ETV Bharat / bharat

ಚಿಲ್ಲಾ ಗಡಿಯಲ್ಲಿನ ಪ್ರತಿಭಟನೆ ಹಿಂಪಡೆದ ಭಾರತೀಯ ಕಿಸಾನ್ ಯೂನಿಯನ್

ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಹಿಂಸಾಚಾರದ ನಂತರ ರೈತರ ಚಳವಳಿ ದುರ್ಬಲಗೊಂಡಿದೆ. ಅಲ್ಲದೇ ಮಂಗಳವಾರ ನಡೆದ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಹಿಂಸಾತ್ಮಕ ಘಟನೆಗಳು ಹಾಗೂ ರಾಷ್ಟ್ರಧ್ವಜಕ್ಕೆ ಅವಮಾನವಾದ ಕಾರಣ ಭಾನು ಬಣ ಮುಷ್ಕರ ಹಿಂತೆಗೆದುಕೊಂಡಿದೆ.

ಚಿಲ್ಲಾ ಗಡಿಯಲ್ಲಿನ ಪ್ರತಿಭಟನೆ
ಚಿಲ್ಲಾ ಗಡಿಯಲ್ಲಿನ ಪ್ರತಿಭಟನೆ
author img

By

Published : Jan 28, 2021, 11:04 AM IST

ನವದೆಹಲಿ: ಚಿಲ್ಲಾ ಗಡಿಯಲ್ಲಿ ಸುಮಾರು ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕಿಸಾನ್ ಯೂನಿಯನ್ ಬುಧವಾರದಿಂದ ಮುಷ್ಕರವನ್ನು ಹಿಂತೆಗೆದುಕೊಂಡಿದೆ.

ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಹಿಂಸಾಚಾರದ ನಂತರ ರೈತರ ಚಳವಳಿ ದುರ್ಬಲಗೊಂಡಿದೆ. ಅಲ್ಲದೇ ಮಂಗಳವಾರ ನಡೆದ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಹಿಂಸಾತ್ಮಕ ಘಟನೆಗಳು ಹಾಗೂ ರಾಷ್ಟ್ರಧ್ವಜಕ್ಕೆ ಅವಮಾನವಾದ ಕಾರಣ ಭಾನು ಬಣ ಮುಷ್ಕರವನ್ನು ಹಿಂತೆಗೆದುಕೊಂಡಿದೆ.

ಭಾರತೀಯ ಕಿಸಾನ್ ಯೂನಿಯನ್ (ಭಾನು) ರಾಷ್ಟ್ರೀಯ ಅಧ್ಯಕ್ಷ ಠಾಕೂರ್ ಭಾನು ಪ್ರತಾಪ್ ಸಿಂಗ್ ಚಿಲ್ಲಾ ಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಿಂಸಾತ್ಮಕ ದಾಳಿ ನಡೆಸಲಾಗಿದೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿದೆ. ಒಂದು ನಿರ್ದಿಷ್ಟ ಧರ್ಮದ ಧ್ವಜವನ್ನು ಕೆಂಪು ಕೋಟೆಯಲ್ಲಿ ಹಾರಿಸಿದ ರೀತಿ ಕೂಡ ದುಃಖಕರವಾದ ಸಂಗತಿ ಎಂದು ಹೇಳಿದರು.

ಓದಿ:ರೈತರ ದಂಗಲ್​: ಆಸ್ಪತ್ರೆಯಲ್ಲಿರುವ ಪೊಲೀಸರ ಭೇಟಿಯಾಗಲಿರುವ ಅಮಿತ್​ ಶಾ

ಭಾರತದ ಧ್ವಜ ತ್ರಿವರ್ಣವಾಗಿದೆ ಮತ್ತು ನಾವು ಅದನ್ನು ಗೌರವಿಸುತ್ತೇವೆ. 58 ದಿನಗಳ ಬಳಿಕ ಪ್ರತಿಭಟನೆಯನ್ನು ಕೊನೆಗೊಳಿಸುತ್ತಿದ್ದೇವೆ ಎಂದು ಠಾಕೂರ್ ಭಾನು ಪ್ರತಾಪ್ ಸಿಂಗ್ ಹೇಳಿದರು.

ರೈತರು ಪ್ರತಿಭಟನೆಯನ್ನು ಕೈಬಿಡಲು ನಿರ್ಧರಿಸಿದ್ದು, ಸ್ವಲ್ಪ ಸಮಯದಲ್ಲಿ ಇಲ್ಲಿಂದ ತೆರಳಲಿದ್ದಾರೆ. ಇಲ್ಲಿ ಹಾಕಲಾಗಿರುವ ಟೆಂಟ್​ನನ್ನು ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಣವಿಜಯ್ ಸಿಂಗ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.