ್ವಾಧೀನದ ಪ್ರಮಾಣ ಕೇವಲ 2.5 ಎಕರೆ ಮಾತ್ರ. ಈ ಸಣ್ಣ ತುಂಡು ಭೂಮಿಯಿಂದ ಅಗತ್ಯವಾದ ಆದಾಯವನ್ನು ಪಡೆಯುವುದು ರೈತನಿಗೆ ಸಾಧ್ಯವಿಲ್ಲ. ರೈತನ ಕುಟುಂಬದ ತಲಾ ರಾಷ್ಟ್ರೀಯ ಆದಾಯ 1.25 ಲಕ್ಷ ರೂಪಾಯಿ ಇದ್ದರೆ, ಪಂಜಾಬ್‌ನಲ್ಲಿ ಇದು 3.4 ಲಕ್ಷ ರೂಪಾಯಿ.

2004-05 ಮತ್ತು 2017-18ರ ನಡುವೆ ಅಂದಾಜು 5 ಕೋಟಿ ಜನರು ಕೃಷಿಯನ್ನು ತ್ಯಜಿಸಿದ್ದಾರೆ. ಇತ್ತೀಚೆಗೆ ಲಾಕ್‌ಡೌನ್ ಘೋಷಣೆಯ ನಂತರ ಲಕ್ಷಾಂತರ ಜನರು ತಮ್ಮ ಗ್ರಾಮಗಳನ್ನು ತಲುಪಲು ದೀರ್ಘ ಪಾದಯಾತ್ರೆ ನಡೆಸಿದರು. ಈ ಜನರಲ್ಲಿ ಹೆಚ್ಚಿನವರು ರೈತರಾಗಿದ್ದರು. ದೇಶದಲ್ಲಿ ಸರಾಸರಿ ಕೃಷಿ ಆಧಾರಿತ ಆದಾಯವು ಶೇಕಡಾ 1 ರಷ್ಟು ಏರಿಕೆಯಾದರೆ, ಇತರ ಕ್ಷೇತ್ರಗಳಲ್ಲಿನ ಸರಾಸರಿ ಆದಾಯದ ಬೆಳವಣಿಗೆ ಶೇಕಡಾ 15ರಷ್ಟಿದೆ.

ಅಮೆರಿಕದಲ್ಲಿ ಆ ದೇಶದ ಕೇವಲ ಶೇಕಡಾ 2 ರಷ್ಟು ಜನಸಂಖ್ಯೆ ಮಾತ್ರ ಕೃಷಿಯನ್ನು ಅವಲಂಬಿಸಿದೆ. ಆದರೂ ತಾನು ಬಳಸುವುದಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಉತ್ಪಾದಿಸಲು ಆ ದೇಶಕ್ಕೆ ಸಾಧ್ಯವಾಗುತ್ತಿದೆ. ಜಪಾನ್‌ನಲ್ಲಿ ಸಣ್ಣ ಮತ್ತು ಪ್ರಮುಖವಲ್ಲದ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ದೇಶದ ಜನಸಂಖ್ಯೆಯ ಅಂದಾಜು ಶೇಕಡಾ 15 ರಷ್ಟು ಜನ ಕೃಷಿಯ ಮೇಲೆ ಅವಲಂಬಿತವಾಗಿದ್ದಾರೆ.

ಕೃಷಿಗೆ ಸಂಬಂಧಿಸಿದ ಕ್ಷೇತ್ರಗಳತ್ತ ನಮ್ಮ ದೇಶವೂ ಗಮನ ಹರಿಸಬೇಕು. ಸುಮಾರು 3 ಎಕರೆ ಭೂಮಿ ಹೊಂದಿರುವ ರೈತ ತನ್ನ ಕುಟುಂಬದ ಶಿಕ್ಷಣ, ಆರೋಗ್ಯ ಮತ್ತು ಇತರ ಅವಶ್ಯಕತೆಗಳನ್ನು ಅಷ್ಟರಲ್ಲೇ ಪೂರೈಸುವುದು ಹೇಗೆ? ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ರೈತನಿಗೆ ಕೈಗೆಟುಕುವಂತೆ ಮಾಡಬೇಕು. ಆದರೆ, ಹೊಸ ಕಾನೂನುಗಳು ರೈತನ ಪರಿಸ್ಥಿತಿಯನ್ನು ಸುಧಾರಿಸುವ ಬದಲು, ಅವನನ್ನು ಇನ್ನಷ್ಟು ಶೋಚನೀಯ ಸ್ಥಿತಿಗೆ ಎಳೆಯಲು ಒಲವು ತೋರಿಸಿವೆ.

Last Updated : Dec 23, 2020, 9:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.