ETV Bharat / state

ಅಪಾಯಕಾರಿ ವೈರಸ್ ಅಲ್ಲ, ಆದರೂ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ: ಸಿಎಂ ಸಿದ್ದರಾಮಯ್ಯ - CM SIDDARAMAIAH

ಸಿಎಂ ಸಿದ್ದರಾಮಯ್ಯ ಅವರು HMPV ವೈರಸ್​ ಕುರಿತು ಮಾತನಾಡಿದರು.

cm-siddaramaiah
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Jan 6, 2025, 3:05 PM IST

Updated : Jan 6, 2025, 4:39 PM IST

ಬೆಂಗಳೂರು : ಹೆಚ್​ಎಂಪಿವಿ ಅಪಾಯಕಾರಿ ವೈರಸ್ ಅಲ್ಲ, ಆದರೂ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಚೈನಾ ವೈರಸ್ ಕಾಣಿಸಿಕೊಂಡಿದೆ. ಕರ್ನಾಟಕಕ್ಕೆ HMPV ವೈರಸ್ ಬಂದಿದೆ ಎಂಬ ಮಾಹಿತಿ ಬಂದಿದೆ. ಮುಂಜಾಗ್ರತಾ ಕ್ರಮಕ್ಕೆ ಆರೋಗ್ಯ ಇಲಾಖೆಗೆ ದಿನೇಶ್ ಗುಂಡೂರಾವ್ ಅವರಿಗೆ ಸೂಚನೆ ಕೊಟ್ಟಿದ್ದೇನೆ. ಈಗಾಗಲೇ ಇದರ ಬಗ್ಗೆ ಸಭೆ ನಡೆಯುತ್ತಿದೆ. ಈ ವೈರಸ್ ಎರಡು ಮಕ್ಕಳಲ್ಲಿ ಕಾಣಿಸಿಕೊಂಡಿದೆ ಎಂದರು.

ಆರೋಗ್ಯ ಇಲಾಖೆಯವರು ಏನೇನು ಕ್ರಮ ಕೈಗೊಳ್ಳಬೇಕು ಮಾಡ್ತಾರೆ. ಸಚಿವ ದಿನೇಶ್ ಗುಂಡೂರಾವ್ ಸಭೆ ಮಾಡ್ತಿದ್ದಾರೆ. ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಸಭೆ ನಡೆಸ್ತಿದೆ ಎಂದರು.

ಸಿಎಂ ಸಿದ್ದರಾಮಯ್ಯ ಮಾತನಾಡಿದರು (ETV Bharat)

ವಿದೇಶದಿಂದ ಬರುವವರೆಗೆ ಸ್ಕ್ರೀನಿಂಗ್ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನೋಡೋಣ, ಆರೋಗ್ಯ ಇಲಾಖೆಯವರು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನ ತೆಗೆದುಕೊಳ್ಳುವುದಕ್ಕೆ ಹೇಳಿದ್ದೇನೆ. ಸರ್ಕಾರ ಏನೇನು ಕ್ರಮ ಬೇಕೋ ಅದನ್ನು ತೆಗೆದುಕೊಳ್ಳುತ್ತದೆ. ದಿನೇಶ್ ಗುಂಡೂರಾವ್ ಸಭೆ ಮಾಡುತ್ತಿದ್ದಾರೆ, ಅಗತ್ಯ ಬಿದ್ದರೆ ನಾನು ಸಭೆ ಮಾಡುತ್ತೇನೆ ಎಂದರು.

ನಕ್ಸಲರ ಶರಣಾಗತಿ ವಿಚಾರವಾಗಿ ಪ್ರತಿಕ್ರಿಯಿಸಿ, ನಕ್ಸಲರಿಗೆ ಶರಣಾಗಿ ಎಂದು ನಾನೇ ಕರೆ ಕೊಟ್ಟಿದ್ದೇನೆ. ಬಹುಶಃ ಅವರ ಮನಃ ಪರಿವರ್ತನೆ ಆಗುತ್ತೆ ಅಂತ ನಾನು ಅಂದುಕೊಂಡಿದ್ದೇನೆ. ನನ್ನೊಂದಿಗೆ ಮಾತನಾಡಿಲ್ಲ, ಮನಃ ಪರಿವರ್ತನೆ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.

ಏನಿದು HMPV ವೈರಸ್​? ಹೇಗೆ ಹರಡುತ್ತೆ?: ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಎಂಬುದು ಉಸಿರಾಟಕ್ಕೆ ಸಂಬಂಧಿಸಿದ ವೈರಸ್. ಹೆಚ್ಚಿನ ಜನರಲ್ಲಿ ಕಡಿಮೆ ತೀವ್ರತೆಯ (ಶೀತ ತರಹದ ಲಕ್ಷಣ) ರೋಗಲಕ್ಷಣಗಳು ಕಂಡುಬರುತ್ತವೆ. ಅಲ್ಲದೆ ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾದಂತಹ ತೀವ್ರ ಲಕ್ಷಣಗಳು ಕಾಣಿಸುತ್ತವೆ.

ರೋಗ ಲಕ್ಷಣಗಳೇನು?:

  • ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ತಿಳಿಸುವ ಪ್ರಕಾರ, HMPV ವೈರಸ್ ರೋಗಲಕ್ಷಣಗಳು ಚಳಿಗಾಲದಲ್ಲಿ ಸಾಮಾನ್ಯವಾದ ಇತರ ವೈರಲ್ ಸೋಂಕುಗಳಂತೆಯೇ ಇರುತ್ತವೆ.
  • ಜ್ವರ, ಕೆಮ್ಮು, ಮೂಗು ಕಟ್ಟುವಿಕೆ, ಉಸಿರಾಟದ ಸಮಸ್ಯೆಯಾಗುತ್ತದೆ.
  • ಸೋಂಕಿನ ಕ್ಲಿನಿಕಲ್ ರೋಗಲಕ್ಷಣಗಳು ಹೆಚ್ಚಾಗುತ್ತವೆ, ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ವೈರಸ್​ ಉಸಿರಾಟದ ಸೋಂಕುಗಳಿಗೂ ಕಾರಣವಾಗುವಂತಹ ಇತರ ವೈರಸ್‌ಗಳಂತೆ ಇದೆ.
  • ಸೋಂಕಿನ ತೀವ್ರತೆ 2ರಿಂದ 6 ದಿನಗಳವರೆಗೆ ಇರುತ್ತದೆ. ಸೋಂಕಿಗೆ ಒಳಗಾದವರಲ್ಲಿ ಮೂರರಿಂದ ಆರು ದಿನಗಳ ಬಳಿಕ ಈ ವೈರಸ್​ನ ರೋಗಲಕ್ಷಣಗಳು ಕಂಡುಬರುತ್ತವೆ.
  • ಅನಾರೋಗ್ಯದ ಸಮಯದಲ್ಲಿ ವೈರಸ್​ನ ಅದರ ತೀವ್ರತೆ ಅವಲಂಬಿಸಿ ಬದಲಾಗುವ ಸಾಧ್ಯತೆ ಇದೆ.

HMPV ವೈರಸ್​ ತಡೆಯುವುದು ಹೇಗೆ?:

  • ಹೊರಗಡೆ ಹೋಗಿ ಮನೆಗೆ ವಾಪಸ್​ ಬಂದಾಗ ಸೋಪು ಅಥವಾ ಸಾಬೂನಿನಿಂದ ಕೈ ತೊಳೆಯಿರಿ.
  • ನಿಮ್ಮ ಕೈಗಳಿಂದ ಆಗಾಗ ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದನ್ನು ತಪ್ಪಿಸಬೇಕು.
  • ಸೋಂಕಿಗೆ ಒಳಗಾದವರೊಂದಿಗೆ ಅಂತರ ಕಾಯ್ದುಕೊಳ್ಳುವುದು ಉತ್ತಮ. ನೀವು ವೈರಸ್‌ನ ಲಕ್ಷಣಗಳನ್ನು ಹೊಂದಿದ್ದರೆ, ಜನರ ಗುಂಪಿನಲ್ಲಿ ಬೆರೆಯಬೇಡಿ.
  • ಕೆಮ್ಮುವಾಗ ಹಾಗೂ ಸೀನುವಾಗ ಕೈ, ಬಾಯಿಯನ್ನು ಮುಚ್ಚಿಕೊಳ್ಳಿ.
  • ಈ ಸೋಂಕಿತರು ಬಳಸಿದ ಕಪ್‌, ತಟ್ಟೆ ಹಾಗೂ ಪಾತ್ರೆಗಳನ್ನು ಉಪಯೋಗಿಸಬೇಡಿ.
  • ಸೋಂಕಿತರು ಅನಾರೋಗ್ಯದ ವೇಳೆಯಲ್ಲಿ ಮನೆಯಲ್ಲೇ ಇರುವುದು ಒಳ್ಳೆಯದು.

ಇದನ್ನೂ ಓದಿ : ಬೆಂಗಳೂರಿನಲ್ಲಿ ಹೆಚ್​ಎಂಪಿವಿ ಸೋಂಕು: ಆರೋಗ್ಯ ಸಚಿವರು ಹೇಳಿದ್ದು ಹೀಗೆ - DINESH GUNDU RAO ON HMPV

Last Updated : Jan 6, 2025, 4:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.