ETV Bharat / bharat

ರಸಗೊಬ್ಬರ ಬಿಕ್ಕಟ್ಟು: ಮಧ್ಯಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಕೃಷಿ ಕ್ಷೇತ್ರಕ್ಕೆ ಹಿನ್ನಡೆ

ಮಧ್ಯಪ್ರದೇಶ, ಹಿಮಾಚಲಪ್ರದೇಶದಲ್ಲಿ ರಸಗೊಬ್ಬರ ಕೊರತೆ ತೀವ್ರವಾಗಿದೆ. ಹಿಂಗಾರು ಹಂಗಾಮು ಶುರುವಾಗಲಿದ್ದು, ಬಿತ್ತನೆಗಾಗಿ ರೈತರು ಯೂರಿಯಾ ಮತ್ತು ಡಿಎಪಿ ರಸಗೊಬ್ಬರ ಬಿಕ್ಕಟ್ಟು ಎದುರಿಸುತ್ತಿದ್ದಾರೆ.

farmers facing problem due to lack of fertilizers
ರಸಗೊಬ್ಬರ ಬಿಕ್ಕಟ್ಟು
author img

By

Published : Nov 29, 2022, 6:52 PM IST

ಹಿಮಾಚಲಪ್ರದೇಶ, ಮಧ್ಯಪ್ರದೇಶ: ಹಿಂಗಾರು ಮಳೆ ಆರಂಭವಾಗಲಿದ್ದು, ಮಧ್ಯಪ್ರದೇಶದ ಮತ್ತು ಹಿಮಾಚಲಪ್ರದೇಶದಲ್ಲಿ ಯೂರಿಯಾ ಕೊರತೆ ಎದುರಾಗಿದೆ. ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ರಸಗೊಬ್ಬರದ ಬಿಕ್ಕಟ್ಟು ಕಾಣಿಸಿಕೊಂಡಿದ್ದು, ರೈತರು ಉಳುಮೆ ಬಿಟ್ಟು ಅಂಗಡಿಗಳ ಸುತ್ತ ಸುತ್ತಬೇಕಿದೆ.

ಮಧ್ಯಪ್ರದೇಶದಲ್ಲಿ ಕೃಷಿಗೆ ಅಗತ್ಯವಿರುವ ಯೂರಿಯಾ, ಡಿಎಪಿ ರಸಗೊಬ್ಬರ ಕೊರತೆ ಹೆಚ್ಚಾಗಿದೆ. ಉದ್ದು, ಸಾಸಿವೆ ಜೊತೆಗೆ ಗೋಧಿ ಬಿತ್ತಲು ರೈತರಿಗೆ ಈ ಗೊಬ್ಬರದ ಅತ್ಯಗತ್ಯ. ರಾಜ್ಯದೆಲ್ಲ ಜಿಲ್ಲೆಗಳಲ್ಲಿ ಗೊಬ್ಬರದ ಬೇಡಿಕೆ ಹೆಚ್ಚಿದ್ದು, ಗುಣ ಜಿಲ್ಲೆಯಲ್ಲಿ ಅತ್ಯಧಿಕ ಅಂದರೆ 10 ಸಾವಿರ ಟನ್ ಡಿಎಪಿ ಕೊರತೆ ಇದೆ. ವಿದಿಶಾದಲ್ಲಿ ಇದುವರೆಗೆ 2917 ಟನ್ ಯೂರಿಯಾ ವಿತರಿಸಲಾಗಿದ್ದು, 2188 ಟನ್ ದಾಸ್ತಾನು ಇದೆ. ಅಶೋಕನಗರ ಜಿಲ್ಲೆಯಲ್ಲಿ ಯೂರಿಯಾ, ಡಿಎಪಿ, ಎನ್‌ಪಿಕೆ ಮತ್ತು ಎಸ್‌ಎಸ್‌ಪಿ ನಾಲ್ಕು ರಸಗೊಬ್ಬರ ಸೇರಿದಂತೆ 70 ಸಾವಿರ ಮೆಟ್ರಿಕ್ ಟನ್ ಅಗತ್ಯವಿದೆ. ಆದರೆ, 37,200 ಮೆಟ್ರಿಕ್ ಟನ್ ಮಾತ್ರ ಸದ್ಯಕ್ಕೆ ಲಭ್ಯವಿದೆ.

ಸರ್ಕಾರ ಹೇಳೋದೇನು?: ರಾಜ್ಯದಲ್ಲಿ ಸಾಕಷ್ಟು ರಸಗೊಬ್ಬರವಿದೆ. ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ 19.09 ಲಕ್ಷ ಟನ್ ಯೂರಿಯಾ, 9.80 ಲಕ್ಷ ಟನ್ ಡಿಎಪಿ, 3.42 ಲಕ್ಷ ಟನ್ ಎನ್​ಪಿಕೆ ಮತ್ತು 8.58 ಲಕ್ಷ ಟನ್ ಎಸ್​ಎಸ್​ಪಿ ರಸಗೊಬ್ಬರ ಬಂದಿದೆ. ಕಳೆದ ವರ್ಷ ಹೆಚ್ಚು ಗೊಬ್ಬರ ಸಂಗ್ರಹಿಸಲಾಗಿತ್ತು. ಪ್ರಸ್ತುತ ಯೂರಿಯಾ 2.51 ಲಕ್ಷ ಟನ್‌, ಡಿಎಪಿ 1.98 ಲಕ್ಷ ಟನ್‌, ಎನ್‌ಪಿಕೆ 1.31 ಲಕ್ಷ ಟನ್‌, ಎಸ್‌ಎಸ್‌ಪಿ 3.50 ಲಕ್ಷ ಟನ್‌ ಗೊಬ್ಬರ ದಾಸ್ತಾನು ಇದೆ. ಈ ತಿಂಗಳಲ್ಲಿ 11.84 ಲಕ್ಷ ಟನ್ ರಸಗೊಬ್ಬರ ಬರುವ ನಿರೀಕ್ಷೆ ಇದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.

ಹಿಮಾಚಲಪ್ರದೇಶದಲ್ಲಿ ಸಿಗ್ತಿಲ್ಲ ರಸಗೊಬ್ಬರ: ಇನ್ನು ಹಿಮಾಚಲಪ್ರದೇಶದಲ್ಲಿ ರಸಗೊಬ್ಬರದ ಬಿಕ್ಕಟ್ಟು ತೀವ್ರಗೊಂಡಿದೆ. 12 ಲಕ್ಷ ರೈತರು ಮತ್ತು ತೋಟಗಾರರಿಗೆ ರಬಿ ಹಂಗಾಮಿನಲ್ಲಿ ಬಿತ್ತನೆ ಮಾಡಲು ಮತ್ತು ಸೇಬಿನ ತೋಟಗಳಿಗೆ ಡಿಎಪಿ, ಯೂರಿಯಾ ಅಗತ್ಯವಿದೆ. ಇದಕ್ಕಾಗಿ ಅಂಗಡಿ, ಸೊಸೈಟಿಗಳಿಗೆ ರೈತರು ಎಡತಾಕುತ್ತಿದ್ದಾರೆ. ಆದರೆ, ಅದರ ಲಭ್ಯತೆ ಮಾತ್ರ ತೀರಾ ಕಡಿಮೆ ಇದೆ ಎಂಬುದು ಆರೋಪ.

ರಸಗೊಬ್ಬರ ಕೊರತೆಯಿಂದ ಗೋದಾಮುಗಳು ಖಾಲಿ ಬಿದ್ದಿವೆ. ಅವರೆ ಕಾಳು, ಆಲೂಗಡ್ಡೆ, ಗೋಧಿ ಇತ್ಯಾದಿ ಬಿತ್ತನೆಗೆ ಸಮಸ್ಯೆ ಶುರುವಾಗಿದೆ. ಇಲ್ಲಿನ ಪ್ರಮುಖ ಬೆಳೆಯಾದ ಸೇಬಿಗೆ ಈಗಿರುವ ದಾಸ್ತಾನು ಸಾಕಾಗುವುದಿಲ್ಲ. ಗೊಬ್ಬರದ ಕೊರತೆ ಕಾರಣ ರೈತರು ಹಾಗೂ ತೋಟಗಾರರು ಇಳುವರಿ ಕುಂಠಿತವಾಗುವ ಸಮಸ್ಯೆ ಎದುರಿಸುವ ಭೀತಿಯಲ್ಲಿದ್ದಾರೆ.

ರಾಜ್ಯದಲ್ಲಿ ಸುಮಾರು 5,200 ಮೆಟ್ರಿಕ್ ಟನ್ ರಸಗೊಬ್ಬರಗಳ ಬೇಡಿಕೆಯಿದೆ. ಆದರೆ, ಪ್ರಸ್ತುತ 2600 ಮೆಟ್ರಿಕ್‌ ಟನ್‌ಗಳಷ್ಟು ಮಾತ್ರ ರಸಗೊಬ್ಬರವಿದೆ. ರಾಜ್ಯಾದ್ಯಂತ 85 ಸಗಟು ಗೋದಾಮುಗಳಲ್ಲಿ ಕಡಿಮೆ ಪ್ರಮಾಣದ ದಾಸ್ತಾನು ಹೊಂದಿದ್ದರೆ, ಇದರಲ್ಲಿ ಕೆಲವು ಖಾಲಿ ಬಿದ್ದಿವೆ.

ಇಫ್ಕೋ ಜೊತೆ 13 ಸಾವಿರ ಟನ್ ರಸಗೊಬ್ಬರ ಒಪ್ಪಂದ: ರಾಜ್ಯದ ರೈತರು ಮತ್ತು ತೋಟಗಾರರ ರಸಗೊಬ್ಬರ ಬೇಡಿಕೆ ಪೂರೈಸಲು ಸರ್ಕಾರ IFFCO ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಯೂರಿಯಾ, ಡಿಎಪಿ ಸೇರಿ 13 ಸಾವಿರ ಟನ್ ಬೇಡಿಕೆ ಇದ್ದರೆ, IFFCO ಸುಮಾರು 8 ಸಾವಿರ ಟನ್ ರಸಗೊಬ್ಬರವನ್ನು ಸದ್ಯ ಪೂರೈಸಲು ಮುಂದಾಗಿದೆ.

ಕಾಳಸಂತೆಯಲ್ಲಿ ಕಾಂಚಾಣ ಕುಣಿತ: ಗೋದಾಮುಗಳಲ್ಲಿ ಗೊಬ್ಬರ ಕೊರತೆ ಕಾರಣ ಕಾಳಸಂತೆಯಲ್ಲಿ ದರ ದುಪ್ಪಟ್ಟಾಗಿದೆ. ಸರ್ಕಾರಿ ಬಿತ್ತನೆ ಸೀಸನ್​ ಕಾರಣ ಇದನ್ನೇ ಬಳಸಿಕೊಂಡ ಕೆಲವರು ಯೂರಿಯಾ ಮತ್ತು ಡಿಎಪಿಯನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ರೈತರು ಅನಿವಾರ್ಯವಾಗಿ ಹೆಚ್ಚಿನ ಬೆಲೆ ನೀಡಿ ಖರೀದಿ ಮಾಡುವಂತಾಗಿದೆ.

ಓದಿ: ಗುಜರಾತ್​ನಲ್ಲಿ ಬಿಜೆಪಿ ಪ್ರಚಾರ ಅಬ್ಬರ.. ಮತದಾರರನ್ನು ಆಕರ್ಷಿಸಿದ ಮೋದಿ ತದ್ರೂಪಿ ಲಾಲ್ಜಿ ದೇವಾರಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.